* ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಸಾರ್ವಜನಿಕರಿಂದ ಸಹಿ ಸಂಗ್ರಹ ಚಳವಳಿ
ಗ್ರಾಮದ ಅಭಿವೃದ್ಧಿಗೆ ಆಗ್ರಹವಿಕ ಸುದ್ದಿಲೋಕ ಸಿರಿಗೇರಿ
ಜ್ವಲಂತ ಸಮಸ್ಯೆಗಳಲ್ಲಿಒಂದಾದ ಹೃದಯ ಭಾಗದಲ್ಲಿರುವ ಪುರಾತನ ಊರುಕೆರೆ ಅಭಿವೃದ್ಧಿ ಮತ್ತು ಸರಕಾರಿ ಪ್ರಾಥಮಿಕ ಸಮುದಾಯ ಆರೋಗ್ಯ ಕೇಂದ್ರವನ್ನು ಮೇಲ್ದರ್ಜೆಗೆ ಏರಿಸುವಂತೆ ಸಾರ್ವಜನಿಕರಿಂದ ಸಹಿ ಸಂಗ್ರಹ ಚಳವಳಿ ಹಮ್ಮಿಕೊಳ್ಳಲಾಯಿತು.
ಈ ವೇಳೆ ಸಾಮಾಜಿಕ ಹೋರಾಟಗಾರ, ವಕೀಲ ಬಿ. ರಾಮಬಾಬು ಮಾತನಾಡಿ, ‘‘ಸುಮಾರು ವರ್ಷಗಳಿಂದ ಉಪವಾಸ ಸತ್ಯಾಗ್ರಹ, ಪ್ರತಿಭಟನೆಗಳು, ಮನವಿಗಳು ನೀಡಿದರೂ ಪ್ರಯೋಜನ ಆಗಿಲ್ಲ. ಈ ಕುರಿತು ಸಂಬಂಧಪಟ್ಟ ಶಾಸಕರಿಗೆ, ಅಧಿಕಾರಿಗಳಿಗೆ ಮನವಿ ಸಲ್ಲಿಸಿದರೂ ಸ್ಪಂದನೆ ದೊರಕಿಲ್ಲ. ಊರುಕೆರೆ ಅಭಿವೃದ್ಧಿಯಾಗದೆ ಸಾಂಕ್ರಾಮಿಕ ರೋಗಗಳಿಗೆ ಎಡೆ ಮಾಡಿಕೊಟ್ಟಿದೆ. 26 ಹಳ್ಳಿಗಳಿಗೆ ಬೇಕಾದ ಸರಕಾರಿ ಆಸ್ಪತ್ರೆಯಲ್ಲಿವೈದ್ಯರ ಕೊರತೆ, ಸಿಬ್ಬಂದಿ ಕೊರತೆ, ಗರ್ಭಿಣಿಯರಿಗೆ ಬೆಡ್ ಗಳ ವ್ಯವಸ್ಥೆ ಹೀಗೆ ಮೂಲ ಸೌಲಭ್ಯಗಳಿಲ್ಲ. ಅವುಗಳ ಪರಿಹಾರಕ್ಕಾಗಿ ಸಹಿ ಸಂಗ್ರಹ ಮಾಡುತ್ತಿದ್ದೇವೆ,’’ ಎಂದರು.