ದಿನಭವಿಷ್ಯ 01 ಮೇ 2026

Contributed bynetravati.krishnamurthy@timesgroup.com|Vijaya Karnataka

ಮೇ 1, 2026 ರಂದು ಮೇಷ ರಾಶಿಯವರಿಗೆ ಗುಂಪಾಗಿ ಕೆಲಸ ಮಾಡುವುದರಿಂದ ಯಶಸ್ಸು ಸಿಗಲಿದೆ. ವೃಷಭ ರಾಶಿಯವರಿಗೆ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟದಲ್ಲಿ ಲಾಭ. ಮಿಥುನ ರಾಶಿಯವರು ವಾಹನ ಮಾರಾಟದ ಯೋಚನೆ ಮುಂದೂಡಬೇಕು. ಕಟಕ ರಾಶಿಯವರಿಗೆ ಭೂಮಿ ವ್ಯವಹಾರದಲ್ಲಿ ಲಾಭ. ಸಿಂಹ ರಾಶಿಯವರಿಗೆ ಮನರಂಜನೆಗೆ ಖರ್ಚು. ಕನ್ಯಾ ರಾಶಿಯವರಿಗೆ ವಸ್ತು ನಷ್ಟದ ಸಾಧ್ಯತೆ. ತುಲಾ ರಾಶಿಯವರಿಗೆ ಹಾಲು ಉತ್ಪನ್ನ ಮಾರಾಟದಲ್ಲಿ ಆದಾಯ. ವೃಶ್ಚಿಕ ರಾಶಿಯವರು ಭವಿಷ್ಯದ ಬಗ್ಗೆ ಗಮನ ಹರಿಸಬೇಕು. ಧನು ರಾಶಿಯವರು ಸಮಯ ನಿರ್ವಹಣೆಯಲ್ಲಿ ವೇಗವಾಗಿ ಕೆಲಸ ಮಾಡಬೇಕು.

horoscope predictions for may 1 2026 changes in your stars

ದಿನಭವಿಷ್ಯ 1 ಮೇ 2026

ಶ್ರೀಪತಿ ಭಟ್ | ಬೆಂಗಳೂರು

=============

(ಮಿಥುನ, ಕನ್ಯಾ, ಮೀನ-ಈ ರಾಶಿಯವರಿಗೆ ಸ್ಥಾನ ಪಲ್ಲಟ ಯೋಗ)

--------

ಮೇಷ: ಕೆಲಸದಲ್ಲಿಎಲ್ಲರನ್ನೂ ಜೊತೆಗೂಡಿಸಿಕೊಂಡು ಗುಂಪಾಗಿ ಕೆಲಸ ನಿರ್ವಹಿಸುವುದರಿಂದ ಶೀಘ್ರ ಮುಗಿಸುವಿರಿ. ನಿರ್ದಿಷ್ಟ ಗುರಿ ಮತ್ತು ಕಠಿಣ ಶ್ರಮವು ಯಶಸ್ಸಿನತ್ತ ಕೊಂಡೊಯ್ಯಲಿದೆ. ಮಾತಿನ ಕೌಶಲ್ಯದಿಂದ ಕಾರ್ಯಸಾಧನೆ.

(ಶುಭ ಸಂಖ್ಯೆ : 9, ಅದೃಷ್ಟ ಬಣ್ಣ : ಬಿಳಿ)

------------

ವೃಷಭ : ಕಂಪ್ಯೂಟರ್ ಬಿಡಿ ಭಾಗಗಳಂತಹ ಎಲೆಕ್ಟ್ರಾನಿಕ್ ವಸ್ತುಗಳ ಮಾರಾಟಗಾರರಿಗೆ ಮತ್ತು ರಿಪೇರಿ ಮಾಡುವವರಿಗೆ ಅಧಿಕ ಆದಾಯ. ಮಾನಸಿಕ ಅಸ್ಥಿರತೆಯಿಂದ ಕಾರ್ಯಗಳಲ್ಲಿದ್ದ ಉದಾಸೀನತೆ ದೂರಾಗಲಿವೆ.

