ವಿಕ ಸುದ್ದಿಲೋಕ ಗಂಗಾವತಿ‘‘ದಲಿತ ಯುವಕ ಭೂಮಾನಂದ ಕೊಲೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆಗೆ ಆಗ್ರಹಿಸಿ,’’ ದಲಿತ ಸೇನೆಯ ಜಿಲ್ಲಾಸಮಿತಿಯಿಂದ ನಗರದ ಶ್ರೀಕೃಷ್ಣದೇವರಾಯ ವೃತ್ತದಲ್ಲಿ
ಬುಧವಾರ ಪ್ರತಿಭಟನೆ ನಡೆಸಿತು.
ಸಮಿತಿಯ ಜಿಲ್ಲಾಧ್ಯಕ್ಷ ಶಿವಮೂರ್ತಿ ಜೇಕಿನ್ ಮಾತನಾಡಿ, ‘‘ರಾಯಚೂರು ಜಿಲ್ಲೆಯ ದೇವದುರ್ಗ ತಾಲೂಕಿನ ಹದ್ದಿನಾಳ ಗ್ರಾಮದ ಮಾದಿಗ ಸಮಾಜದ ಮುಖಂಡ ಭೂಮಾನಂದ ಅವರ ಹತ್ಯೆ ಮಾಡಲಾಗಿದೆ. ಈ ಕೊಲೆ ಪ್ರಕರಣವನ್ನು ಉನ್ನತ ಮಟ್ಟದ ತನಿಖೆ ನಡೆಸಿ, ಕೊಲೆಗಡುಕರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಯುವಕನ ಕುಟುಂಬಕ್ಕೆ ಸರಕಾರ 50 ಲಕ್ಷ ಪರಿಹಾರ ಹಾಗೂ
ಕುಟುಂಬ ಸದಸ್ಯರಿಗೆ ಸರಕಾರಿ ಉದ್ಯೋಗ ನೀಡಬೇಕು,’’ ಎಂದು ಒತ್ತಾಯಿಸಿದರು.
ದಲಿತ ಸಮುದಾಯದ ಜೀವ, ಆಸ್ತಿ ಮತ್ತು ಗೌರವದ ರಕ್ಷಣೆಗೆ ಗಮನಹರಿಸಬೇಕಾಗಿದೆ. ದಲಿತ ಮುಖಂಡರು ಮತ್ತು ಸಾಮಾಜಿಕ ಕಾರ್ಯಕರ್ತರಿಗೆ ಪೊಲೀಸ್ ಭದ್ರತೆ ಒದಗಿಸಬೇಕು.
ದಲಿತರ ಮೇಲಿನ ಶೋಷಣೆ ತಡೆಗಟ್ಟಲು ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.
ಈ ಸಂದರ್ಭದಲ್ಲಿದಲಿತ ಸೇನೆಯ ಜಿಲ್ಲಾಕಾರ್ಯದರ್ಶಿ ಮೌಲಾಲಿ ಕೆ., ಜಿಲ್ಲಾಉಪಾಧ್ಯಕ್ಷ ಸಲೀಂ, ಗಂಗಾವತಿ ತಾಲೂಕು ಉಪಾಧ್ಯಕ್ಷ ಅಜ್ಜು ರಬ್ಬಾನಿ, ಪದಾಧಿಕಾರಿಗಳಾದ ವಿರೂಪಾಕ್ಷಿ ಭಜಂತ್ರಿ,