ಗಂಗಾಮತಸ್ಥ ಶಾಸಕರಿಗೆ ಪ್ರಾತಿನಿಧ್ಯ ನೀಡಿವಿಕ ಸುದ್ದಿಲೋಕ ಧಾರವಾಡ
ರಾಜ್ಯದ ಸಚಿವ ಸಂಪುಟದಲ್ಲಿಗಂಗಾಮತಸ್ಥ ಸಮಾಜದ ಶಾಸಕರಿಗೆ ಸೂಕ್ತ ಪ್ರಾತಿನಿಧ್ಯ ನೀಡಬೇಕು ಎಂದು ಜಿಲ್ಲಾಗಂಗಾಮತಸ್ಥರ ಹಿತರಕ್ಷಕ ಸಂಘದ ಅಧ್ಯಕ್ಷ ಮಂಜುನಾಥ ಭೀಮಕ್ಕನವರ ಆಗ್ರಹಿಸಿದರು.
ನಗರದಲ್ಲಿಸೋಮವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಇತ್ತೀಚೆಗೆ ಡಿ.ಕೆ.ಶಿವಕುಮಾರ ಅವರು ತಮ್ಮ ಸಚಿವ ಸಂಪುಟವನ್ನು ರಚಿಸಿದ್ದಾರೆ. ಇದರಲ್ಲಿಕೊನೆಯ ಹಂತದಲ್ಲಿಅವಕಾಶ ವಂಚಿತ ಮಂಕಾಳ ವೈದ್ಯ ಅವರಿಗೆ ಖಾಲಿ ಇರುವ ಒಂದು ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು.
ಮೊದಲಿನಿಂದಲೂ ರಾಜ್ಯದಲ್ಲಿಗಂಗಾಮತಸ್ಥ ಸಮಾಜವನ್ನು ಮತ ಬ್ಯಾಂಕ್ ಗಾಗಿ ಸೀಮಿತ ಇಡಲಾಗಿದೆ. ಯಾವುದೇ ಸರಕಾರ ಬಂದರೂ ಗಂಗಾಮತಸ್ಥ ಸಮಾಜಕ್ಕೆ ಸೌಲಭ್ಯಗಳನ್ನು ನೀಡುವಲ್ಲಿಸರಕಾರಗಳು ಕಡೆಗಣಿಸುತ್ತಿವೆ. ಇನ್ನಾದರೂ ಸರಕಾರ ವಿಪ ಸದಸ್ಯ ತಿಪ್ಪಣ್ಣ ಕಮಕನೂರ, ಮಾಜಿ ಶಾಸಕ ಶರಣಪ್ಪ ಸುಣಗಾರ ಅವರಿಗೆ ರಾಜ್ಯ ಮಟ್ಟದ ನಿಗಮ- ಮಂಡಳಿಗೆ ನೇಮಕ ಮಾಡಬೇಕು. ಜತೆಗೆ ಪ್ರತಿ ಜಿಲ್ಲೆಯಲ್ಲಿಸಮಾಜದ ಯುವಕರಿಗೆ ಸೂಕ್ತ ಅಧಿಕಾರಗಳನ್ನು ನೀಡಬೇಕು ಎಂದು ಒತ್ತಾಯಿಸಿದರು.
ಏನಾದರೂ ಸರಕಾರ ಗಂಗಾಮತಸ್ಥ ಸಮಾಜಕ್ಕೆ ಸೂಕ್ತ ಸ್ಥಾನಮಾನ ನೀಡದಿದ್ದರೆ ಬರುವ ನವೆಂಬರ್ -ಡಿಸೆಂಬರ್ ನಲ್ಲಿದಾವಣಗೆರೆಯಲ್ಲಿಗಂಗಾಮತಸ್ಥ ಸಮಾಜದ ಸ್ವಾಮೀಜಿಗಳ ನೇತೃತ್ವದಲ್ಲಿಸಮಾಜದವರು ಪಕ್ಷಾತೀತವಾಗಿ ಭಾಗವಹಿಸಿ ಸಮಾಜಕ್ಕೆ ಆಗುತ್ತಿರುವ ಅನ್ಯಾಯದ ವಿರುದ್ಧ ಸೂಕ್ತ ತೀರ್ಮಾನ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು. ಸುದ್ದಿಗೋಷ್ಠಿಯಲ್ಲಿಮನೋಜಕುಮಾರ ಕರ್ಜಗಿ, ಯಲ್ಲಪ್ಪ ಸುಣಗಾರ, ಬಸಪ್ಪ ತಪ್ಪೇಲಿ ಇದ್ದರು.