(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಹಳದಿ)

-----------

ಮಿಥುನ: ವಾಹನ ಮಾರಾಟದ ಯೋಚನೆಯಲ್ಲಿರುವವರು ಆ ಯೋಚನೆಯನ್ನು ಸದಸ್ಯದ ಮಟ್ಟಿಗೆ ಕೈ ಬಿಡುವುದೇ ಸರಿಯಾದ ಮಾರ್ಗ. ಸಮಸ್ಯೆಗಳನ್ನು ಸ್ನೇಹಿತರೊಂದಿಗೆ ಚರ್ಚಿಸಿದಲ್ಲಿಪರಿಹಾರ ಸಿಗಲಿದೆ.

(ಶುಭ ಸಂಖ್ಯೆ : 5, ಅದೃಷ್ಟ ಬಣ್ಣ : ನೀಲಿ)

-----------

ಕಟಕ : ಜಮೀನು ಖರೀದಿ ಅಥವಾ ನಿವೇಶನಗಳ ಖರೀದಿಯ ವ್ಯವಹಾರಗಳಿಂದ ಲಾಭ ಪಡೆದುಕೊಳ್ಳುವಲ್ಲಿಯಶಸ್ವಿಯಾಗುವಿರಿ. ಜವಾಬ್ದಾರಿ ನಿಭಾಯಿಸಲು ಶ್ರಮ ಪಡೆಬೇಕಾಗಿಲ್ಲ.

(ಶುಭ ಸಂಖ್ಯೆ : 3, ಅದೃಷ್ಟ ಬಣ್ಣ : ಹಸಿರು)

------

ಸಿಂಹ : ಸುತ್ತಮುತ್ತಲಿನ ಜನರು ನಾಟಕ ಮಾಡುತ್ತಿದ್ದಾರೆ ಎಂದು ತಿಳಿದರೂ ಏನೂ ಮಾಡದ ಪರಿಸ್ಥಿತಿಯನ್ನು ಹೊಂದುವಿರಿ. ಮನರಂಜನೆಗಾಗಿ ಅಧಿಕ ಮಟ್ಟದಲ್ಲಿಖರ್ಚು ಮಾಡುವಿರಿ. ಧನಾಗಮನ ನಿರಂತರವಾಗಿ ಇರಲಿದೆ.

(ಶುಭ ಸಂಖ್ಯೆ : 1, ಅದೃಷ್ಟ ಬಣ್ಣ : ಖಾಕಿ)

--------------

ಕನ್ಯಾ : ಬಳಕೆಯ ಜ್ಞಾನದ ಕೊರತೆಯಿಂದಾಗಿ ಅಥವಾ ಅತಿಯಾದ ಬಳಕೆಯಿಂದಾಗಿ ವಸ್ತು ನಷ್ಟವಾಗಬಹುದು. ಶ್ರೇಯಸ್ಸು ನಿಮ್ಮನ್ನು ಹುಡುಕಿಕೊಂಡು ಬರುವುದರಿಂದ ಸಂತಸ ಸಿಗಲಿದೆ.

(ಶುಭ ಸಂಖ್ಯೆ : 8, ಅದೃಷ್ಟ ಬಣ್ಣ : ಆಕಾಶ ನೀಲಿ)

------------------

ತುಲಾ : ವಿಚಾರಗಳನ್ನು ಭಿನ್ನ ದೃಷ್ಟಿಯಿಂದ ನೋಡುವ ಅಭ್ಯಾಸದಿಂದ ನಷ್ಟವಾಗುವ ವಿಚಾರದಲ್ಲಿಜವಾಬ್ದಾರಿ ವಹಿಸಬಹುದು. ಹಾಲು ಉತ್ಪನ್ನ ಪದಾರ್ಥಗಳ ಮಾರಾಟದಿಂದ ವರಮಾನ ಹೆಚ್ಚುವುದು.

