ಕಾಂಗ್ರೆಸ್ , ಬಿಜೆಪಿ ಒಂದೇ ನಾಧಿಣ್ಯದ ಎರಡು ಮುಖ

Contributed byamareshhiremath72@gmail.com|Vijaya Karnataka

ಶಹಾಪುರದಲ್ಲಿ ನಡೆದ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ರಾಜ್ಯ ಸಮ್ಮೇಳನದಲ್ಲಿ ಎ.ವಿಜಯರಾಘವನ್ ಮಾತನಾಡಿದರು. ಕಾಂಗ್ರೆಸ್ ಮತ್ತು ಬಿಜೆಪಿ ಒಂದೇ ನಾಣ್ಯದ ಎರಡು ಮುಖಗಳೆಂದರು. ರಾಷ್ಟ್ರೀಯ ಪಕ್ಷಗಳು ಪ್ರಾದೇಶಿಕ ಪಕ್ಷಗಳನ್ನು ನುಂಗಿ ಹಾಕುತ್ತಿವೆ. ರಾಜ್ಯದಲ್ಲಿ 40 ಸಾವಿರಕ್ಕೂ ಹೆಚ್ಚು ಕೃಷಿ ಕೂಲಿಕಾರರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಬಳ್ಳಾರಿಯಲ್ಲಿ ರೈತರ ಮೇಲೆ ಹಲ್ಲೆ ಖಂಡನೀಯ.

two faces of the same coin in leadership clash

ಚಿತ್ರಸುದ್ದಿ 29ಎಸ್ ಎಚ್ ಪಿ1:

ಶಹಾಪುರ ತಾಲೂಕಿನ ಗೋಗಿ ಗ್ರಾಮದ ಕಲ್ಯಾಣ ಮಂಟಪದಲ್ಲಿಸೋಮವಾರ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ 9ನೇ ರಾಜ್ಯ ಸಮ್ಮೇಳನದ ಪ್ರತಿನಿಧಿ ಅಧಿವೇಶನದಲ್ಲಿಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ

ಎ.ವಿಜಯರಾಘವನ್ ಮಾತನಾಡಿದರು.

* ಕೃಷಿ, ಗ್ರಾಮೀಣ ಕಾರ್ಮಿಕರ ಸಂಘದ 9ನೇ ರಾಜ್ಯ ಸಮ್ಮೇಳನದ ಪ್ರತಿನಿಧಿ ಅಧಿವೇಶನ

ಕಾಂಗ್ರೆಸ್ , ಬಿಜೆಪಿ ಒಂದೇ ನಾಧಿಣ್ಯದ ಎರಡು ಮುಖ

ವಿಕ ಸುದ್ದಿಲೋಕ ಶಹಾಪುರ

ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷಗಳು ಒಂದೇ ನಾಣ್ಯದ ಎರಡು ಮುಖಗಳಾಗಿವೆ. ಕಾಂಗ್ರೆಸ್ ಸರಕಾರವು ಬಿಜೆಪಿಯನ್ನು ಟೀಕಿಸುತ್ತಾ ಬಿಜೆಪಿ ಸರಕಾರವು ಜಾರಿಗೆ ತಂದ ಗೋ ಹತ್ಯೆ ನಿಷೇಧ ಕಾಧಿಯಿದೆ, ಎಪಿಎಂಸಿ ಕಾಧಿಯಿದೆಯನ್ನು ಅಪರೋಕ್ಷವಾಗಿ ಜಾರಿಗೆ ತರಲು ಹೊರಟಿರುವುದು ಸರಿಯಾದ ಕ್ರಮವಲ್ಲಎಂದು ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಅಧ್ಯಕ್ಷ ಎ.ವಿಜಯರಾಘವನ್ ತಿಳಿಸಿದರು.

