ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಅವರಿಂದ ಉದ್ಘಾಟನೆ, ಪ್ರತಿಭಾ ಪುರಸ್ಕಾರ, ಉಚಿತ ಆರೋಗ್ಯ ತಪಾಸಣೆ ಶಿಬಿರ
ಕೆ.ಪ್ರಕಾಶ್ ಮುಳಬಾಗಲುಬೆಂಗಳೂರು ನಗರದ ಶ್ರೀ ಲಕ್ಷಿತ್ರ್ಮೕನರಸಿಂಹಸ್ವಾಮಿ ಧರ್ಮ ಸಂಸ್ಥೆಯ ಸಂಸ್ಥಾಪಕ ದಾನಿಗಳಾದ ಯಜಮಾನ್ ಜನೋಪಕಾರಿ ಶ್ರೀ ದೊಡ್ಡಣ್ಣ ಶೆಟ್ಟಿ ಅವರ 105ನೇ ವಾರ್ಷಿಕ ಆರಾಧನಾ ಮಹೋತ್ಸವ ಹಾಗೂ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಆ.14ರಂದು ಬೆಳಗ್ಗೆ 10 ಗಂಟೆಗೆ ನಡೆಯಲಿದ್ದು, ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ. ಜಲಸಂಪನ್ಮೂಲ ಸಚಿವ ರಾಮಲಿಂಗಾರೆಡ್ಡಿ ಕಾರ್ಯಕ್ರಮ ಉದ್ಘಾಟಿಸುವರು. ಮುಖ್ಯ ಅತಿಥಿಗಳಾಗಿ ಆಗಮಿಸುವ ಚಿಕ್ಕಪೇಟೆ ಶಾಸಕ ಉದಯ ಸಿ.ಗರುಡಾಚಾರ್ , ವಿಧಾನ ಪರಿಷತ್ ಮಾಜಿ ಸಭಾಪತಿ ವಿ.ಆರ್ .ಸುದರ್ಶನ್ ಪ್ರತಿಭಾ ಪುರಸ್ಕಾರ ವಿತರಣೆ ಮಾಡಲಿದ್ದಾರೆ.
ಶ್ರೀ ಲ.ನ. ಧರ್ಮ ಸಂಸ್ಥೆಯ ಅಧ್ಯಕ್ಷ ಎಸ್ . ಸುರೇಶ್ ಅಧ್ಯಕ್ಷತೆ ವಹಿಸುವರು. ಕೈಗಾರಿಕಾ ಶಿಕ್ಷಣ ಒಳಗೊಂಡ ಶಿಕ್ಷಣ ಉಪಸಮಿತಿಯ ಅಧ್ಯಕ್ಷ ಎಂ.ಜಿ.ವಿನೋದ್ , ಉತ್ಸವ ಉಪ ಸಮಿತಿ ಅಧ್ಯಕ್ಷ ವಿ.ಎನ್ . ಮಂಜುನಾಥ್ , ಹಾಸ್ಟೆಲ್ ಉಪ ಸಮಿತಿ ಅಧ್ಯಕ್ಷ ವಿ.ಮುನಿಶೆಟ್ಟಿ, ಸಾಹಿತ್ಯ ಶಿಕ್ಷಣ ಉಪ ಸಮಿತಿ ಅಧ್ಯಕ್ಷೆ ಜಿ.ಎ.ಉಮಾದೇವಿ, ಆಡಳಿತ ಮಂಡಳಿಯ ಸದಸ್ಯೆ ಡಿ.ಸಿ.ಕೃಷ್ಣವೇಣಿ, ಕಟ್ಟಡ ಉಪ ಸಮಿತಿ ಅಧ್ಯಕ್ಷ ಎಂ.ಸಿ.ರಾಜಣ್ಣ ಉಪಸ್ಥಿತರಿವವರು. ಇದೇ ದಿನ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿದೆ.
1906ರಲ್ಲಿಆಶ್ರಮ ಪ್ರಾರಂಭ: ಶ್ರೀ ಲ.ನ ಧರ್ಮಸಂಸ್ಥೆ ಸಂಸ್ಥಾಪಕರಾದ ಶ್ರೀ ದೊಡ್ಡಣ್ಣಶೆಟ್ಟಿ ಅವರು ಸಮುದಾಯದ ಮಕ್ಕಳ ಶೈಕ್ಷಣಿಕ ಪ್ರಗತಿಗೆ ಅನುಕೂಲವಾಗುವ ನಿಟ್ಟಿನಲ್ಲಿ1906ರಲ್ಲಿಆಶ್ರಮವನ್ನು ಪ್ರಾರಂಭಿಸಿ ಅಕ್ಷರ ಹಾಗೂ ಅಕ್ಷರದಾಸೋಹ ಕಾರ್ಯಕ್ರಮಕ್ಕೆ ಚಾಲನೆ ನೀಡಿದ್ದರು. ಗ್ರಾಮೀಣ ಪ್ರದೇಶದ ಜ್ಯೋತಿ ನಗರ ವೈಶ್ಯ ಗಾಣಿಗ ಸಮುದಾಯದ ಲಕ್ಷಾಂತರ ವಿದ್ಯಾರ್ಥಿಗಳು ಇಲ್ಲಿವಿದ್ಯಾಭ್ಯಾಸ ಮಾಡಿ ದೇಶ, ವಿದೇಶಗಳಲ್ಲಿಉನ್ನತ ಸ್ಥಾನ ಪಡೆದಿದ್ದಾರೆ. ಇಲ್ಲಿಪ್ರಸುತ್ತ ಎಸ್ ಎಲ್ ಎನ್ ಪ್ರೌಢ ಶಾಲೆ, ಪಿಯು ಹಾಗೂ ಪದವಿ ಕಾಲೇಜು, ಡಿ.ಇಡಿ ಕಾಲೇಜು ಕಾರ್ಯನಿರ್ವಹಿಸುತ್ತಿದೆ.
