ವಿದ್ಯುತ್ ತಂತಿ ಸುತ್ತಿದ ಬಳ್ಳಿ

Contributed bymaheshbadiger05@gmail.com|Vijaya Karnataka
constant danger from plants touching electric poles
8ಮಹೇಶ7

ಅಪಾಯದ ಆತಂಕ, ತೆರವಿಗಿಲ್ಲಕ್ರಮ, ಭಯದಲ್ಲೇ ಜನರ ಓಡಾಟ
ವಿದ್ಯುತ್ ತಂತಿ ಸುತ್ತಿದ ಬಳ್ಳಿ

-ಹಲವೆಡೆ ವಿದ್ಯುತ್ ಕಂಬ, ತಂತಿಗೆ ಹಬ್ಬಿದ ಬಳ್ಳಿ

-ಹಸಿರು ಬಳ್ಳಿಯಲ್ಲಿವಿದ್ಯುತ್ ಪ್ರವಹಿಸುವ ಸಾಧ್ಯತೆ

ಮಹೇಶ ಬಡಿಗೇರ ಧಾರವಾಡ

ಞahಛಿshಚಿadಜಿಜಛ್ಟಿ05ಃಜಞaಜ್ಝಿ.್ಚಟಞ

ನಗರದ ಪ್ರಮುಖ ರಸ್ತೆ ಬದಿಗಳಲ್ಲಿರುವ ವಿದ್ಯುತ್ ಕಂಬಗಳಿಗೆ ಹಾಗೂ ತಂತಿಗಳ ಮೇಲೆ ಬಳ್ಳಿಗಳು ಬೆಳೆದು ನಿಂತಿದ್ದು, ಇದರಿಂದ ಅಪಘಾತಗಳಾಗುವ ಆತಂಕ ಮೂಡಿದೆ. ಈ ಭಾಗದಲ್ಲಿಜನರು ಜೀವ ಭಯದಲ್ಲಿಯೇ ಓಡಾಡುವ ಸ್ಥಿತಿ ನಿರ್ಮಾಣಗೊಂಡಿದೆ.

ಧಾರವಾಡ ಕೋರ್ಟ್ ವೃತ್ತ, ಹೆಬ್ಬಳ್ಳಿ ಅಗಸಿ, ಚರಂತಿಮಠ ಗಾರ್ಡನ್ , ಡಿಪೋ ವೃತ್ತ, ಸಪ್ತಾಪುರ ರಸ್ತೆ, ದಾಸನಕೊಪ್ಪ ರಸ್ತೆ, ಜಯನಗರ ರಸ್ತೆ, ಕೆಲಗೇರಿ ರಸ್ತೆ, ಕಲ್ಯಾಣನಗರ ರಸ್ತೆ, ಸಾಧನಕೇರಿ ರಸ್ತೆ, ಸಂಪಿಗೆನಗರ ರಸ್ತೆ ಸೇರಿದಂತೆ ಬಹುತೇಕ ಕಡೆ ಈ ಸಮಸ್ಯೆ ಇದೆ. ರಸ್ತೆ ಬದಿಯ ವಿದ್ಯುತ್ ಕಂಬಗಳ ತಂತಿಗೆ ಸುತ್ತುವರೆದ ಬಳ್ಳಿಗಳು ಜೋರಾಗಿ ಗಾಳಿ ಬೀಸಿದರೆ ಶಾರ್ಟ್ ಸಕ್ರ್ಯೂಟ್ ಆಗುವ ಅಪಾಯಗಳಿವೆ. ಇನ್ನು ನೆಲದಿಂದ ಬಳ್ಳಿ ಹಬ್ಬಿದ್ದರಿಂದ ಈ ಹಸಿ ಕಾಂಡದ ಮೂಲಕ ವಿದ್ಯುತ್ ಪ್ರವಹಿಸುವ ಸಾಧ್ಯತೆಗಳಿವೆ.

