ಕುಕನೂರು-02

Contributed byravindra.telagadi@timesgroup.com|Vijaya Karnataka

ಕುಕನೂರು ತಾಲೂಕಿನ ಮಾಳೆಕೊಪ್ಪ ಗ್ರಾಮದಲ್ಲಿ ಜಮಾಂಬಿಕಾ ದೇವಿ ಜಾತ್ರಾ ಮಹೋತ್ಸವ ನಿಮಿತ್ತ ಪಂದ್ಯಾವಳಿ ಆಯೋಜಿಸಲಾಗಿತ್ತು. ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ ಅವರು ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು. ಯುವಕರು ಕ್ರೀಡಾ ಮನೋಭಾವ ಬೆಳೆಸಿಕೊಳ್ಳಬೇಕು. ಇದರಿಂದ ಮಾನಸಿಕ ಹಾಗೂ ದೈಹಿಕ ಬೆಳವಣಿಗೆ ಸಾಧ್ಯವಾಗುತ್ತದೆ. ಮೊಬೈಲ್‌ನಿಂದ ಹೆಚ್ಚಾಗುತ್ತಿರುವ ಒಂಟಿತನವನ್ನು ಕ್ರೀಡೆಗಳು ಕಡಿಮೆ ಮಾಡುತ್ತವೆ. ಇದು ಸ್ನೇಹ ಸಂಬಂಧಗಳನ್ನು ಬೆಳೆಸುತ್ತದೆ.

youth should foster sports mentality special tournament in kuknur

‘ ಕ್ರೀಡಾ ಮನೋಭಾವ ಬೆಳೆಸಿಕೊಳ್ಳಿ’

ಕುಕನೂರು: ‘‘ ಯುವ ಜನತೆ ಕ್ರೀಡಾ ಮನೋಭಾವ ಬೆಳೆಸಿಕೊಳ್ಳುವುದರಿಂದ ಮಾನಸಿಕ ದೈಹಿಕವಾಗಿ ಬೆಳೆಯಲು ಸಾಧ್ಯವಾಗುತ್ತದೆ,’’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ನವೀನ್ ಗುಳಗಣ್ಣವರ ಹೇಳಿದರು.

ಕುಕುನೂರು ತಾಲೂಕಿನ ಮಾಳೆ ಕೊಪ್ಪ ಗ್ರಾಮದಲ್ಲಿ ಜಮಾಂಬಿಕಾ ದೇವಿ ಜಾತ್ರಾ ಮಹೋತ್ಸವ

ನಿಮಿತ್ತ ಆಯೋಜಿಸಿದ್ದ ಪಂದ್ಯಾವಳಿ ಉದ್ಘಾಟಿಸಿ ಬುಧವಾರ ಮಾತನಾಡಿದರು.

‘‘ಕ್ರೀಡಾ ಚಟುವಟಿಕೆಗಳು ಯುವಕರಲ್ಲಿ ಶಕ್ತಿ ಮತ್ತು ಮಾನಸಿಕ ಶಕ್ತಿ ಜತೆಗೆ ಒಂದು ತಂಡವಾಗಿ ಗೆಲ್ಲಬೇಕು. ಮೊಬೈಲ್ ನಿಂದ ಒಂಟಿತನ ಹೆಚ್ಚಾಗುತ್ತಿದ್ದು, ಸ್ನೇಹ ಸಂಬಂಧಗಳೇ ಇಲ್ಲದಂತಾಗಿವೆ.

ಇಂತಹ ಪಂದ್ಯಗಳು ಸ್ನೇಹ ಸಂಬಂಧಗಳನ್ನು ಹೆಚ್ಚಿಸುತ್ತವೆ. ಪ್ರತಿಯೊಬ್ಬರು ಕ್ರೀಡಾ ಮನೋಭಾವನೆ ಬೆಳೆಸಿಕೋಳ್ಳಬೇಕು. ಯುವ ಜನತೆ ಕ್ರೀಡಾ ಆಸಕ್ತಿ ಬೆಳೆಸಿಕೊಳ್ಳಬೇಕು ಎಂದರು.

ಪ್ರಮುಖರಾದ ಸಿದ್ದಣ್ಣ ಜೀವಣ್ಣವರ್ , ರಮೇಶ್ ತಳವಾರ, ರುದ್ರಪ್ಪ ತಳವಾರ, ಮಹೇಶ್ ಪತ್ತಾರ,

ಉಡಚಪ್ಪ ಚಿದಾನಂದ ಉಪಸ್ಥಿತರಿದ್ದರು.

ಪೋಟೊ

ಕುಕುನೂರು ತಾಲೂಕಿನ ಮಾಳೆ ಕೊಪ್ಪ ಗ್ರಾಮದಲ್ಲಿ ಜಮಾಂಬಿಕಾ ದೇವಿ ಜಾತ್ರಾ ಮಹೋತ್ಸವ

ನಿಮಿತ್ತ ಆಯೋಜಿಸಿದ್ದ ಪಂದ್ಯಾವಳಿ ಉದ್ಘಾಟಿಸಿ ಬುಧವಾರ ಮಾತನಾಡಿದರು.