ಹಾವೇರಿ: ದಿಲ್ಲಿಯ ಭಾರತದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗವು (ಎನ್ ಹೆಚ್ ಆರ್ ಸಿ) ಮಾನವ ಹಕ್ಕುಗಳ ಕುರಿತು ಕಿರುಚಿತ್ರ ಸ್ಪರ್ಧೆಯನ್ನು ನಡೆಸಿಕೊಂಡು ಬರುತ್ತಿದ್ದು, 2026ರ 12ನೇ ಆವೃತ್ತಿಗೆ ದೇಶದ ನಾಗರಿಕರಿಂದ ಆನ್ ಲೈನ್ ಮೂಲಕ ಪ್ರವೇಶಾತಿಗೆ ಅರ್ಜಿ ಆಹ್ವಾನಿಸಿದೆ. ಮೊದಲ, ಎರಡನೇ ಮತ್ತು ಮೂರನೇ ಅತ್ಯುತ್ತಮ ಚಿತ್ರಕ್ಕೆ 2 ಲಕ್ಷ ರೂ., 1.50 ಲಕ್ಷ ರೂ. ಮತ್ತು 1ಲಕ್ಷ ರೂ. ಬಹುಮಾನ ನೀಡಲಾಗುತ್ತದೆ. ಕಿರುಚಿತ್ರಗಳು ಹಿಂದಿ ಅಥವಾ ಯಾವುದೇ ಭಾರತೀಯ ಭಾಷೆಯಲ್ಲಿರಬಹುದು, ಇಂಗ್ಲಿಷ್ ನಲ್ಲಿಉಪಶೀರ್ಷಿಕೆಗಳನ್ನು ಹಾಕಿರಬೇಕು, ಕಿರುಚಿತ್ರದ ಅವಧಿ ಕನಿಷ್ಠ 3 ನಿಮಿಷ ಮತ್ತು ಗರಿಷ್ಠ 10 ನಿಮಿಷ. ಪ್ರವೇಶಗಳನ್ನು ಸ್ವೀಕರಿಸಲು 2026 ಜೂ.30ಕೊನೆಯ ದಿನವಾಗಿದೆ. ಗೂಗಲ್ ಡ್ರೈವ್ ಬಳಸಿ ್ಞh್ಟ್ಚshಟ್ಟಠ್ಛಿಜ್ಝಿಞಃಜಞaಜ್ಝಿ.್ಚಟಞಗೆ ಆನ್ ಲೈನ್ ನಲ್ಲಿಕಿರುಚಿತ್ರಗಳನ್ನು ಸ್ಪರ್ಧೆಗೆ ಕಳುಹಿಸಬೇಕು. ವೆಬ್ ಸೈಟ್ hಠಿಠಿps://್ಞh್ಟ್ಚ.್ಞಜ್ಚಿ.ಜ್ಞಿ/ ಅಥವಾ ಲಿಂಕ್ hಠಿಠಿps://್ಞh್ಟ್ಚ.್ಞಜ್ಚಿ.ಜ್ಞಿ/್ಛ್ಝಜಿpಚಿಟಟk/್ಛಜ್ಝಿಛಿs/255 ನಿಂದ ಡೌನ್ ಲೋಡ್ ಮಾಡಬಹುದು. ವಿವರಗಳಿಗೆ ದೂ. 011-24663281/24663367 ಸಂಪರ್ಕಿಸಬಹುದು ಎಂದು ಎನ್ ಎಚ್ ಆರ್ ಸಿ ಮಾಧ್ಯಮ ಮತ್ತು ಸಂವಹನ ವಿಭಾಗದ ಉಪನಿರ್ದೇಶಕ ಜೈಮಿನಿ ಕುಮಾರ್ ಶ್ರೀವಾಸ್ತವ ಪ್ರಕಟಣೆಯಲ್ಲಿತಿಳಿಸಿದ್ದಾರೆ.

