ಪಾಂಡವಪುರ ತಾಲೂಕು ಮೇಲುಕೋಟೆ ಸಮೀಪದ ತಾಳೇಕೆರೆ ಗ್ರಾಮದಲ್ಲಿಟೊಮ್ಯಾಟೊ ಉತ್ಪಾದನಾ ತಂತ್ರಜ್ಞಾನ ಕುರಿತು ವಿಶೇಷ ಮಾಹಿತಿ ಕಾರ ್ಯಕ್ರಮ ವಿಶೇಷವಾಗಿ ನಡೆಯಿತು.ಮಂಡ್ಯ ತಾಲೂಕು ವಿ.ಸಿ.ಫಾಮ್ ರ್ ನ ವಿ.ಸಿ.ಫಾಮ್ ರ್ ನ ಕೃಷಿ ವಿಜ್ಞಾನಗಳ ವಿಶ್ವವಿದ್ಯಾಲಯ, ಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ಪದವಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರಾರ ಯನುಭವ ಶಿಬಿರದಲ್ಲಿಇಂತಹುದೊಂದು ವಿಶೇಷ ಕಾರ ್ಯಕ್ರಮ ಸಂಘಟಿಸಲಾಗಿತ್ತು. ಊರಿನ ಮನೆಯೊಂದರಲ್ಲಿಪ್ರೊಜೆಕ್ಟರ್ ಬಳಸಿಕೊಂಡು ಟೊಮ್ಯಾಟೊ ಉತ್ಪಾದನಾ ತಂತ್ರಜ್ಞಾನ ಕುರಿತು ಪಿಪಿಟಿ ಪ್ರದರ್ಶಿಸಲಾಯಿತು.
ಈ ವೇಳೆ ಮಾತನಾಡಿದ ಕೃಷಿ ಮಹಾವಿದ್ಯಾಲಯದ ತೋಟಗಾರಿಕೆ ವಿಭಾಗದ ಡಾ.ನಾಗಪ್ಪ ದೇಸಾಯಿ ಅವರು ಟೊಮ್ಯಾಟೊ ಉತ್ಪಾದನಾ ತಂತ್ರಜ್ಞಾನ ಕುರಿತು ವಿಶೇಷ ಉಪನ್ಯಾಸ ನೀಡಿದರು. ಟೊಮೆಟೊ ಬೆಳೆಯಲ್ಲಿಅಧಿ ಕ ಇಳುವರಿ ಪಡೆಯುವ ಆಧುನಿಕ ತಂತ್ರಜ್ಞಾನಗಳು, ರೋಗ ಹಾಗೂ ಕೀಟ ನಿರ್ವಹಣೆಯ ಬಗ್ಗೆ ರೈತರೊಂದಿಗೆ ವಿವರವಾದ ಮಾಹಿತಿ ಹಂಚಿಕೊಂಡರು.
ಇದೇ ವೇಳೆ ರೈತರು ತಮ್ಮ ಕೃಷಿ ಜಮೀನಿನಲ್ಲಿಎದುರಿಸುತ್ತಿರುವ ಸಮಸ್ಯೆಗಳ ಕುರಿತು ಕೇಳಿದ ನಾನಾ ಪ್ರಶ್ನೆಗಳಿಗೆ ಡಾ.ನಾಗಪ್ಪ ದೇಸಾಯಿ ಅವರು ವೈಜ್ಞಾನಿಕವಾಗಿ ಉತ್ತರಿಸಿ, ರೈತರ ಎಲ್ಲಸಂದೇಹಗಳನ್ನು ಪರಿಹರಿಸುವ ಪ್ರಯತ್ನ ಮಾಡಿದರು. ರೈತರ ಸಕ್ರಿಯ ಭಾಗಿತ್ವದಿಂದಾಗಿ ಕಾರ ್ಯಕ್ರಮವು ಯಶಸ್ವಿಯಾಯಿತು. 30ರಿಂದ 35ಕ್ಕೂ ಹೆಚ್ಚು ಉತ್ಸಾಹಿ ರೈತರು ಕೃಷಿಯಲ್ಲಿನ ತಮ್ಮ ಅನುಭವ ಮತ್ತು ಸಮಸ್ಯೆಗಳನ್ನು ತೋಡಿಕೊಂಡರು.
ಅಂತಿಮ ವರ್ಷದ ಕೃಷಿ ವಿದ್ಯಾರ್ಥಿಗಳು ಆಯೋಜಿಸಿದ್ದ ಈ ಕಾರ ್ಯಕ್ರಮವು ಗ್ರಾಮದ ರೈತರಿಗೆ ಆಧುನಿಕ ತೋಟಗಾರಿಕೆ ಪದ್ಧತಿಗಳನ್ನು ಅಳವಡಿಸಿಕೊಳ್ಳಲು ಮತ್ತು ಕೃಷಿಯಲ್ಲಿಲಾಭ ಗಳಿಸಲು ಬಹಳಷ್ಟು ಸಹಕಾರಿಯಾಯಿತು.
==========================
ಮಂಡ್ಯ: ಫೋಟೋ ಶೀರ್ಷಿಕಗಳು...
ಎಂಡಿವೈ22ಎನ್ 7
ಪಾಂಡವಪುರ ತಾಲೂಕು ಮೇಲುಕೋಟೆ ಸಮೀಪದ ತಾಳೇಕೆರೆ ಗ್ರಾಮದಲ್ಲಿಮನೆಯೊಂದರಲ್ಲಿಕೃಷಿ ಮಹಾವಿದ್ಯಾಲಯದ ಅಂತಿಮ ವರ್ಷದ ಕೃಷಿ ಪದವಿ ವಿದ್ಯಾರ್ಥಿಗಳ ಗ್ರಾಮೀಣ ಕೃಷಿ ಕಾರಾರ ಯನುಭವ ಶಿಬಿರದ ಅಂಗವಾಗಿ ಟೊಮ್ಯಾಟೊ ಉತ್ಪಾದನಾ ತಂತ್ರಜ್ಞಾನ ಕುರಿತು ವಿಶೇಷ ಮಾಹಿತಿ ಕಾರ ್ಯಕ್ರಮ ವಿಶೇಷವಾಗಿ ನಡೆಯಿತು.