ಆದ್ಯ, ಶ್ರೇಯಾ ಚಾಂಪಿಯನ್ಸ್

Contributed bymanjunath.gowda@timesgroup.com|Vijaya Karnataka

ಮೈಸೂರಿನಲ್ಲಿ ನಡೆದ ರಾಜ್ಯಮಟ್ಟದ 13 ವರ್ಷದೊಳಗಿನವರ ಚೆಸ್‌ ಚಾಂಪಿಯನ್‌ಷಿಪ್‌ನಲ್ಲಿ ಬೆಂಗಳೂರಿನ ಆದ್ಯ ಗೌಡ ಮುಕ್ತ ವಿಭಾಗದಲ್ಲಿ ಪ್ರಶಸ್ತಿ ಗೆದ್ದರು. ಅವರು 8 ಅಂಕಗಳೊಂದಿಗೆ ಅಗ್ರಸ್ಥಾನ ಪಡೆದರು. ಬೆಂಗಳೂರಿನ ಇಶಾನ್‌ ಭನ್ಸಾಲಿ ರನ್ನರ್‌ ಅಪ್‌ ಆದರು. ಬಾಲಕಿಯರ ವಿಭಾಗದಲ್ಲಿ ಶ್ರೇಯಾ ರಾಜೇಶ್‌ ಮತ್ತು ಇಂದು ಶೀತಲ ಕ್ರಮವಾಗಿ ಮೊದಲ ಎರಡು ಸ್ಥಾನ ಪಡೆದರು. ಶ್ರೇಯಾ ರಾಜೇಶ್‌ ಟೈಬ್ರೇಕರ್‌ ಮೂಲಕ ಪ್ರಶಸ್ತಿ ತಮ್ಮದಾಗಿಸಿಕೊಂಡರು.

adya gowda and shreya rajesh champions in chess tournament

ಮೈಸೂರು : ಬೆಂಗಳೂರಿನ ಆದ್ಯ ಗೌಡ ಇಲ್ಲಿನಡೆದ ರಾಜ್ಯಧಿಧಿಮಟ್ಟದ 13 ವರ್ಷದೊಳಗಿನವರ ಮುಕ್ತ ಮತ್ತು ಬಾಲಕಿಯರ ಚೆಸ್ ಚಾಂಪಿಯನ್ ಷಿಪ್ ನ ಮುಕ್ತ ವಿಭಾಗದಲ್ಲಿಚಾಂಪಿಯನ್ ಪಟ್ಟ ಗೆದ್ದುಕೊಂಡರು. ಬಾಲಕಿಯರಿಗಾಗಿ ಪ್ರತ್ಯೇಕ ವಿಭಾಗವಿದ್ದರೂ ಮುಕ್ತ ವಿಭಾಗದಲ್ಲಿಸ್ಪರ್ಧಿಧಿಸಿದ ಆದ್ಯ ಎಲ್ಲರ ಸವಾಲನ್ನು ಮೆಟ್ಟಿಧಿಧಿಧಿಧಿಧಿಧಿಧಿಧಿನಿಂತು ಒಟ್ಟಾರೆ 8 ಅಂಕಧಿಗಳೊಂದಿಗೆ ಪ್ರಶಸ್ತಿಗೆ ಮುತ್ತಿಧಿಟ್ಟರು. ಬೆಂಗಳೂರಿನ ಇಶಾನ್ ಭನ್ಸಾಲಿ 7.5 ಅಂಕಗಳೊಂದಿಗೆ ರನ್ನರ್ ಅಪ್ ಆದರು. ಬಾಲಕಿಯರ ವಿಭಾಗದಲ್ಲಿಬೆಂಗ ಳೂರಿನ ಶ್ರೇಯಾ ರಾಜೇಶ್ (7.5 ಅಂಕ) ಮತ್ತು ಬೆಂಗಳೂರಿನವರೇ ಆದ ಇಂದು ಶೀತಲ(7.5) ಕ್ರಮವಾಗಿ ಮೊದಲೆರಡು ಸ್ಥಾನಗಳನ್ನು ಹಂಚಿಕೊಂಡರು. ಶ್ರೇಯಾ ರಾಜೇಶ್ ಟೈಬ್ರೇಕರ್ ಮೂಲಕ ಪ್ರಶಸ್ತಿಗೆ ಪಾತ್ರರಾದರು.