ಹೂಗಾರ ಸಮಾಜ ಸಂಘಟನೆಯಾಗಲಿ

Contributed byravideshpande77@gmail.com|Vijaya Karnataka
the achievements of the horticultural community in various organizational fields
ಹೂಗಾರ ಸಮಾಜ ಸಂಘಟನೆಯಾಗಲಿ

ವಿಕ ಸುದ್ದಿಲೋಕ ಬಾಗಲಕೋಟೆ
ಸರಳ ಸಜ್ಜನಿಕೆಯ ಸಮಾಜವಾಗಿರುವ ಹೂಗಾರ ಸಮಾಜದ ಸದಸ್ಯರು ಸಂಘಟನಾತ್ಮಕ ಹಾಗೂ ಸಮಾಜಮುಖಿ ಕಾರ್ಯದೊಂದಿಗೆ ಮಕ್ಕಳನ್ನು ಶೈಕ್ಷಣಿವಾಗಿ ಬೆಳೆಸಿ ಅಭಿವೃದ್ಧಿ ಹೊಂದಬೇಕೆಂದು ಶಾಸಕ ಉಮೇಶ ಮೇಟಿ ಹೇಳಿದರು.

ನಗರದ ವಿದ್ಯಾಗಿರಿಯ ಪದ್ಮಾವತಿ ಕಲ್ಯಾಣ ಮಂಟಪದಲ್ಲಿಹೂಗಾರ ಮಾದಯ್ಯ ಹಾಗೂ ಶಿವಶರಣೆ ಹೂಗಾರ ಶಂಕ್ರಮ್ಮನವರ ವೇದಿಕೆಯಲ್ಲಿಭಾನುವಾರ ನಡೆದ ಜಿಲ್ಲಾಹೂಗಾರ, ಜೀರ, ಗುರವ, ಪೂಜಾರ, ಫುಲಾರಿ ಸಮಾಜ ಸೇವಾ ಸಂಘದಿಂದ ಹಮ್ಮಿಕೊಂಡ ಜಿಲ್ಲಾಮಟ್ಟದ ಪ್ರತಿಭಾ ಪುರಸ್ಕಾರ ಹಾಗೂ ನಾನಾ ಕ್ಷೇತ್ರದಲ್ಲಿನ ಸಾಧಕರಿಗೆ ಹಮ್ಮಿಕೊಂಡ ಸನ್ಮಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಹೂಗಾರ ಸಮಾಜದ ಅಭಿವೃದ್ಧಿಗೆ ಬದ್ಧನಾಗಿರುವುದರೊಂದಿಗೆ ನಗರದಲ್ಲಿಹೂಗಾರ ಸಮಾಜಕ್ಕೆ ನಿವೇಶನ ಕೊಡಿಸಲು ಪ್ರಾಮಾಣಿಕ ಪ್ರಯತ್ನ ಮಾಡುವುದಾಗಿ ಹೇಳಿದರು.

ವಿಧಾನ ಪರಿಷತ್ ಸದಸ್ಯ ಪಿ.ಎಚ್ .ಪೂಜಾರ, ಸರ್ವ ಸಮಾಜದ ಧಾರ್ಮಿಕ ಕಾರ್ಯಕ್ರಮಗಳಿಗೆ ಹೂಗಾರರ ಸೇವೆ ಅನನ್ಯವಾಗಿದ್ದು, ತಮ್ಮ ನಾನಾ ಬೇಡಿಕೆಗಳ ಕುರಿತು ವಿಧಾನ ಪರಿಷತ್ ನಲ್ಲಿಧ್ವನಿ ಎತ್ತುವೆ ಎಂದ ಅವರು ಸಮಾಜದ ಒಗ್ಗಟ್ಟಿಗೆ ಶೈಕ್ಷಣಿಕ ಪ್ರಗತಿ ಅವಶ್ಯ ಎಂದರು.

