ಮೇ 4ರ ವರೆಗೆ ಹನುಮಾನ ದೇವರ ಜಾತ್ರೆ

Contributed byshrishailmali78@gmail.com|Vijaya Karnataka

ಬಾಡಗಿ ಗ್ರಾಮದಲ್ಲಿ ಹನುಮಾನ ದೇವರ ಜಾತ್ರೆ ಏ.29ರಂದು ಆರಂಭವಾಗಿದೆ. ಮೇ 4ರ ವರೆಗೆ ವಿವಿಧ ಕಾರ್ಯಕ್ರಮಗಳು ನಡೆಯಲಿವೆ. ಓಟ ಸ್ಪರ್ಧೆ, ಭಜನೆ, ಓಕುಳಿ, ಕೊಂಡ ತೆಗೆಯುವುದು, ಹಾಸ್ಯ, ಬಯಲಾಟ, ಕುಸ್ತಿ ಸ್ಪರ್ಧೆಗಳು ಜರುಗಲಿವೆ. ಕಂಬ ಇಳಿಸುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ. ಈ ಜಾತ್ರೆಯಲ್ಲಿ ಭಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವರು.

hanuman devara jatre special programs until may 4

ವಿಕ ಸುದ್ದಿಲೋಕ ಅರಟಾಳ

ಸಮೀಪದ ಬಾಡಗಿ ಗ್ರಾಮದ ಹನುಮಾನ ದೇವರ ಜಾತ್ರೆ ಏ.29ರಂದು ಆರಂಭವಾಗಿದ್ದು, ಮೇ 4ರ ವರೆಗೆ ಜರುಗಲಿದೆ.

30 ರಂದ ಸಂಜೆ 7 ಗಂಟೆಗೆ ಜಾತ್ರೆ ಉದ್ಘಾಟನೆ ಕಾರ್ಯಕ್ರಮದ ಸಾನ್ನಿಧ್ಯವನ್ನು ಚಿಂಚಣಿ ಶಿವಪ್ರಸಾದ ಮಹಾಸ್ವಾಮಿಗಳು ವಹಿಸುವರು. ಶಾಸಕ ಲಕ್ಷತ್ರ್ಮಣ ಸವದಿ ಉದ್ಘಾಟಿಸುವರು. ರಾತ್ರಿ 9 ಗಂಟೆಗೆ ಸಾಂಸ್ಕೃತಿಕ ಕಾರ್ಯಕ್ರಮ ಜರುಗುವುದು.

ಮೇ 1 ರಂದು ಬೆಳಗ್ಗೆ 7 ಗಂಟೆಗೆ ಓಟ ಸ್ಪರ್ಧೆ, 9 ಗಂಟೆಗೆ ಭಜನೆ, ಸಂಜೆ 5 ಗಂಟೆಗೆ ಓಕುಳಿ ಕೊಂಡ ತೆಗೆಯುವುದು, ನಂತರ ಮಹಾಪ್ರಸಾದ. ರಾತ್ರಿ 10 ಗಂಟೆಗೆ ಹಾಸ್ಯಕಾರ್ಯಕ್ರಮ ಜರುಗುವುದು. ಮೇ 2 ರಂದು ದೀರ್ಘದಂಡ ನಮಸ್ಕಾÃ, ಬೆಳಗ್ಗೆ 9 ಗಂಟೆಗೆ ಹೊಂಡ ತುಂಬುವುದು. ಮಧ್ಯಾಹ್ನ 12.30ಕ್ಕೆ ದೇವರಿಗೆ ಮಹಾನೈವೇದ್ಯ, ಸಂಜೆ 5 ಗಂಟೆಗೆ ನೀರೋಕುಳಿ, ಬಳಿಕ ಪಲ್ಲಕ್ಕಿ ಉತ್ಸವ ಹಾಗೂ ಗೊಂಬೆ ಕುಣಿತ, ಸಂಜೆ 6 ಗಂಟೆಗೆ ಮಹಾಪ್ರಸಾದ ಇರುವುದು. ರಾತ್ರಿ 10 ಗಂಟೆಗೆ ಶ್ರೀಕೃಷ್ಣ ಪಾರಿಜಾತ ಬಯಲಾಟ ಪ್ರದರ್ಶನವಿದೆ.

ಮೇ 3 ರಂದು ಬೆಳಗ್ಗೆ 9 ಗಂಟೆಗೆ ಸಂಗ್ರಾಮ ಕಲ್ಲುಎತ್ತುವ ಹಾಗೂ ಚೀಲ ಎತ್ತುವ ಸ್ಪರ್ಧೆ ಜರುಗುವವು. 10 ಗಂಟೆಗೆ ಕೆಸರೋಕುಳಿ, ಸಂಜೆ 4 ಗಂಟೆಗೆ ಅಂತಾರಾಜ್ಯ ಜಂಗೀ ನಿಕಾಲಿ ಕುಸ್ತಿ ಸ್ಪರ್ಧೆ ನಡೆಯಲಿದೆ. ರಾತ್ರಿ 10 ಗಂಟೆಗೆ ‘ಮಗ ಹೋದರೂ ಮಾಂಗಲ್ಯ ಬೇಕು’ ಸಾಮಾಜಿಕ ನಾಟಕ ಪ್ರದರ್ಶನವಿದೆ. ಮೇ 4 ರಂದು ಸಂಜೆ ಕಂಬ ಇಳಿಸುವ ಮೂಲಕ ಜಾತ್ರೆ ಸಂಪನ್ನಗೊಳ್ಳಲಿದೆ ಎಂದು ಜಾತ್ರಾ ಕಮಿಟಿ ತಿಳಿಸಿದೆ.

ಪೋಟೋ 29ಅರಟಾಳ1: ಹನುಮಾನ ದೇವರು.