ಬಹುತೇಕ ಕಡೆಯ ವಿದ್ಯುತ್ ತಂತಿಗಳು ಬಳ್ಳಿಯಲ್ಲಿಯೇ ಮುಚ್ಚಿಕೊಂಡಿವೆ. ಮಳೆಗಾಲದ ಈ ಕಾಲದಲ್ಲಿಹಸಿರು ಬಳ್ಳಿ ಯಾರ ಉಸಿರು ನಿಲ್ಲಿಸುವುದೋ ಎಂಬ ದುಗುಡ ಜನರದ್ದು. ಜನನಿಬಿಡ ಪ್ರದೇಶಗಳಲ್ಲಿಯೇ ಈ ರೀತಿ ವಿದ್ಯುತ್ ತಂತಿಗಳಿಗೆ ಬಳ್ಳಿ ಹಬ್ಬಿದ್ದರೂ ಅದನ್ನು ತೆರವುಗೊಳಿಸುವ ಗೋಜಿಗೆ ಯಾರೂ ಹೋಗಿಲ್ಲ. ಇನ್ನು ಒಳರಸ್ತೆಗಳಲ್ಲಿನ ವಿದ್ಯುತ್ ಕಂಬಗಳ ಸ್ಥಿತಿ ಕೇಳುವಂತಿಲ್ಲಎಂದು ಸಾರ್ವಜನಿಕರು ಬೇಸರ ವ್ಯಕ್ತಪಡಿಸುತ್ತಾರೆ.

ವಿದ್ಯುತ್ ಕಂಬಗಳು ರಸ್ತೆ ಪಕ್ಕದಲ್ಲಿಯೇ ಇವೆ. ಇದೇ ರಸ್ತೆಯಲ್ಲಿಯೇ ನಿತ್ಯವೂ ಮಕ್ಕಳು, ವೃದ್ಧರು ಓಡಾಡುತ್ತಾರೆ. ಅವರಿಗೆ ರಸ್ತೆ ಬದಿಯಲ್ಲಿರುವ ವಿದ್ಯುತ್ ಕಂಬಗಳಲ್ಲಿನ ತಂತಿಗೆ ಸುತ್ತಿಕೊಂಡಿರುವ ಬಳ್ಳಿಗಳ ಬಗ್ಗೆ ಗೊತ್ತೇ ಆಗುತ್ತಿಲ್ಲ. ಇಂತಹುದರಲ್ಲಿಹಸಿರು ಬಳ್ಳಿ ಮೂಲಕ ವಿದ್ಯುತ್ ಪ್ರವಹಿಸಿದರೆ ಅಥವಾ ಕಿಡಿ ಹೊತ್ತಿ ಅನಾಹುತಗಳಾದರೆ ಯಾರು ಹೊಣೆ? ಇನ್ನಾದರೂ ಸಂಬಂಧಿಸಿದ ಅಧಿಕಾರಿಗಳು ಅಪಾಯಗಳು ಆಗುವ ಮೊದಲೇ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬುದು ಪ್ರಾಜ್ಞರ ಆಗ್ರಹ.

ಕೋಟ್ ...

ವಿದ್ಯುತ್ ಕಂಬ ಹಾಗೂ ತಂತಿಗಳಿಗೆ ಬಳ್ಳಿ ಸುತ್ತಿಕೊಂಡಿರುವ ವಿಷಯ ನಮ್ಮ ಗಮನಕ್ಕೆ ಬಂದಿದೆ. ಕಂಬಗಳಲ್ಲಿರುವ ಬಳ್ಳಿಗಳನ್ನು ತೆಗೆಯುವ ಪ್ರಕ್ರಿಯೆ ಆರಂಭಿಸಿದ್ದೇವೆ.

-ಮಂಜುನಾಥ ಟಿಂಗರಿಕರ, ಹೆಸ್ಕಾಂ ಎಇಇ ಅಧಿಕಾರಿ

ಕೋಟ್ ...

