ಡಾ.ಆರತಿ ಕೃಷ್ಣ ನೂತನ ತಂಗುದಾಣ ಉದ್ಘಾಟನೆ ನಿಲ್ದಾಣದ Ó

Contributed byagsbhat.vk@gmail.com|Vijaya Karnataka
dr aarthi krishna inaugurates new bus terminal
ಪ್ರಯಾಣಿಕರ ಬಸ್ ತಂಗುದಾಣ ಉದ್ಘಾಟಿಸಿದ ಡಾ.ಆರತಿ ಕೃಷ್ಣ

ನಿಲ್ದಾಣದ ಸ್ವಚ್ಛತೆಗೆ ಆದ್ಯತೆ ನೀಡಲು ಸೂಚನೆ
ವಿಕ ಸುದ್ದಿಲೋಕ ಜಯಪುರ

ಕೊಪ್ಪ ತಾಲೂಕಿನ ಕಮ್ಮರಡಿ, ನರಸಿಂಹರಾಜಪುರ, ಜಯಪುರ ಮುಂತಾದ ಕಡೆಗಳಲ್ಲಿಪ್ರಯಾಣಿಕರಿಗೆ ಅನುಕೂಲ ಕಲ್ಪಿಸಲು ಸುಸಜ್ಜಿತ ಬಸ್ ತಂಗುದಾಣಗಳನ್ನು ನಿರ್ಮಿಸಿದ್ದು, ಸ್ಥಳೀಯ ಪಂಚಾಯಿತಿ ಪಿಡಿಒಗಳು ಅವುಗಳ ನಿರ್ವಹಣೆಯನ್ನು ಸೂಕ್ತವಾಗಿ ಮಾಡಬೇಕು ಎಂದು ವಿಧಾನ ಪರಿಷತ್ ಸದಸ್ಯೆ ಡಾ.ಆರತಿ ಕೃಷ್ಣ ಸೂಚಿಸಿದರು.

ಪಟ್ಟಣದ ಹಳೆ ಅಂಚೆ ಕಚೇರಿ ಸಮೀಪ ವಿನೂತನ ಶೈಲಿಯಲ್ಲಿನಿರ್ಮಾಣಗೊಂಡ ಡಾ.ಆರತಿ ಕೃಷ್ಣ ನೂತನ ತಂಗುದಾಣವನ್ನು ಉದ್ಘಾಟಿಸಿದ ಬಳಿಕ ಪಂಚಾಯಿತಿ ಸಭಾಂಗಣದಲ್ಲಿನಡೆದ ಸಭಾ ಕಾರ್ಯಕ್ರಮದಲ್ಲಿಅವರು ಮಾತನಾಡಿದರು.

ರಾಜ್ಯದ ಅನೇಕ ಕಡೆಗಳಿಂದ ತಂಗುದಾಣಗಳ ನಿರ್ಮಾಣಕ್ಕೆ ಬೇಡಿಕೆ ಬರುತ್ತಿದ್ದು, ತಮಗೆ ಲಭ್ಯವಾಗುವ 2 ಕೋಟಿ ರೂ. ಅನುದಾನದಲ್ಲಿಎಲ್ಲವನ್ನೂ ಪೂರೈಸಲು ಸಾಧ್ಯವಾಗುವುದಿಲ್ಲ. ರಸ್ತೆ, ದೇವಸ್ಥಾನ, ಕಾಲು ಸೇತುವೆ ಅಭಿವೃದ್ಧಿ, ಅಡಕೆ ಬೆಳೆಗಾರರು ಎದುರಿಸುತ್ತಿರುವ ಎಲೆಚುಕ್ಕಿ ರೋಗ, ಪಶ್ಚಿಮ ಘಟ್ಟ ಪ್ರದೇಶಗಳಲ್ಲಿಜಾರಿಯಾಗುತ್ತಿರುವ ಮಾರಕ ಯೋಜನೆಗಳ ಕುರಿತು ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಲಾಗುವುದು ಎಂದು ಭರವಸೆ ನೀಡಿದರು.

ಮಲೆನಾಡು ಪ್ರಾಂತೀಯ ಅಡಕೆ ಬೆಳೆಗಾರರ ಸಂಘದ ನಿಯೋಗದೊಂದಿಗೆ ಆ. 24 ರಂದು ಬೆಂಗಳೂರಿಗೆ ತೆರಳಿ ಸಚಿವರಾದ ಯು.ಟಿ.ಖಾದರ್ , ರಾಮಲಿಂಗಾ ರೆಡ್ಡಿ ಅವರೊಂದಿಗೆ ಚರ್ಚಿಸಲಾಗುವುದು. ಕ್ಷೇತ್ರದ ಅಭಿವೃದ್ಧಿಗೆ ಹೆಚ್ಚಿನ ಕೊಡುಗೆ ನೀಡುತ್ತಿರುವ ಶಾಸಕ ಟಿ.ಡಿ.ರಾಜೇಗೌಡ ಅವರ ಕೆಲಸ ಕಾರ್ಯಗಳಲ್ಲೂ ಕೈ ಜೋಡಿಸುವೆ ಎಂದರು.

