ಪೆರ್ಲದಲ್ಲಿ ಕೆ. ಸುರೇಂದ್ರನ್ , ಅಣ್ಣಾಮಲೈ ಬೃಹತ್ ರೋಡ್ ಶೋ
ವಿಕ ಸುದ್ದಿಲೋಕ ಪೆರ್ಲ
ವಿಧಾನಸಭಾ ಕ್ಷೇತ್ರದ ಚುನಾವಣೆಯ ಬಹಿರಂಗ ಪ್ರಚಾರಕ್ಕೆ ಮಂಗಳವಾರ ತೆರೆ ಬೀಳಲಿರುವಂತೆಯೇ ಮಂಜೇಶ್ವರ ವಿಧಾನ ಸಭೆ ಕ್ಷೇತ್ರದ ಎನ್ ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಮತ್ತು ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಅವರ ಬೃಹತ್ ರೋಡ್ ಶೋ ಪೆರ್ಲದಲ್ಲಿನಡೆಯಿತು.
ಚೆಂಡೆ, ವಾದ್ಯ ಮೇಳ ಮತ್ತು ಮುತ್ತಿನ ಛತ್ರಿಗಳೊಂದಿಗೆ ಅನೇಕ ಕಾರ ್ಯಕರ್ತರು ಮೆರವಣಿಗೆಯಲ್ಲಿಭಾಗವಹಿಸಿದರು. ಬೆಳಗ್ಗೆ 10.30ಕ್ಕೆ ಪೆರ್ಲ ಚೆಕ್ ಪೋಸ್ಟ್ ನಿಂದ ಆರಂಭವಾದ ರೋಡ್ ಶೋ ಮಧ್ಯಾಹ್ನ 12ರ ವೇಳೆ ಪೆರ್ಲ ಪೇಟೆಯಲ್ಲಿಕೊನೆಗೊಂಡಿತು.
‘‘ಅಭಿವೃದ್ಧಿ ಬಿಜೆಪಿಯ ಮೂಲ ಮಂತ್ರ.ಉತ್ತಮ ಆಡಳಿತ ಅಭಿವೃದ್ಧಿ ಹಾಗೂ ಯುವ ಸಬಲೀಕರಣ ಬಿಜೆಪಿಯ ಗುರಿ. ಕೇರಳದಲ್ಲಿ ಎಲ್ ಡಿಎಫ್ ಮತ್ತು ಯುಡಿಎಫ್ ಮೇಲಿನ ನಂಬಿಕೆಯನ್ನು ಜನರು ಕಳೆದುಕೊಂಡಿದ್ದಾರೆ. ತುಷ್ಟೀಕರಣ ರಾಜಕೀಯದಿಂದ ಇಲ್ಲಿಯ ಜನರು ಬೇಸತ್ತಿದ್ದಾರೆ. ಮುಂದಿನ ವಿಧಾನ ಸಭೆಯಲ್ಲಿ ಸುರೇಂದ್ರನ್ ಇಲ್ಲದಿದ್ದರೆ, ಅದು ಕೇರಳಕ್ಕೆ ತುಂಬಲಾರದ ನಷ್ಟ ’’ಎಂದು ಕೆ. ಅಣ್ಣಾಮಲೈ ಹೇಳಿದರು.
ಹಾಲಿ ಶಾಸಕರು ಹೇಳಿದಂತೆ ಮಂಜೇಶ್ವರದಿಂದ ಸೋಲಲು ಸ್ಪರ್ಧಿಸುತ್ತಿಲ್ಲ. ಮಂಜೇಶ್ವರದ ಸಮಗ್ರ ಅಭಿವೃದ್ಧಿಯ ಮೂಲಕ ಮಂಜೇಶ್ವರದ ಜನರನ್ನು ಗೆಲ್ಲಿಸಲು ಸ್ಪರ್ಧಿಸುತ್ತಿದ್ದೇನೆ ಎಂದು ಎನ್ ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಹೇಳಿದರು.
ಸುಳ್ಯ ಶಾಸಕಿ ಭಾಗೀರಥಿ ಮುರುಳ್ಯ, ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ.ಭರತ್ ಶೆಟ್ಟಿ, ಕರ್ನಾಟಕ ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್ ಬೊಟ್ಯಾಡಿ, ಅಡ್ವ.ಕೆ. ಶ್ರೀಕಾಂತ್ , ವಿಜಯ ಕುಮಾರ್ ರೈ, ಬಾಲಕೃಷ್ಣ ಶೆಟ್ಟಿ, ಸ್ಥಳೀಯ ಮುಖಂಡರು ರೋಡ್ ಶೋನಲ್ಲಿಭಾಗವಹಿಸಿದರು.
ಕಾಂಗ್ರೆಸ್ , ಸಿಪಿಎಂ ಮುಖಂಡರು ಬಿಜೆಪಿ ಸೇರ್ಪಡೆ
ಮಹಿಳಾ ಕಾಂಗ್ರೆಸ್ ಮಂಡಲ ಅಧ್ಯಕ್ಷೆ ಜಲಜಾಕ್ಷಿ, ಸಿಪಿಎಂ ಸ್ಥಳಳೀಯ ಸಮಿತಿ ಸದಸ್ಯ, ಬ್ರ್ಯಾಂಚ್ ಕಾರ್ಯದರ್ಶಿ ರಮೇಶ್ಚಂದ್ರ ರೈ ಶೇಣಿ, ವಿನೋದ್ ಕುಮಾರ್ ಕಾಟುಕುಕ್ಕೆ, ಪ್ರಜ್ವಲ್ ಕಾಟುಕುಕ್ಕೆ, ಶರತ್ , ಸಚಿತ್ , ರಾಜೇಶ್ ಸ್ವರ್ಗ ಸಹಿತ ಕಾಂಗ್ರೆಸ್ , ಸಿಪಿಐ, ಸಿಪಿಐ(ಎಂ) ಕಾರ ್ಯಕರ್ತರು ಬಿಜೆಪಿಗೆ ಸೇರ್ಪಡೆಗೊಂಡರು.
.....
( 7 ಪಿಎಲ್ ರೋಡ್ :
ಎನ್ ಡಿಎ ಅಭ್ಯರ್ಥಿ ಕೆ. ಸುರೇಂದ್ರನ್ ಮತ್ತು ತಮಿಳುನಾಡು ಬಿಜೆಪಿ ಮಾಜಿ ಅಧ್ಯಕ್ಷ ಕೆ. ಅಣ್ಣಾಮಲೈ ಪೆರ್ಲದಲ್ಲಿರೋಡ್ ಶೋ ನಡæಸಸಿದರು.
7 ಪಿಎಲ್ ರೋಡ್ 1
7 ಪಿಎಲ್ ರೋಡ್ 2 )

