ಅಣ್ಣಾವ್ರ ಹೆಸರು ಹೇಳುವ ಯೋಗ್ಯತೆ ಚೇತನ್ ಗಿಲ್ಲ
ಡಾ.ರಾಜ್ ಸ್ಮಾರಕ ವಿವಾದ: ನಟ ಚೇತನ್ ವಿರುದ್ಧ ನಿಖಿಲ್ ಕಿಡಿ
ವಿಕ ಸುದ್ದಿಲೋಕ ಕೋಲಾರ
ಅಣ್ಣಾವ್ರ ಹೆಸರು ಹೇಳೋದಕ್ಕೆ ಚೇತನ್ ಅವರಿಗೆ ಯೋಗ್ಯತೆ ಇಲ್ಲ, ಅವರೊಬ್ಬ ಪ್ರಚಾರಪ್ರಿಯರು. ಡಾ.ರಾಜ್ ಕುಮಾರ್ ಅವರ ಸ್ಮಾರಕ ಬಗ್ಗೆ ಮಾತನಾಡಲು ಅವರು ಯೋಗ್ಯರಲ್ಲಎಂದು ಯುವ ಜನತಾದಳ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ವಾಗ್ದಾಳಿ ನಡೆಸಿದರು.
ಮಾಲೂರಿನಲ್ಲಿಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಅಣ್ಣಾವ್ರು ಯಾವತ್ತೂ ಏನನ್ನೂ ಬಯಸಿದ ವ್ಯಕ್ತಿತ್ವವಲ್ಲ. ಅವರ ಸಮಾಧಿ ಬಗ್ಗೆ ಮಾತನಾಡುವ ಯೋಗ್ಯತೆ ಚೇತನ್ ಗೆ ಇಲ್ಲಎಂದು ಕಿಡಿಕಾರಿದರು.
ಬೇಸಿಗೆಯಲ್ಲಿರಾಜ್ಯದ ಹಲವು ಭಾಗಗಳಲ್ಲಿಕುಡಿಯುವ ನೀರಿಲ್ಲ. ಕಾಂಗ್ರೆಸ್ ಸರಕಾರ ಜೀವಜಲ ಪೂರೈಸುವಲ್ಲಿಸಂಪೂರ್ಣ ವಿಫಲವಾಗಿದೆ. ರೈತರು ಆತ್ಮವಿಶ್ವಾಸ ಕಳೆದುಕೊಂಡಿದ್ದಾರೆ. ಈ ಸರಕಾರ ಇರುವಷ್ಟು ದಿನ ರೈತರಿಗೆ ರಕ್ಷಣೆ ಇಲ್ಲಎಂದು ಆರೋಪಿಸಿದರು.
ಸ್ಥಳೀಯ ಚುನಾವಣೆ ನಡೆಸಲು ಕಾಂಗ್ರೆಸ್ ಗೆ ಹಿನ್ನಡೆ ಆಗುವ ಭಯವಿದೆ. ಕೋರ್ಟ್ ಕೂಡ ಛೀಮಾರಿ ಹಾಕಿದೆ. ನನ್ನ ರಾಜ್ಯ ಪ್ರವಾಸ ನಿರಂತರವಾಗಿ ನಡೆಯುತ್ತಿದೆ. ಸಂಘಟನೆ ನಿಂತ ನೀರಲ್ಲ, ಸಮುದ್ರದಂತೆ ನಿರಂತರವಾಗಿರಬೇಕು ಎಂದರು.
ಟಿಕೆಟ್ ಹಂಚಿಕೆ ಬಗ್ಗೆ ಕೇಳಿದ ಪ್ರಶ್ನೆಗೆ, ಚುನಾವಣೆಗೆ ಇನ್ನೂ ಎರಡು ವರ್ಷವಿದೆ. ನಮ್ಮ ಹೈಕಮಾಂಡ್ ಮತ್ತು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರು ಚರ್ಚಿಸಿ ಮೈತ್ರಿಗೆ ಧಕ್ಕೆ ಬಾರದಂತೆ ಒಳ್ಳೆಯ ತೀರ್ಮಾನ ಕೈಗೊಳ್ಳುತ್ತಾರೆ ಎಂದು ಸ್ಪಷ್ಟಪಡಿಸಿದರು.
ಈ ಸಂದರ್ಭದಲ್ಲಿಸಂಸದ ಎಂ.ಮಲ್ಲೇಶ್ ಬಾಬು, ಎಂಎಲ್ಸಿ ಇಂಚರ ಗೋವಿಂದರಾಜು, ಜೆಡಿಎಸ್ ಮಹಿಳಾ ಘಟಕದ ರಾಜ್ಯಾಧ್ಯಕ್ಷೆ ರಶ್ಮಿ ರಾಮೇಗೌಡ, ಮುಖಂಡರಾದ ಜಿ.ಇ.ರಾಮೇಗೌಡ, ಹೂಡಿ ವಿಜಯ್ ಕುಮಾರ್ ಮುಂತಾದವರಿದ್ದರು.
=
ಫೋಟೋಕ್ಯಾಪ್ಷನ್ : ಜೆಡಿಎಸ್ ಯುವ ಘಟಕದ ರಾಜ್ಯಾಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಮಾಲೂರಿನಲ್ಲಿಸುದ್ದಿಗಾರರೊಂದಿಗೆ ಮಾತನಾಡಿದರು. (27ಕೆಪಿಎಚ್ 2)