(ಶುಭ ಸಂಖ್ಯೆ : 2, ಅದೃಷ್ಟ ಬಣ್ಣ : ಗುಲಾಬಿ)

------------

ವೃಶ್ಚಿಕ : ಸಹವರ್ತಿಗಳ ಅಭಿಪ್ರಾಯವನ್ನು ತಿರಸ್ಕರಿಸುವುದು ಸರಿಯಲ್ಲ. ಆಲಿಸಿ ಉಪಯೋಗಕ್ಕೆ ಬರುವ ಅಂಶವನ್ನು ಸ್ವೀಕರಿಸಿ. ಇಂದಿನ ಸಂತೋಷದ ಬಗ್ಗೆ ಗಮನ ಕೊಡುವುದರಕ್ಕಿಂತ ಭವಿಷ್ಯದ ಬಗ್ಗೆ ಗಮನ ಹರಿಸಿ. ಪರಿವರ್ತನೆಗೆ ಸಕಾಲ.

(ಶುಭ ಸಂಖ್ಯೆ :6, ಅದೃಷ್ಟ ಬಣ್ಣ : ಗಾಢ ನೇರಳೆ.)

---------------

ಧನು : ಸಮಯವನ್ನು ಇನ್ನೊಬ್ಬರಿಗಾಗಿ ಬಳಸಬೇಕಾದ ಕಾರಣದಿಂದ ದೈನಂದಿನ ರೀತಿ-ರಿವಾಜುಗಳನ್ನು ಉಳಿಸಿಕೊಳ್ಳುವುದಕ್ಕೆ ವೇಗವಾಗಿ ಕೆಲಸ ಮಾಡಬೇಕಾಗುತ್ತದೆ.

(ಶುಭ ಸಂಖ್ಯೆ :4, ಅದೃಷ್ಟ ಬಣ್ಣ : ಕಂಚು)

----------

ಮಕರ :ಕಥೆಗಾರರು, ಕಾದಂಬರಿಕಾರರು ಅನುಭವಕ್ಕೆ ಬರುವ ಘಟನೆಗಳನ್ನು ಬರವಣಿಗೆಯಲ್ಲಿತರುವ ಪ್ರಯತ್ನವನ್ನು ನಡೆಸಬಹುದು. ವೈವಾಹಿಕ ವಿಚಾರದಲ್ಲಿಮನೋಭಿಲಾಷೆಗಳನ್ನು ವ್ಯಕ್ತಪಡಿಸಲು ಹಿಂಜರಿಯಬೇಡಿ.

(ಶುಭ ಸಂಖ್ಯೆ :3, ಅದೃಷ್ಟ ಬಣ್ಣ : ಕೆಂಪು)

-----------------

ಕುಂಭ : ದೈಹಿಕವಾಗಿ ಬಲಾಢ್ಯರಾಗಿರುವ ನಿಮಗೆ ಮಾನಸಿಕವಾಗಿ ದೊಡ್ಡ ಹೊಡೆತ ಬೀಳಲಿದೆ. ನಗದು ವ್ಯವಹಾರವನ್ನು ಮಾಡುವಲ್ಲಿಮೋಸ ಹೋಗುವ ಸಾಧ್ಯತೆಗಳಿವೆ. ಹಿರಿಯರು ಅಭ್ಯುದಯಕ್ಕಾಗಿ ಮಾರ್ಗದರ್ಶನ ನೀಡಲಿದ್ದಾರೆ.

(ಶುಭ ಸಂಖ್ಯೆ :5, ಅದೃಷ್ಟ ಬಣ್ಣ : ಕಪ್ಪು)

------------

ಮೀನ: ಜೀವನಶೈಲಿಯನ್ನು ಸುಸಂಸ್ಕೃತವಾಗಿ ಬದಲಾಯಿಸಿಕೊಳ್ಳಲು ಈ ದಿನದಿಂದ ಆರಂಭಿಸಿ. ಸದಾ ನಿಮ್ಮ ಬೆಂಬಲಕ್ಕೆ ನಿಲ್ಲುವ ಗೆಳೆಯನೊಬ್ಬ ಸಿಗಲಿದ್ದಾನೆ. ಕಫ ಪ್ರಕೃತಿಯ ದೇಹ ಹೊಂದಿರುವವರು ಆರೋಗ್ಯದ ಬಗ್ಗೆ ಜಾಗ್ರತೆ ವಹಿಸಿ.

(ಶುಭ ಸಂಖ್ಯೆ : 7, ಅದೃಷ್ಟ ಬಣ್ಣ : ಕೇಸರಿ)

ಓದಲೇ ಬೇಕಾದ ಸುದ್ದಿ