ವಿಕ ಸುದ್ದಿಲೋಕ ಸಿದ್ದಾಪುರ
ಚಿರತೆ ದಾಳಿಗೆ ಹಸು ಗಂಭೀರವಾದ ಗಾಯಗೊಂಡ ಘಟನೆ ಸಿದ್ದಾಪುರ ಸಮೀಪದ ಕೂಡುಗದ್ದೆಯಲ್ಲಿನಡೆದಿದೆ.
ಕೂಡುಗದ್ದೆ ನಿವಾಸಿ ಉಮೇಶ್ ಎಂಬುವರು ರಾತ್ರಿ ಸಮಯದಲ್ಲಿಕೊಟ್ಟಿಗೆಯಿಂದ ಹಸುವಿನ ಚೀರಾಟವನ್ನು ಕೇಳಿ ಹೊರಬಂದು ನೋಡಿದ ಸಂದರ್ಭದಲ್ಲಿಚಿರತೆಯು ಹಸುವಿನ ಮೇಲೆ ದಾಳಿ ನಡೆಸುತ್ತಿರುವ ದೃಶ್ಯ ಕಂಡುಬಂದಿದೆ. ಹಸುವಿನ ಮಾಲೀಕನನ್ನು ಕಂಡೊಡನೆ ಚಿರತೆಯು ಕತ್ತಲೆಯಲ್ಲಿಮರೆಯಾಗಿದೆ. ಚಿರತೆ ದಾಳಿಯಿಂದ ಹಸುವಿಗೆ ಗಂಭೀರವಾದ ಗಾಯವಾಗಿದ್ದು, ಚಿಕಿತ್ಸೆ ನೀಡಲಾಗಿದೆ. ಕೂಡಲೇ ಅರಣ್ಯಾಧಿಕಾರಿಗಳಿಗೆ ಕರೆ ಮಾಡಿ ಘಟನೆಯ ಕುರಿತು ಮಾಹಿತಿ ನೀಡಿದ ಹಿನ್ನೆಲೆಯಲ್ಲಿವಿರಾಜಪೇಟೆ ಉಪವಲಯ ಅರಣ್ಯಾಧಿಕಾರಿ ಸಂಜಿತ್ ಸೋಮಯ್ಯ ಭೇಟಿ ನೀಡಿ ಪರಿಶೀಲಿಸಿದರು.
ಪೊಟೋ :- ಚಿರತೆ ದಾಳಿಗೆ ಸಿಲುಕಿ ಗಂಭೀರವಾದ ಗಾಯಗೊಂಡ ಹಸು.

