ಬ್ರೀಫ್ )) ಇಂದು ಎಸ್ ಡಿಎಂನಲ್ಲಿರಾಷ್ಟ್ರೀಯ ವಿಚಾರಸಂಕಿರಣ

Contributed bymahammed.arif@timesgroup.com|Vijaya Karnataka

ಮಂಗಳೂರಿನ ಎಸ್‌ಡಿಎಂ ಬಿಸಿನೆಸ್‌ ಮ್ಯಾನೇಜ್‌ಮೆಂಟ್‌ ಕಾಲೇಜಿನಲ್ಲಿ ಏ.30ರಂದು ರಾಷ್ಟ್ರೀಯ ವಿಚಾರಸಂಕಿರಣ ನಡೆಯಲಿದೆ. 'ಸಿನೆರ್‌ಜೈಸಿಂಗ್‌ ಎಐ ಆ್ಯಂಡ್‌ ಇಂಡಸ್ಟ್ರಿ 5.0: ಹ್ಯುಮನ್‌ ಮೆಷಿನ್‌ ಕೊಲಾಬ್ರೇಷನ್‌ ಫಾರ್‌ ಎ ಸ್ಮಾರ್ಟರ್‌ ಫ್ಯೂಚರ್‌' ಎಂಬುದು ಇದರ ಶೀರ್ಷಿಕೆ. ಎಐ ಮತ್ತು ಇಂಡಸ್ಟ್ರಿ 5.0 ಸಹಯೋಗದ ಬಗ್ಗೆ ಇಲ್ಲಿ ಚರ್ಚೆ ನಡೆಯಲಿದೆ. ಉದ್ಘಾಟನೆ, ದಿಕ್ಸೂಚಿ ಭಾಷಣ, ಸಂವಾದ ಹಾಗೂ ಸಮಾರೋಪ ಸಮಾರಂಭಗಳು ನಡೆಯಲಿವೆ.

national conference at sdm a new era in ai and emerging industries

ವಿಕ ಸುದ್ದಿಲೋಕ ಮಂಗಳೂರು

ನಗರದ ಎಸ್ ಡಿಎಂ ಬಿಸಿನೆಸ್ ಮ್ಯಾನೇಜ್ ಮೆಂಟ್ ಕಾಲೇಜಿನ ಸ್ನಾತಕೋತ್ತರ ನಿರ್ವಹಣಾ ಅಧ್ಯಯನ ಮತ್ತು ಸಂಶೋಧನಾ ಕೇಂದ್ರದಲ್ಲಿ‘ಸಿನೆರ್ ಜೈಸಿಂಗ್ ಎಐ ಆ್ಯಂಡ್ ಇಂಡಸ್ಟ್ರಿ 5.0: ಹ್ಯುಮನ್ ಮೆಷಿನ್ ಕೊಲಾಬ್ರೇಷನ್ ಫಾರ್ ಎ ಸ್ಮಾರ್ಟರ್ ಫ್ಯೂಚರ್ ’ ಎಂಬ ರಾಷ್ಟ್ರೀಯ ವಿಚಾರಸಂಕಿರಣ ಏ.30ರಂದು ನಡೆಯಲಿದೆ.

ಸಂಸ್ಥೆಯ ನಿರ್ದೇಶಕಿ ಡಾ.ಸೀಮಾ ಎಸ್ . ಶೆಣೈ ಅಧ್ಯಕ್ಷತೆ ವಹಿಸಲಿದ್ದಾರೆ. ಎಬಿಬಿ ಇಂಡಿಯಾ ಲಿ.ನ ಡಿಜಿಟಲ್ ವಿಭಾಗದ ಉಪಾಧ್ಯಕ್ಷ ಪ್ರಸನ್ನ ದೇಶಪಾಂಡೆ ವಿಚಾರಸಂಕಿರಣ ಉದ್ಘಾಟಿಸಲಿದ್ದಾರೆ. ಮುಂಬಯಿಯ ಕೌರ್ಸೆರಾ ಸಂಸ್ಥೆಯ ಜಾಗತಿಕ ಗ್ರಾಹಕ ವಕಾಲತ್ತು ಮುಖ್ಯಸ್ಥೆ ಶಿಲ್ಪಾ ಶೆಟ್ಟಿ ಸಿ. ಗೌರವ ಅತಿಥಿಗಳಾಗಿ ಪಾಲ್ಗೊಳ್ಳಲಿದ್ದಾರೆ. ಟಾಟಾ ಟ್ರಸ್ಟ್ ಮಾಜಿ ಸಿಒಒ ಡಾ.ಹರೀಶ್ ಕೃಷ್ಣಸ್ವಾಮಿ ದಿಕ್ಸೂಚಿ ಭಾಷಣ ಮಾಡಲಿದ್ದಾರೆ.

‘ಭಾರತದ ಸಬಲೀಕರಣ: ಸುಸ್ಥಿರತೆಗಾಗಿ ಎಐ’ ವಿಷಯ ಕುರಿತು ಸಂವಾದ ನಡೆಯಲಿದೆ. ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ ಕ್ಲಸ್ಟರ್ ಮುಖ್ಯಸ್ಥ ವೈಶಾಖ್ ಪೈ ಕೆ. ಅಧ್ಯಕ್ಷತೆ ವಹಿಸಲಿದ್ದಾರೆ. ಯೇನೆಪೋಯ ಆಸ್ಪತ್ರೆಯ ಮೂಳೆಚಿಕಿತ್ಸೆ ಮತ್ತು ರೋಬೊಟಿಕ್ ಕೀಲು ಬದಲಿ ಶಸ್ತ್ರಚಿಕಿತ್ಸಕ ಡಾ.ದೀಪಕ್ ರೈ, ಉದ್ಯಮಿ ಮನೋಜ್ , ರಾಜೇಶ್ ಪ್ರಭು ಚರ್ಚೆಯಲ್ಲಿಭಾಗವಹಿಸಲಿದ್ದಾರೆ.

ಸಮಾರೋಪ ಸಮಾರಂಭದಲ್ಲಿಇನ್ಫೋಸಿಸ್ ನ ಹಿರಿಯ ತಾಂತ್ರಿಕ ವಾಸ್ತುಶಿಲ್ಪಿ ಶಂಕರಸುಬ್ಬು ಅರುಣಾಚಲಂ, ಇನ್ಫೋಸಿಸ್ ಮುಡಿಪು ಘಟಕದ ಅಸೋಸಿಯೇಟ್ ಲೀಡ್ ಸ್ನೇಹಲ್ ಭಾಗವಹಿಸಲಿದ್ದಾರೆ.