ಜಿ.ಪಂ. ಮಾಜಿ ಅಧ್ಯಕ್ಷ ಎಚ್ .ಎಂ.ಸತೀಶ್ ಮಾತನಾಡಿ, ಪ್ರಯಾಣಿಕರ ಸುರಕ್ಷತೆ ದೃಷ್ಟಿಯಿಂದ ಡಾ.ಆರತಿ ಕೃಷ್ಣರವರು ಮಹಾನಗರದ ಮಾದರಿಯಲ್ಲಿತಂಗುದಾಣ ನಿರ್ಮಿಸಿ ಕೊಟ್ಟಿದ್ದಾರೆ. ಜತೆಗೆ ಮಲೆನಾಡಿನ ಅಡಕೆ ಬೆಳೆಗಾರರ ಜ್ವಲಂತ ಸಮಸ್ಯೆಗಳ ಪರಿಹಾರದ ಬಗ್ಗೆ ಸರಕಾರದ ಗಮನ ಸೆಳೆಯಬೇಕು ಎಂದು ಆಗ್ರಹಿಸಿದರು.

ತಾಲೂಕು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಸ್ .ರವೀಂದ್ರ, ಗ್ಯಾರಂಟಿ ಸಮಿತಿ ಅಧ್ಯಕ್ಷ ಓಣಿತೋಟ ರತ್ನಾಕರ್ , ಮಲೆನಾಡು ಪ್ರಾಂತೀಯ ಅಡಕೆ ಬೆಳೆಗಾರರ ಸಂಘದ ಅಧ್ಯಕ್ಷ ತಲವಾನೆ ಟಿ.ಪ್ರಕಾಶ್ , ಪಂಚಾಯಿತಿ ಮಾಜಿ ಸದಸ್ಯ ಶೆಟ್ರತೋಟ ಫಣಿರಾಜ್ , ಪಿಎಸಿಎಸ್ ಅಧ್ಯಕ್ಷ ಡಿ.ಬಿ.ರಾಜೇಂದ್ರ, ಎ.ಸಿ.ವಜ್ರಪ್ಪ, ಕೌಳಿ ಕೆ.ಎಸ್ .ಶ್ರೀನಿವಾಸ್ , ಡಿ.ಎನ್ .ಕೇಶವಮೂರ್ತಿ, ಪಿಡಿಒ ಶಿವಕುಮಾರ್ , ಪ್ರವೀಣ್ ಮತ್ತಿತರರು ಉಪಸ್ಥಿತರಿದ್ದರು.

ಇಲ್ಲಿನ ಸಮುದಾಯ ಆರೋಗ್ಯ ಕೇಂದ್ರಕ್ಕೆ ಭೇಟಿ ನೀಡಿದ ಆರತಿ ಕೃಷ್ಣ ಅವರು, ವೈದ್ಯಾಧಿಕಾರಿ ಡಾ.ನಿರಂಜನ್ ಅವರೊಂದಿಗೆ ಆಸ್ಪತ್ರೆಯ ಕುಂದು ಕೊರತೆಗಳ ಮಾಹಿತಿ ಪಡೆದರು.

ನಿಲ್ದಾಣದಲ್ಲಿಸಂಸ್ಕೃತಿಯ ಅನಾವರಣ

ಉತ್ಕೃಷ್ಟ ಕಬ್ಬಿಣದ ಪರಿಕರಗಳಿಂದ ನಿರ್ಮಿಸಿರುವ ತಂಗುದಾಣದಲ್ಲಿಮುಳ್ಳಯ್ಯನಗಿರಿ, ದೇವೀರಮ್ಮ, ಕಲ್ಲತ್ತಗಿರಿ, ಮುತ್ತೋಡಿ, ಎತ್ತಿನ ಭುಜ, ಜೋಗಜಲಪಾತಗಳ ಆಕರ್ಷಕ ಚಿತ್ರಗಳನ್ನು ಅಳವಡಿಸುವ ಮೂಲಕ ನಾಡಿನ ಸಂಸ್ಕೃತಿ ಅನಾವರಣಗೊಳಿಸಲಾಗಿದೆ.

22ಜೆಪಿಆರ್ 1 ಜಯಪುರದ ಪಂಚಾಯಿತಿ ಸಭಾಂಗಣದಲ್ಲಿನಡೆದ ಕಾರ್ಯಕ್ರಮದಲ್ಲಿವಿಧಾನ ಪರಿಷತ್ ಸದಸ್ಯೆ ಡಾ. ಆರತಿ ಕೃಷ್ಣ ಮಾತನಾಡಿದರು.

22ಜೆಪಿಆರ್ 2 ಪ್ರಯಾಣಿಕರ ನೂತನ ತಂಗುದಾಣ.