** ಬೋರ್ಡ್ ಗಿಂತ ಜೆಇಇಯೇ ಗುರಿ ಇತ್ತು: ಪ್ರಿನ್ಸಿಲ್ಲಾಕಾರ್ಡೋಜಾ

Contributed bystevan.rego@timesgroup.com|Vijaya Karnataka

ಮಂಗಳೂರಿನ ಪ್ರಿನ್ಸಿಲ್ಲಾ ಕಾರ್ಡೋಜಾ ಬೋರ್ಡ್ ಪರೀಕ್ಷೆಯಲ್ಲಿ 599 ಅಂಕಗಳೊಂದಿಗೆ ರಾಜ್ಯಕ್ಕೆ ಟಾಪರ್ ಆಗಿದ್ದಾರೆ. ಅವರ ಮುಖ್ಯ ಗುರಿ ಜೆಇಇ ಪರೀಕ್ಷೆಯಾಗಿತ್ತು. ಸುರತ್ಕಲ್ ಎನ್‌ಐಟಿಯಲ್ಲಿ ಉನ್ನತ ಶಿಕ್ಷಣ ಪಡೆಯಲು ಅವರು ನಿರ್ಧರಿಸಿದ್ದಾರೆ. ಈ ಹಿಂದೆ ಸಿಬಿಎಸ್‌ಇಯಲ್ಲಿಯೂ ಉತ್ತಮ ಅಂಕ ಗಳಿಸಿದ್ದರು. ಅವರ ಸಾಧನೆ ಇತರ ವಿದ್ಯಾರ್ಥಿಗಳಿಗೆ ಸ್ಫೂರ್ತಿಯಾಗಿದೆ.

state topper in science the triumph of princilla cardoza

ಮಂಗಳೂರು: ಬೋರ್ಡ್ ಪರೀಕ್ಷೆಗಿಂತ ಜೆಇಇ ಪರೀಕ್ಷೆಯೇ ಮೊದಲ ಗುರಿಯಾಗಿತ್ತು. ಪಿಯು ಪರೀಕ್ಷೆ ಬರೆಯುವಾಗಲೇ ಟಾಪರ್ ಬರುವ ನಿರೀಕ್ಷೆ ಇತ್ತು ಎನ್ನುತ್ತಾರೆ ವಿಜ್ಞಾನ ವಿಭಾಗದಲ್ಲಿ599 ಅಂಕ ಗಳಿಸಿ ರಾಜ್ಯಕ್ಕೇ ಟಾಪರ್ ಆಗಿರುವ ಮಂಗಳೂರು ಆಕಾಶಭವನದ ಸಿಎಫ್ ಎಎಲ್ ಪಿಯು ಕಾಲೇಜು ವಿದ್ಯಾರ್ಥಿನಿ ಪ್ರಿನ್ಸಿಲ್ಲಾಕಾರ್ಡೋಜಾ .

ಇವರು ಕೊಡಿಯಾಲ್ ಬೈಲ್ ನಿವಾಸಿ, ಸೌದಿ ಅರೇಬಿಯಾದ ಉದ್ಯೋಗಿ ಬೆನೆಡಿಕ್ಟ್ ಪ್ರಕಾಶ್ ಕಾರ್ಡೋಜಾ ಹಾಗೂ ಜೆಸಿಂತಾ ಕಾರ್ಡೋಜಾ ಅವರ ಪುತ್ರಿ.

ಜೆಇಇ ಪರೀಕ್ಷೆಯಲ್ಲಿಉತ್ತಮ ಅಂಕಗಳನ್ನು ಪಡೆಯುವ ಮೂಲಕ ಸುರತ್ಕಲ್ ಎನ್ ಐಟಿಕೆಗೆ ಹೋಗಬೇಕು ಎಂಬ ನಿರ್ಧಾರ ಕೈಗೊಂಡಿದ್ದಾರೆ. ಈ ಹಿಂದೆ ಸಿಬಿಎಸ್ ಇಯಲ್ಲಿಶೇ.97.6 ಅಂಕಗಳೊಂದಿಗೆ ಉತ್ತಮ ಅಂಕಗಳನ್ನು ಪಡೆದುಕೊಂಡಿದ್ದರು.

ಫೊಟೋ: 9ಎಂ-ಪ್ರಿನ್ಸಿಲ್ಲಾಕಾರ್ಡೋಜಾ