ಸಿದ್ದಾಪುರ ನಾಮಧಾರಿ

Contributed bygsbhat9@gmail.com|Vijaya Karnataka
launch of naamdhaari community hall construction mla bheemanna naik inspires development in the region
ನಾಮಧಾರಿ ಸಮುದಾಯ ಭವನದ ಕಾಮಗಾರಿಗೆ ಶಾಸಕ ಚಾಲನೆ

ಹಣಕ್ಕಷ್ಟೇ ಅಲ್ಲ, ಶ್ರಮಕ್ಕೂ ಇದೆ ಗೌರವ
ವಿಕ ಸುದ್ದಿಲೋಕ ಸಿದ್ದಾಪುರ

ಸಮಾಜದಲ್ಲಿರುವ ಒಂದು ತಪ್ಪು ಕಲ್ಪನೆಯೆಂದರೆ ಯಾವುದೇ ಕಾರ್ಯಕ್ರಮಗಳಿಗೆ ಅಥವಾ ಅಭಿವೃದ್ಧಿ ಕೆಲಸಗಳಿಗೆ ಕೇವಲ ಹಣ ಸಹಾಯ ಮಾಡಿದವರಿಗಷ್ಟೇ ಪ್ರಧಾನ್ಯತೆ ಮತ್ತು ಅವರಷ್ಟೇ ಗೌರವಕ್ಕೆ ಅರ್ಹರೆಂಬ ಭಾವನೆ ಇದೆ. ಇದು ಸರಿಯಲ್ಲ. ಪ್ರತಿಯೊಂದು ಹಂತದಲ್ಲಿಯೂ ಶ್ರಮವಹಿಸಿ ದುಡಿಯುವವರು, ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಸೇವೆ ಸಲ್ಲಿಸುವ ಎಲ್ಲರೂ ಗೌರವಕ್ಕೆ ಪಾತ್ರರು ಎಂದು ಶಾಸಕ ಭೀಮಣ್ಣ ನಾಯ್ಕ ಹೇಳಿದರು.

ಅವರು ಭಾನುವಾರ ತಾಲೂಕು ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ನಾಮಧಾರಿ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಚಾಲನೆ ನೀಡಿ ಮಾತನಾಡಿದರು.

‘‘ಅಭಿವೃದ್ಧಿ ಕೇವಲ ನಿಂತ ನೀರಲ್ಲ. ಸದಾ ಹರಿಯುತ್ತಿರುತ್ತದೆ. ಕೇವಲ ಕಟ್ಟಡ,ರಸ್ತೆ ನಿರ್ಮಾಣ ಮಾತ್ರ ಅಭಿವೃದ್ಧಿ ಎನಿಸಿಕೊಳ್ಳುವುದಿಲ್ಲ. ಬದಲಿಗೆ ಗ್ರಾಮೀಣ ಭಾಗದಿಂದ ಪಟ್ಟಣದ ವ್ಯಾಪ್ತಿಯ ಎಲ್ಲಾಜನರಿಗೂ ಮೂಲ ಸೌಕರ್ಯಗಳು, ಅಗತ್ಯತೆಗಳು ನಿಯಮಿತವಾಗಿ ದೊರೆಯುವುದೇ ಅಭಿವೃದ್ಧಿಯಾಗಿದೆ.ಹಲವಾರು ವರ್ಷಗಳ ಸತತ ಪ್ರಯತ್ನ ಹಾಗೂ ಕಷ್ಟದ ದಾರಿಯಲ್ಲಿಸಾಗಿ ಇಂದು ನಾಮಧಾರಿ ಸಮುದಾಯ ಭವನ ನಿರ್ಮಾಣದ ಕೆಲಸವು ಬಹುಪಾಲು ಪೂರ್ಣಗೊಂಡಿದೆ. ಪ್ರಾರಂಭದಿಂದ ಇಲ್ಲಿಯವರೆಗೆ ಸಂಸದರು, ಶಾಸಕರು ಅನುದಾನಗಳನ್ನು ನೀಡಿದ್ದಾರೆ . ನನ್ನ ಅವಧಿಯಲ್ಲಿನಿರ್ಮಿತಿಯ ಮೂಲಕ 1 ಕೋಟಿ ಹಣವನ್ನು ಮಂಜೂರು ಮಾಡಿದ್ದು ಮುಂದಿನ ದಿನಗಳಲ್ಲಿಹೆಚ್ಚುವರಿ 50 ಲಕ್ಷವನ್ನು ಸರಕಾರ ಆದೇಶನುಸಾರ ನೀಡಲಿದ್ದೇನೆ. ಸಮಾಜದ ಪ್ರತಿಯೊಂದು ಸಮುದಾಯದ ಏಳ್ಗೆಗೆ ಕೇವಲ ಸಮುದಾಯದ ಮುಖಂಡರಷ್ಟೇ ಅಲ್ಲದೆ ಸಮಾಜವೂ ಕೈ ಜೋಡಿಸಿದರೆ ಸರ್ವತೋಮುಖ ಬೆಳವಣಿಗೆ ಸಾಧ್ಯ’’ ಎಂದು ಭೀಮಣ್ಣ ನಾಯ್ಕ ಹೇಳಿದರು.