ದೊಡ್ಡಣ್ಣ ಶೆಟ್ಟರ ಜೀವನ ಗಾಥೆ: ಯಾರು ಇತರರಿಗಾಗಿ ಜೀವಿಸುತ್ತಾರೆ ಅವರು ಯಾವತ್ತೂ ಬದುಕಿರುತ್ತಾರೆ ಎಂಬಂತೆ ದೊಡ್ಡಣ್ಣ ಶೆಟ್ಟರು ಗಾಣಿಗ ಜನಾಂಗದಲ್ಲಿಅಪರೂಪದ ಮಾಣಿಕ್ಯದಂತೆ ಜನಿಸಿ ಜನಾಂಗದ ಏಳಿಗೆಗೆ ತಮ್ಮ ಬದುಕನ್ನು ಮುಡುಪಾಗಿರಿಸಿಕೊಂಡವರು. ಗಾಣದಿಂದ ತೆಗೆದ ಶುದ್ಧ ಎಣ್ಣೆಯನ್ನು ಧರ್ಮಬದ್ಧವಾಗಿ ಮಾರುತ್ತಿದ್ದರು. 1841ರಲ್ಲಿಬೆಂಗಳೂರಿನ ದಂಡು ಪ್ರದೇಶದಲ್ಲಿಜನಿಸಿದ ದೊಡ್ಡಣ್ಣ ಶೆಟ್ಟರು ಇಂಗ್ಲಿಷರ ಆಳ್ವಿಕೆಯನ್ನು ಗಮಿನಿಸಿ ಅವರು ಶಿಕ್ಷಣಕ್ಕೆ ನೀಡಿದ ಮಹತ್ವವನ್ನು ಮನಗಂಡು ತಮ್ಮ ಜನಾಂಗಕ್ಕೂ ಶಿಕ್ಷಣವನ್ನು ನೀಡಲು ಮುಂದಾದರು. ಬಡತನದ ಬೇಗೆಯಲ್ಲೇ ಬೇಯುತ್ತಿದ್ದ ಗಾಣಿಗರನ್ನು ಗಮನಿಸಿ ಆರ್ಥಿಕವಾಗಿ ಸಬಲರಾಗಲು ಶಿಕ್ಷಣವೇ ಶಕ್ತಿ ಎಂದು ಭಾವಿಸಿದವರು. ಶಿಕ್ಷಣವು ಆರ್ಥಿಕ ಶಕ್ತಿಯನ್ನು ಸಾಮಾಜಿಕ ಸ್ಥಾನ ಮಾನಗಳನ್ನು ನೀಡುತ್ತದೆ ಎಂಬ ದೂರದೃಷ್ಟಿಯನ್ನು ದೊಡ್ಡಣ್ಣ ಅವರು ಕಂಡಿದ್ದರು.