ತಾಲೂಕಿನ ಗೋಗಿ ಗ್ರಾಮದ ಕಲ್ಯಾಣ ಮಂಟಪದಲ್ಲಿಸೋಮವಾರ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಸಂಯೋಜಿತ 9ನೇ ರಾಜ್ಯ ಸಮ್ಮೇಳನದ ಪ್ರತಿನಿಧಿ ಅಧಿವೇಶನದಲ್ಲಿಮಾತನಾಡಿದರು.

ರಾಷ್ಟ್ರೀಯ ಪಕ್ಷಗಳು ನಿಧಾನವಾಗಿ ಪ್ರಾದೇಶಿಕ ಪಕ್ಷಗಳನ್ನು ನುಂಗಿ ಹಾಕಿವೆ. ರಾಜ್ಯದಲ್ಲಿಜೆಡಿಎಸ್ ಪಕ್ಷವನ್ನು ಬಿಜೆಪಿಯ ರಾಷ್ಟ್ರೀಯ ಪಕ್ಷದ ತೆಕ್ಕೆಯಲ್ಲಿಸಿಲುಕಿಕೊಂಡಿದೆ. ಕಾಂಗ್ರೆಸ್ ನಲ್ಲಿಅಧಿಕಾರದ ಗುದ್ದಾಟ ಜೋರಾಗಿದೆ. ನಿಮಗೆ ಅಧಿಕಾರ ನೀಡಿರುವುದು ಜನರ ಕಲ್ಯಾಣಕ್ಕಾಗಿ ಎಂಬುವುದು ಮರೆಯಬೇಡಿ ಎಂದರು.

ರಾಜ್ಯ ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ರಾಜ್ಯ ಘಟಕದ ಅಧ್ಯಕ್ಷ ಪುಟ್ಟಮಾಧು, ಪ್ರದಾನ ಕಾರ್ಯದರ್ಶಿ ಚಂದ್ರಪ್ಪ ಹೊಸಕೇರಾ, ಯಶವಂತ, ಉಪಾಧ್ಯಕ್ಷ ಜಿ.ಎಸ್ .ನಾಗರಾಜ, ಕೃಷಿ ಮತ್ತು ಗ್ರಾಮೀಣ ಕಾರ್ಮಿಕರ ಸಂಘದ ಜಿಲ್ಲಾಘಟಕದ ಅಧ್ಯಕ್ಷ ದಾವಲಸಾಬ್ ನದಾಫ್ , ಚೆನ್ನಪ್ಪ ಆನೇಗುಂದಿ, ಭೀಮಶೆಟ್ಟಿ ಯಂಪಳ್ಳಿ, ನಾಗರತ್ನ ನಾಡಾ, ಅನಿಲಕುಮಾರ,ಬಿ.ಎಂ.ಶಿವಮಲ್ಲಯ್ಯ, ಬಿ.ಹನುಮೇಶ, ಮುನಿ ವೆಂಟಪ್ಪ, ವೆಂಕಟೇಶ್ವರಲು ಮಾತನಾಡಿದರು. ಪ್ರತಿನಿಧಿ ಅಧಿವೇಶದಲ್ಲಿ300 ಜನಪ್ರತಿನಿಧಿಗಳು ಭಾಗವಹಿಸಿದಧಿರು.

* ಬಾಕ್ಸ್

ಕುಡತಿನಿ ರೈತರ ಮೇಲೆ ಹಲ್ಲೆಖಂಡನೀಯ

ಬಳ್ಳಾರಿಯ ಕುಡತಿನಿ ಬಳಿ ಖಾಸಗಿ ಕಂಪನಿಯು ರೈತರ ಜಮೀನು ಅಕ್ರಮವಾಗಿ ಮಾರಾಟ ಮಾಡಿರುವುದನ್ನು ಖಂಡಿಸಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಬಂಧಿಸಿರುವುದನ್ನು ಕರ್ನಾಟಕ ರಾಜ್ಯ ಪ್ರಾಂತ ಸಂಘದ ರಾಜ್ಯ ಘಟಕದ ಪ್ರದಾನ