ಕೇಂದ್ರ ಸರಕಾರ ನಿವೃತ್ತ ಪ್ರಾಂತಿಯ ನಿರ್ದೇಶಕ ಅರುಣ ಪೂಜಾರ ಉಪನ್ಯಾಸ ನೀಡಿ, ಸರಕಾರದ ವ್ಯವಸ್ಥೆಯಲ್ಲಿಹೂಗಾರ ಸಮಾಜ ಬಲಿಪಶುವಾಗಿದೆ. ಸಮಾಜ ಸುಧಾರಣೆಗೆ ಶಿಕ್ಷಣ ಅವಶ್ಯಕ. ಈ ದಿಶೆಯಲ್ಲಿಸಮಾಜ ಗಟ್ಟಿಗೊಳಿಸಲು ಒಗ್ಗಟ್ಟು ಅಗತ್ಯವಾಗಿದ್ದು ಇಂದಿನ ಯುವ ಪೀಳಿಗೆಗೆ ಮಾರ್ಗದರ್ಶನ ನೀಡಬೇಕೆಂದರು.

ಸಮಾಜದ ರಾಜ್ಯಾಧ್ಯಕ್ಷ ಬಸವರಾಜ ಹೂಗಾರ ಮಾತನಾಡಿದರು. 2025-26ನೇ ಸಾಲಿನಲ್ಲಿಎಸ್ಸೆಸ್ಸೆಲ್ಸಿ ಹಾಗೂ ಪಿಯುಸಿಯಲ್ಲಿಅತಿಹೆಚ್ಚು ಅಂಕ ಗಳಿಸಿದ ಸಮಾಜದ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ಹಾಗೂ ನಾನಾ ಕ್ಷೇತ್ರದಲ್ಲಿಸಾಧನೆಗೈದ ಸಮಾಜದ ಸಾಧಕರನ್ನು ಗೌರವಿಸಲಾಯಿತು.

ನದಿ ಸಿನ್ನೂರಿನ ಹೂಗಾರ ಮಾದಯ್ಯ ಶರಣರ ಶಕ್ತಿಪೀಠದ ಶ್ರೀಗುರುರಾಜೇಂದ್ರ ಶಿವಯೋಗಿಗಳು ಸಾನ್ನಿಧ್ಯ ವಹಿಸಿದ್ದರು. ಹೂಗಾರ ಸಮಾಜದ ಜಿಲ್ಲಾಧ್ಯಕ್ಷ ಹನಮಂತ ಹೂಗಾರ ಅಧ್ಯಕ್ಷತೆ ವಹಿಸಿದ್ದರು. ಮಹಾಲಿಂಗಪ್ಪ ಹೂಗಾರ, ಉಪಾಧ್ಯಕ್ಷ ಹನಮಂತ ಹೂಗಾರ, ಕಾರ್ಯದರ್ಶಿ ಪ್ರವೀಣ ಪೂಜಾರ, ಜಗನ್ನಾಥ ಹೂಗಾರ, ನಂದೆಪ್ಪ ಹೂಗಾರ, ಭಾರತಿ ಹೂಗಾರ, ಸಿದ್ದಪ್ಪ ಹೂಗಾರ, ಶಾಷಪ್ಪ ಹೂಗಾರ, ಮಲ್ಲಿಕಾರ್ಜುನ ಹೂಗಾರ ಶರಣಪ್ಪ ಹೂಗಾರ, ಮಲ್ಲಪ್ಪ ಗುರವ, ಕಾಶಿನಾಥ ಗುರುವ, ಶಿವಲಿಂಗಪ್ಪ ಹೂಗಾರ, ಶ್ರೀಶೈಲ ಗುರವ, ಶ್ರೀಶೈಲ ಹೂಗಾರ ಪದಾಧಿಕಾರಿಗಳು, ಸಮಾಜದ ಸದಸ್ಯರು ಇದ್ದರು.

ಹೂಗಾರ-ಬಿಜಿಕೆ-23

ಬಾಗಲಕೋಟೆಯಲ್ಲಿಜರುಗಿದ ಜಿಲ್ಲಾಹೂಗಾರ ಸಮಾಜದಿಂದ ಹಮ್ಮಿಕೊಂಡ ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶಾಸಕ ಉಮೇಶ ಮೇಟಿ ಉದ್ಘಾಟಿಸಿದರು.