ಕಂಪನಿ ಹೂ ಕುಂಡಧಿದಲ್ಲಿಗಾಂಜಾ ಗಿಧಿಡ; ಪೊಧಿಲೀಧಿಸಧಿರಿಂದ ತಧಿನಿಧಿಖೆ

Contributed bymeghashree0610@gmail.com|Vijaya Karnataka

ಸೋಂಪುರ ಕೈಗಾರಿಕಾ ಪ್ರದೇಶದ ಖಾಸಗಿ ಕಂಪನಿಯೊಂದರ ಹೂ ಕುಂಡದಲ್ಲಿ ಗಾಂಜಾ ಗಿಡಗಳು ಪತ್ತೆಯಾಗಿವೆ. ಅಬಕಾರಿ ಇಲಾಖೆ ಮಾಹಿತಿ ಮೇರೆಗೆ ಪೊಲೀಸರು ಗಿಡಗಳನ್ನು ವಶಪಡಿಸಿಕೊಂಡು ತನಿಖೆ ಆರಂಭಿಸಿದ್ದಾರೆ. ದಾಬಸಪೇಟೆ ಹೆದ್ದಾರಿ ಬಳಿಯ ಡಾಬಾಗಳಲ್ಲಿ ಗಾಂಜಾ ಮಾರಾಟ ನಡೆಯುತ್ತಿರುವ ಬಗ್ಗೆ ಸ್ಥಳೀಯರು ಆರೋಪಿಸಿದ್ದಾರೆ. ಬೆಟ್ಟ ಪ್ರದೇಶದಲ್ಲೂ ಗಾಂಜಾ ಬೆಳೆದು ಮಾರಾಟ ನಡೆಯುತ್ತಿದೆ ಎಂಬ ಮಾತು ಕೇಳಿಬರುತ್ತಿದೆ. ಕೂಡಲೇ ಕ್ರಮ ಕೈಗೊಳ್ಳುವಂತೆ ಒತ್ತಾಯ ಕೇಳಿಬರುತ್ತಿದೆ.

cannabis found growing in company flower pot police seize plants

ದಾಬಸಪೇಟೆ: ಸೋಂಪುರ ಕೈಗಾರಿಕಾ ವ್ಯಾಪ್ತಿಯಲ್ಲಿರುವ ಖಾಧಿಸಗಿ ಕಂಪನಿ ಆಧಿವಧಿರಧಿಣಧಿದಧಿಲ್ಲಿಧಿರುವ ಅಲಂಕಾರಿಕ ಹೂ ಕುಂಡದಲ್ಲಿಗಾಂಜಾ ಬೆಳೆದಿರುವುದು ಕಂಡು ಬಂದಿದ್ದು, ಪೊಲೀಸರು ತಧಿನಿಖೆ ಕೈಧಿಗೊಂಡಿಧಿದ್ದಾರೆ.

ಹೂ ಕುಂಡದಲ್ಲಿಗಾಂಜಾ ಬೆಳೆದಿರುವ ಬಗ್ಗೆ ಅಬಕಾರಿ ಇಲಾಖೆ ಪೊಲೀಸರಿಗೆ ಮಾಹಿತಿ ಸಿಕ್ಕ ತಕ್ಷಣ ಗಿಡಗಳನ್ನು ವಶಕ್ಕೆ ಪಡೆದು ದೂರು ದಾಖಲಿಸಿಕೊಂಡು ಕಂಪನಿ ಮುಖ್ಯಸ್ಥರ ವಿಚಾರಣೆಗೆ ಮುಂದಾಗಿದ್ದಾರೆ.

ದಾಬಸಪೇಟೆಯ ತುಮಕೂರು ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 48ರಲ್ಲಿರುವ ಸಾಕಷ್ಟು ಡಾಬಾಗಳು ಗಾಂಜಾ ಮಾರಾಟದ ಹಾಟ್ ಸ್ಪಾಟ್ ಗಳಾಗಿವೆ ಎಂಬ ಗುಮಾನಿ ಇದೆ ಎಂದು ಸ್ಥಳೀಯರು ಆರೋಪ ಮಾಡುತ್ತಿದ್ದಾರೆ.

ಹಲವು ಯುವಕರು ಗಾಂಜಾಕ್ಕೆ ದಾಸರಾಗಿ ಪ್ರಾಣ ಕಳೆದುಕೊಂಡಿದ್ದಾರೆ. ಗಾಂಜಾ ಮಾದಕ ವಸ್ತು ಮಾರಾಟ ಒಂದು ರೀತಿಯಲ್ಲಿಓಪನ್ ಸಿಕ್ರೇಟ್ ಆಗಿದೆ ಎಂದು ಡಾಬಾದ ಗ್ರಾಹಕರು ಹೇಳುತ್ತಿದ್ದಾರೆ.

ಕಂಪನಿಯ ಹೂ ಕುಂಡದಲ್ಲಿಗಾಂಜಾ ಗಿಡ ಬೆಳೆದ ರೀತಿಯಲ್ಲಿಯೇ ದಾಬಸಪೇಟೆ ಸುತ್ತಮುತ್ತಲ ಬೆಟ್ಟ ಅರಣ್ಯ ಪ್ರದೇಶದಲ್ಲಿಯೂ ಗಾಂಜಾ ಬೆಳೆದು ಖತರ್ನಾಕ್ ದಂಧೆಕೋರರು ಗುಪ್ತವಾಗಿ ಮಾರಾಟ ಮಾಡುವ ಕೆಲಸ ಮಾಡುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ.

ಇಂತಧಿಹುಧಿಗಧಿಳಧಿನ್ನು ತಡೆಯಲು ಪೊಲೀಸರು ಮತ್ತು ಸಂಬಂಧಿತ ಇಲಾಖೆ ತಕ್ಷಣ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಒತ್ತಾಯಿಸುತ್ತಿದ್ದಾರೆ

(ಧಿಒಂದೇ ಫೋಟೊ ತೊಧಿಗೊಧಿಳಿ) ಪೊಟೋ 3: ಕಂಪನಿಯೊಂದರ ಹೂ ಕುಂಡಧಿದಲ್ಲಿಗಾಂಜ ಗಿಡ ಬೆಳೆದಿರುವುದು.