ಕಾರ್ಯದರ್ಶಿ ಯಶವಂತ ಟಿ ತೀವ್ರವಾಗಿ ಖಂಡಿಸಿದ್ದಾರೆ. ನ್ಯಾಯಯುತವಾಗಿ ತಮ್ಮ ಹಕ್ಕುಗಳ ಸಂರಕ್ಷಣೆಗೆ ಹೋರಾಟ ನಡೆಸುತ್ತಿದ್ದಾಗ ಸರಕಾರ ನಿಷೇಧಾಜ್ಞೆ ಜಾರಿ ಮಾಡಿ ಪೊಲೀಸ್ ಬಲ ಪ್ರಯೋಗಿಸಿ ಶಾಂತಿಯುತ ಹೋರಾಟ ಹತ್ತಿಕ್ಕುವ ಸರ್ವಾಧಿಕಾರಿ ನಡೆ ಸರಿಯಲ್ಲ. ಜಮ್ಮು ಕಾಶ್ಮೀರ, ಮಣಿಪುರ ರಾಜ್ಯದಲ್ಲಿಮಾತ್ರ ಕಂಡು ಬರುತ್ತಿದ್ದ ನಿಷೇಧಾಜ್ಞೆಯನ್ನು ಬಳ್ಳಾರಿಯಲ್ಲಿಜಾರಿ ಮಾಡಿರುವುದು ಉತ್ತಮ ಸರಕಾರದ ನಿಲುವು ಅಲ್ಲ. ರೈತರನ್ನು ತಕ್ಷಣ ಬಿಡುಗಡೆಗೊಳಿಸಿ ಸೂಕ್ತ ಪರಿಹಾರ ರೂಪಿಸಬೇಕು ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸಿದ್ದಾರೆ.

* 40 ಕಾರ್ಮಿಕರ ಆತ್ಮಹತ್ಯೆ!

ಅಖಿಲ ಭಾರತ ಕೃಷಿ ಕೂಲಿಕಾರರ ಸಂಘದ ಜಂಟಿ ಕಾರ್ಯದರ್ಶಿ ವಿ.ಶಿವ ದಾಸನ್ ಮಾತನಾಡಿ, ರಾಜ್ಯದಲ್ಲಿಕೂಲಿ ಕಾರ್ಮಿಕರ ಬದುಕು ಹದಗೆಟ್ಟಿದೆ. ಮೈಕ್ರೋ ಫೈನಾನ್ಸ್ ಹಾವಳಿ ಹೆಚ್ಚಿಸುವುದರ ಮೂಲಕ ರಾಷ್ಟ್ರೀಕೃತ ಬ್ಯಾಂಕ್ ನಲ್ಲಿಸಾಲ ಸೌಲಭ್ಯ ಕಡಿತ ಮಾಡಿದೆ. ಕೂಲಿ ಕಾರ್ಮಿಕರು ಆತ್ಮಹತ್ಯೆಯ ಕಡೆ ಮುಖ ಮಾಡುತ್ತಿದ್ದಾರೆ. ಕಳೆದ ಐದು ವರ್ಷದಲ್ಲಿ40 ಸಾವಿರಕ್ಕೂ ಹೆಚ್ಚು ಕೃಷಿಕೂಲಿ ಕಾರ್ಮಿಕರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದಕ್ಕೆ ಕೇಂದ್ರ ಹಾಗೂ ರಾಜ್ಯ ಸರಕಾರದ ದ್ವಿಮುಖ ನೀತಿ ಕಾರಣ. ಪರಿಶಿಷ್ಟರ ಕಲ್ಯಾಣಕ್ಕಾಗಿ ಮೀಸಲಿಟ್ಟ ಅನುದಾನ ದುರ್ಬಳಕೆ ಮಾಡಿಕೊಂಡಿರುವುದು ಸರಿಯಾದ ನಡೆಯಲ್ಲಎಂದು ಟೀಕಿಸಿದರು.