ಕೇರಳ ಬ್ಯಾಂಕ್ ಎಂಪ್ಲೋಯಿಸ್ ಕಾಂಗ್ರೆಸ್ : ಓಣಂ ಆಚರಣೆ , ಬೀಳ್ಕೊಡುಗೆ ಮತ್ತು ಶಾಸಕರಿಗೆ ಅಭಿನಂದನೆ
ಕಾಸರಗೋಡು: ಕೇರಳ ಬ್ಯಾಂಕ್ ಎಂಪ್ಲೋಯಿಸ್ ಕಾಂಗ್ರೆಸ್ ಜಿಲ್ಲಾಸಮಿತಿಯ ಆಶ್ರಯದಲ್ಲಿಓಣಂ ಆಚರಣೆ, ಬೀಳ್ಕೊಡುಗೆ ಸಮಾರಂಭ ಮತ್ತು ಜಿಲ್ಲೆಯ ಶಾಸಕರಿಗೆ ಅಭಿನಂದನೆ ಕಾರ್ಯಕ್ರಮ ಕಾಸರಗೋಡಿನ ಕೇರಳ ಬ್ಯಾಂಕ್ ಕಾನ್ಫರೆನ್ಸ್ ಹಾಲ್ ನಲ್ಲಿನಡೆಯಿತು.ಈ ಬಗ್ಗೆ ನಡೆದ ಸಮಾರಂಭವನ್ನು ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ಉದ್ಘಾಟಿಸಿ ಮಾತನಾಡಿದರು. ಕೇರಳ ಬ್ಯಾಂಕ್ ನೌಕರರ ಕಾಂಗ್ರೆಸ್ ಜಿಲ್ಲಾಅಧ್ಯಕ್ಷ ಪಿ. ಉಣ್ಣಿಕೃಷ್ಣ್ಣನ್ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭದಲ್ಲಿಕೇರಳ ಬ್ಯಾಂಕ್ ನೌಕರರ ಕಾಂಗ್ರೆಸ್ ನ ಸಕ್ರಿಯ ಕಾರ್ಯಕರ್ತ ಮತ್ತು ಸೇವೆಯಿಂದ ನಿವೃತ್ತರಾಗುತ್ತಿರುವ ಸಿಪಿಸಿ ಐಟಿ ವಿಭಾಗ ವ್ಯವಸ್ಥಾಪಕ ಸಿ.ಎಸ್ . ಕೃಷ್ಣ ಕುಮಾರ್ ಬಲ್ಲಾಳ್ ಅವರನ್ನು ಸನ್ಮಾನಿಸಲಾಯಿತು. ಶಾಸಕರಾದ ಕಲ್ಲಟ್ರ ಮಾಹಿನ್ , ಎ.ಕೆ.ಎಂ. ಅಶ್ರಫ್ ಮತ್ತು ಕೆ. ನೀಲಕಂಠನ್ ಅವರನ್ನು ಸಮಾರಂಭದಲ್ಲಿಸನ್ಮಾನಿಸಲಾಯಿತು. ಕೆಬಿಆರ್ ಎ ಅಧ್ಯಕ್ಷ ಸತ್ಯನಾಥನ್ ನಂಬಿಯಾರ್ , ವನಿತಾ ವೇದಿಕೆ ಸಂಚಾಲಕಿ ಪಿ.ಲತಾ, ಎಕೆಬಿಇಎಫ್ ಅಧ್ಯಕ್ಷ ಪಿ.ವಿ. ಸುಬ್ರಮಣಿಯನ್ ಮತ್ತು ಜಂಟಿ ಕಾರ್ಯದರ್ಶಿ ಕೆ. ಶ್ರೀರೇಖಾ ಉಪಸ್ಥಿತರಿದ್ದರು. ಕೇರಳ ಬ್ಯಾಂಕ್ ನೌಕರರ ಕಾಂಗ್ರೆಸ್ ಜಿಲ್ಲಾಪ್ರಧಾನ ಕಾರ್ಯದರ್ಶಿ ಎ. ಪ್ರಕಾಶ್ ರಾವ್ ಸ್ವಾಗತಿಸಿದರು. ಮತ್ತು ಜಿಲ್ಲಾಕಾರ್ಯದರ್ಶಿ ಕೆ.ವಿ. ಶ್ರೀಜಿತ್ ಕುಮಾರ್ ವಂದಿಸಿದರು. ತಿರುವಾದಿರ ಮತ್ತು ಓಣಂ ಸಧ್ಯವನ್ನು ಏರ್ಪಡಿಸಲಾಯಿತು.