ಕೃಷಿ ಸಖಿಗಳ ಗೌರವಧನ ಹೆಚ್ಚಿಸಲು ಮನವಿ

Contributed byvijaykumarhs9740@gmail.com|Vijaya Karnataka
demand for increase in honorarium for karnataka agricultural groups
ಕೃಷಿ ಸಖಿಗಳ ಗೌರವಧನ ಹೆಚ್ಚಿಸಲು ಮನವಿ

ವಿಕ ಸುದ್ದಿಲೋಕ ನೆಲಮಂಗಲ
ಕೃಷಿ ಇಲಾಖೆ ಹಾಗೂ ವಿವಿಧ ಇಲಾಖೆಗಳಲ್ಲಿಕಾರ ್ಯ ನಿರ್ವಹಿಸುತ್ತಿರುವ ಕೃಷಿ ಸಖಿಗಳ ಗೌರವ ಧನ ಹೆಚ್ಚಿಸಲು ಸರಕಾರಕ್ಕೆ ಒತ್ತಾಯಿಸುವಂತೆ ಶಾಸಕ ಎನ್ .ಶ್ರೀನಿವಾಸ್ ಅವರಿಗೆ ನೆಲಮಂಗಲ ತಾಲೂಕಿನ ಕೃಷಿ ಸಖಿಯರು ಮನವಿ ಮಾಡಿದರು.

ನಗರದ ವಿವರ್ಸ್ ಕಾಲೊನಿಯಲ್ಲಿನ ಶಾಸಕರ ಕಚೇರಿಗೆ ಭೇಟಿ ನೀಡಿದ ಕೃಷಿ ಸಖಿಯರಿಂದ ಮನವಿ ಸ್ವೀಕರಿಸಿ ಶಾಸಕ ಎನ್ .ಶ್ರೀನಿವಾಸ್ , ಈ ಸಮಸ್ಯೆ ರಾಜ್ಯ ಮಟ್ಟದ್ದು, ನಾನು ನಿಮ್ಮ ಪರವಾಗಿ ಮುಖ್ಯಮಂತ್ರಿಗೆ ಗೌರವಧನ ಹೆಚ್ಚಿಸಲು ಮನವಿ ಮಾಡುತ್ತೇನೆ. ಆದರೆ, ಮಾಡಿಸುತ್ತೇನೆಂಬ ಭರವಸೆ ನೀಡಲು ಸಾಧ್ಯವಿಲ್ಲ, ಪ್ರಯತ್ನ ಖಂಡಿತವಾಗಿ ಮಾಡುವುದಲ್ಲದೆ, ನನ್ನ ಲೆಟರ್ ಮೂಲಕ ಸಿಎಂಗೆ ಒತ್ತಾಯಿಸುತ್ತೇನೆ. ನಿಮ್ಮ ಕೆಲಸಕ್ಕೆ ತಕ್ಕ ಗೌರವ ಧನ ಸಿಗುತ್ತಿಲ್ಲಎಂಬುದು ಗಮನದಲ್ಲಿದೆ. ನಮ್ಮ ಹಂತದಲ್ಲಿಸಹಕಾರ ಮಾಡುವ ಅವಕಾಶವಿದ್ದರೆ ಮೊದಲ ಆದ್ಯತೆಯಾಗಿ ಮಾಡುತ್ತೇನೆ. ನಿಮ್ಮ ಸಂಘಟನೆಗಳು ರಾಜ್ಯ ಮಟ್ಟದಲ್ಲಿಒತ್ತಾಯಿಸಿದರೆ ಖಂಡಿತ ನಿಮ್ಮ ಮನವಿಯನ್ನು ಸರಕಾರ ಪುರಸ್ಕರಿಸುತ್ತದೆ ಎಂದರು.

ಮನವಿ: ಕೃಷಿ ಸಖಿಗಳಿಗೆ ತಿಂಗಳಿಗೆ 4.5 ಸಾವಿರ ಗೌರವ ಧನ ನೀಡಲಾಗುತ್ತಿದ್ದು, ವಿವಿಧ ಇಲಾಖೆಗಳ ಕೆಲಸವನ್ನು ನಾವೇ ಮಾಡಬೇಕಿದೆ. ರೈತರ ಭೇಟಿಗೆ ಬಸ್ ಟಿಕೆಟ್ , ಗಾಡಿಗಳಿಗೆ ಪೆಟ್ರೋಲ್ ವ್ಯವಸ್ಥೆ ಮಾಡುವುದಿಲ್ಲ. ಆದ್ದರಿಂದ ಕೃಷಿ ಸಖಿಗಳಿಗೆ 10ರಿಂದ 15 ಸಾವಿರ ಗೌರವ ಧನ ನೀಡಲು ನಮ್ಮ ಪರವಾಗಿ ಸರಕಾರದ ಗಮನಕ್ಕೆ ತಂದು ಸದನದಲ್ಲಿಒತ್ತಾಯಿಸಲು ಶಾಸಕರಿಗೆ ಮನವಿ ಮಾಡಲಾಗಿದೆ ಎಂದು ಕೃಷಿ ಸಖಿಯರು ತಿಳಿಸಿದರು.

12ನೆಲಪಿಹೆಚ್ 1: ನೆಲಮಂಗಲ ತಾಲೂಕಿನ ಶಾಸಕರ ಕಚೇರಿಯಲ್ಲಿಕೃಷಿ ಸಖಿಯರು ಶಾಸಕರನ್ನು ಭೇಟಿ ಮಾಡಿ, ಗೌರವ ಧನ ಹೆಚ್ಚಿಗೆ ಮಾಡಲು ಸರಕಾರಕ್ಕೆ ಒತ್ತಾ¿ಯಿಸುವಂತೆ ಮನವಿ ಮಾಡಿದರು.