ಮಳೆಗಾಲದಲ್ಲಿಗಾಳಿ ಬೀಸುವುದು ಸಾಮಾನ್ಯ. ವಿದ್ಯುತ್ ಕಂಬಗಳ ತಂತಿಗೆ ಸುತ್ತುವರೆದ ಬಳ್ಳಿಗಳಿಂದ ಶಾರ್ಟ್ ಸರ್ಕಿಟ್ ಆದರೆ ಅಪಾಯಗಳಾಗಬಹುದು. ಹೆಸ್ಕಾಂ ವಿಶೇಷ ಕಾರ್ಯಾಚರಣೆ ನಡೆಸಿ ವಿದ್ಯುತ್ ಕಂಬ ಮತ್ತು ತಂತಿಗಳನ್ನು ಸ್ಪರ್ಶಿಸಿರುವ ಬಳ್ಳಿಗಳನ್ನು ಬುಡ ಸಮೇತ ಕತ್ತರಿಸಿ ತೆರೆಯಬೇಕು.

-ಉದಯ ಯಂಡಿಗೇರಿ, ಧಾರವಾಡ ನಿವಾಸಿ

ಬಾಕ್ಸ್ ..

ಕಂಬದಿಂದ ಬರುವ ವಿದ್ಯುತ್ ಕಿಡಿ

ಧಾರವಾಡದಲ್ಲಿರುವ ಬಹಳಷ್ಟು ರಸ್ತೆ ಬದಿಯ ವಿದ್ಯುತ್ ಕಂಬಗಳ ತಂತಿಗೆ ಸುತ್ತುವರೆದ ಬಳ್ಳಿಗಳಿಂದ ಯಾವಾಗ ಕಿಡಿಗಳು ಹತ್ತಿ ಕೆಳಗಡೆ ಬೀಳುತ್ತವೆ ಎಂದು ಗೊತ್ತಾಗುವುದಿಲ್ಲ. ಇತ್ತೀಚೆಗೆ ಇಲ್ಲಿನ ಕೋರ್ಟ್ ವೃತ್ತದ ಪಕ್ಕದ ರಸ್ತೆ ಬದಿಯಲ್ಲಿನ ಕಂಬದಿಂದ ಕಿಡಿಗಳು ಬಿದ್ದಿವೆ. ಒಂದು ವೇಳೆ ಕಿಡಿಗಳು ಪಾದಚಾರಿಗಳ ಮೇಲೆ ಬಿದ್ದು ಏನಾದರೂ ಅನಾಹುತವಾದರೆ ಯಾರು ಹೊಣೆ? ಆದ್ದರಿಂದ ಹೆಚ್ಚಿನ ಆನಾಹುತವಾಗುವ ಮುಂಚೆಯೇ ಜನರಿಗೆ ತೊಂದರೆಯಾಗುವ ರೀತಿಯಲ್ಲಿರುವ ರಸ್ತೆ ಬದಿಯ ವಿದ್ಯುತ್ ಕಂಬಗಳ ತಂತಿಗೆ ಜೋತು ಬಿದ್ದಿರುವ ಬಳ್ಳಿಗಳನ್ನು ತೆಗೆಸಲು ಸಂಬಂಧಿಸಿದ ಹೆಸ್ಕಾಂ ಅಧಿಕಾರಿಗಳು ಮುಂದಾಗಬೇಕೆನ್ನುವುದು ಸಾರ್ವಜನಿಕರ ಒತ್ತಾಯ.

ಫೋಟೊ: 8ಮಹೇಶ7

ಧಾರವಾಡ ಕೋರ್ಟ್ ವೃತ್ತದ ಹತ್ತಿರ ವಿದ್ಯುತ್ ಕಂಬ ಸಂಪೂರ್ಣ ಬಳ್ಳಿಯಲ್ಲೇ ಮುಚ್ಚಿಕೊಂಡಿದೆ.

ಫೋಟೊ: 8ಮಹೇಶ7,ಎ

ಧಾರವಾಡ ಚರಂತಿಮಠ ಗಾರ್ಡನ್ ಹತ್ತಿರದ ವಿದ್ಯುತ್ ಕಂಬ.

ಫೋಟೊ: 8ಮಹೇಶ7,ಬಿ

ಧಾರವಾಡ ಡಿಪೋ ವೃತ್ತದ ಹತ್ತಿರವಿರುವ ವಿದ್ಯುತ್ ಕಂಬ.