ಸಂಘದ ಗೌರವಾಧ್ಯಕ್ಷ ಆನಂದ್ ನಾಯ್ಕ, ಕಾರ್ಯದರ್ಶಿ ಎಸ್ . ಎಂ ನಾಯ್ಕ, ನಿರ್ಮಿತಿಯ ಕುಮಾರ್ ಶೆಟ್ಟಿ ಮುಂತಾದವರು ಇದ್ದರು.

ತಾಲೂಕು ನಾಮಧಾರಿ ಅಭಿವೃದ್ಧಿ ಸಂಘದ ಉಪಾಧ್ಯಕ್ಷ ಕೆ.ಜಿ ನಾಗರಾಜ ಸ್ವಾಗತಿಸಿದರು. ನಾಗರಾಜ್ ನಾಯ್ ್ಕ ಬೆಡ್ಕಣಿ ನಿರೂಪಿಸಿದರು. ಸಂಘದ ಉಪಾಧ್ಯಕ್ಷ ವಿ.ಎನ್ ನಾಯ್ಕ ವಂದಿಸಿದರು.

ಕ್ವೋಟ್

ನಾಮಧಾರಿ ಸಮುದಾಯ ಕಟ್ಟಡ ನಿರ್ಮಾಣಕ್ಕೆ ಸರಕಾರ ಹಾಗೂ ಶಾಸಕ ಸಂಸದರೂ ಒಟ್ಟು 2 ಕೋಟಿ 38 ಲಕ್ಷ ರೂ.ಅನುದಾನವನ್ನು ನೀಡಿದ್ದು , ವಿವಿಧ ಸಮುದಾಯದವರು 80 ಲಕ್ಷ ರೂ. ನೀಡಿದ್ದಾರೆ. ಪೂರ್ಣ ಸಿದ್ಧವಾಗಲು ಅಂದಾಜು 5 ಕೋಟಿ ರೂ ಆಗಬಹುದು. ಇನ್ನುಳಿದ ಕೆಲಸ ಕಾರ್ಯಗಳಿಗೆ ಸಮುದಾಯದ ಎಲ್ಲರೂ ಶ್ರಮವಹಿಸಬೇಕು.

-ಕೆ.ಜಿ ನಾಯ್ಕ, ತಾಲೂಕು ನಾಮಧಾರಿ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ

23ಎಸ್ ಡಿಪಿಆರ್ 1

ಸಿದ್ದಾಪುರ ನಾಮಧಾರಿ ಸಮುದಾಯ ಭವನದ ಮುಂದುವರಿದ ಕಾಮಗಾರಿಗೆ ಭಿಮಣ್ಣ ನಾಯ್ಕ ಚಾಲನೆ ನೀಡಿದರು.