ಭಯ ತೊಲಗಿಸಲು ತೆರೆದ ಮನೆ ಪಾಠ

Contributed bygiridigitalartsbirur@gmail.com|Vijaya Karnataka
open house program to alleviate fear among children collaboration of police and school staff
ಪ್ರಜ್ಞಾ ಪ್ರೌಢಶಾಲಾ ಮಕ್ಕಳೊಂದಿಗೆ ಪೊಲೀಸ್ ಸಿಬ್ಬಂದಿ ಸಂವಾದ

ಭಯ ತೊಲಗಿಸಲು ತೆರೆದ ಮನೆ ಪಾಠ
ವಿಕ ಸುದ್ದಿಲೋಕ ಕಡೂರು

ಪೊಲೀಸರ ಬಗ್ಗೆ ಇರುವ ಭಯ ಹೋಗಲಾಡಿಸುವುದು, ಅಪರಾಧ ತಡೆಗಟ್ಟುವ ಬಗ್ಗೆ ಮಕ್ಕಳಲ್ಲಿಅರಿವು ಮೂಡಿಸಲು ತೆರೆದ ಮನೆ ಸಹಕಾರಿಯಾಗಿದೆ ಎಂದು ಕಡೂರು ವೃತ್ತ ನಿರೀಕ್ಷಕ ರಫೀಕ್ ತಿಳಿಸಿದರು.

ಪಟ್ಟಣದ ಪೊಲೀಸ್ ಠಾಣೆಗೆ ಶನಿವಾರ ಭೇಟಿ ನೀಡಿದ್ದ ಪ್ರಜ್ಞಾ ಪ್ರೌಢಶಾಲಾ ಮಕ್ಕಳಿಗೆ ತೆರೆದ ಮನೆ ಕಾರ್ಯಕ್ರಮದ ಪ್ರಯೋಜನಗಳನ್ನು ತಿಳಿಸಿಕೊಟ್ಟರು.

ಮಕ್ಕಳಲ್ಲಿಕಾನೂನಿನ ಅರಿವು ಮೂಡಿಸಿದರೆ ಉತ್ತಮ ನಾಗರಿಕರನ್ನಾಗಿ ರೂಪಿಸಬಹುದು ಎಂದು ಹೇಳಿದರು.

ಪಿಎಸ್ ಐ ಸಜಿತ್ ಕುಮಾರ್ ಮಾತನಾಡಿದರು. ಪ್ರಜ್ಞಾ ಶಾಲೆಯ ಪ್ರಾಂಶುಪಾಲರಾದ ಶಿಲ್ಪಾ, ಉಪ ಪ್ರಾಂಶುಪಾಲರಾದ ಸೌಮ್ಯ, ಶಿಕ್ಷಕರಾದ ಖಾದರ್ ಮಾರುತಿ, ಮಂಜುನಾಥ್ ಮತ್ತು ಪೊಲೀಸ್ ಸಿಬ್ಬಂದಿ ಉಪಸ್ಥಿತರಿದ್ದರು.

22 ಕೆಡಿಆರ್ 5

ಕಡೂರು ಪಟ್ಟಣದ ಠಾಣೆಗೆ ಶನಿವಾರ ಭೇಟಿ ನೀಡಿದ್ದ ಪ್ರಜ್ಞಾ ಪ್ರೌಢಶಾಲಾ ಮಕ್ಕಳಿಗೆ ಸಿಪಿಐ ರಫೀಕ್ ಅವರು ತೆರೆದ ಮನೆ ಕಾರ್ಯಕ್ರಮದ ಪ್ರಯೋಜನಗಳನ್ನು ತಿಳಿಸಿಕೊಟ್ಟರು.