ಬೆಂಗಳೂರಿನ ಮಧ್ಯಭಾಗದ ಕಲಾಸಿಪಾಳ್ಯದಲ್ಲಿಎಂದರೆ ಈಗಿನ ಕೃಷ್ಣರಾಜೇಂದ್ರ ಮಾರುಕಟ್ಟೆಯಲ್ಲಿಜಮೀನನ್ನು ಪಡೆದು ಅಲ್ಲಿದ್ದ ದೊಡ್ಡ ಕಂದಕವನ್ನು ಮುಚ್ಚಿ ಜನಾಂಗದ ಪರವಾಗಿ ಒಂದು ರೆಸಿಡೆನ್ಸಿಯಲ್ ಶಾಲೆಯನ್ನು (ಶ್ರೀ.ಲ.ನ ಆಶ್ರಮ), ಸ್ಥಾಪನೆ ಮಾಡಿದರು. ದೊಡ್ಡಣ್ಣ ಶೆಟ್ಟರು ಶಾಲೆ ಮತ್ತು ಆಶ್ರಮವನ್ನು ಕಟ್ಟುವ ಸಂದರ್ಭದಲ್ಲಿತಮ್ಮ ಇಬ್ಬರು ಮಕ್ಕಳನ್ನು ಕಳೆದುಕೊಳ್ಳುತ್ತಾರೆ. ಈ ಸಂದರ್ಭದಲ್ಲಿಶಾಲೆ ಕಟ್ಟುತ್ತಿರುವುದು ಅಪಶಕುನವೆಂದು ಶಾಲೆಯ ಕಟ್ಟುವ ಕೆಲಸ ನಿಲ್ಲಿಸಬೇಕೆಂದು ಅನೇಕ ಜನ ಹೇಳಿದರೂ ಮೌಢ್ಯತೆಯನ್ನು ಮೀರಿದ ಒಬ್ಬ ವಿಚಾರವಾದಿಯಾಗಿ ದೊಡ್ಡಣ್ಣ ಶೆಟ್ಟರು ನಮಗೆ ಕಾಣುತ್ತಾರೆ. ಎಲ್ಲಾಸಮುದಾಯದವರಿಗೂ ಉತ್ತಮ ಶಿಕ್ಷಣ ಸಿಗಲು ಈ ವಿದ್ಯಾ ಸಂಸ್ಥೆಯನ್ನು ನಿರ್ಮಿಸಿದ್ದಾರೆ.
ಬಾಕ್ಸ್
ಪ್ಯಾರಾಮೌಂಟ್ ಥಿಯೇಟರ್ ನಿರ್ಮಾಣ: ಶ್ರೀ ಲ.ನ ಆಶ್ರಮವನ್ನು ಕಟ್ಟಿದ ನಂತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸುವಂತಹ ಒಂದು ದೂರದ ಆಲೋಚನೆಯನ್ನು ಮಾಡಿ ಪ್ಯಾರಾಮೌಂಟ್ ಥಿಯೇಟರ್ ಕಟ್ಟಿಸಿದರು. ಅಂದಿನ ಬೆಂಗಳೂರಿನಲ್ಲಿಥಿಯೇಟರ್ ಪರಿಕಲ್ಪನೆ ಇಲ್ಲದೇ ಇರುವಂತಹ ಸಂದರ್ಭದಲ್ಲಿಅದನ್ನು ಕಟ್ಟಿ ಕೃಷ್ಣರಾಜ ಒಡೆಯರ್ ನಿಂದ ಉದ್ಘಾಟನೆ ಮಾಡಿಸಿದ್ದರು.
ಬಾಕ್ಸ್
ಪ್ಲೇಗ್ ಕಾಣಿಸಿಕೊಂಡ ವೇಳೆ ನೆರವು
ಬೆಂಗಳೂರಿನಲ್ಲಿಪ್ಲೇಗ್ ಎಂಬ ಮಾರಿ ಹರಡಿಕೊಂಡಾಗ ಅಂತಹವರಿಗೆ ಸೇವೆ ಮಾಡಿದವರು ದೊಡ್ಡಣ್ಣ ಶೆಟ್ಟರು. ಇವರ ನಿರಂತರವಾದ ಸೇವಾ ಮನೋಭಾವನೆ ಹಾಗೂ ಶಿಕ್ಷಣ ಕ್ಷೇತ್ರದ ಕ್ರಾಂತಿಯನ್ನು ಕಂಡು ಕೃಷ್ಣರಾಜ ಒಡೆಯರ್ ಇವರಿಗೆ ಜನೋಪಕಾರಿ ಎಂಬ ಬಿರುದು ನೀಡಿ ಗಂಡುಭೇರುಂಡದ ಚಿನ್ನದ ಪದಕ ನೀಡಿ ಗೌರವಿಸಿದ್ದರು. ಜನಾಂಗದ ಮನೆಗಳಿಗೆ ಹೋಗಿ ಶಿಕ್ಷಣವೇ ಶಕ್ತಿ ಎಂದು ಅವರಿಗೆ ಮನವರಿಕೆ ಮಾಡಿ ಮಕ್ಕಳನ್ನು ಬಲವಂತವಾಗಿ ಕರೆದುಕೊಂಡು ಬಂದು ಶ್ರೀ ಲ.ನ ಆಶ್ರಮಕ್ಕೆ ಸೇರಿಸಿಕೊಂಡು ಅವರ ಸೇವೆ ಮಾಡಿ ಶಿಕ್ಷಣ ನೀಡಿದ ಮಹಾನ್ ತ್ಯಾಗಿ, ತಮ್ಮ ಜನಾಂಗದಲ್ಲಿಉನ್ನತ ಶಿಕ್ಷಣ ಪಡೆದು ಉನ್ನತ ಉದ್ಯೋಗ ಅಲಂಕರಿಸಬೇಕೆಂಬ ಆಶಯವನ್ನು ದೊಡ್ಡಣ ಶೆಟ್ಟರು ಹೊಂದಿದ್ದರು.
12 ಎಂ.ಬಿ.ಎಲ್ ಪೋಟೋ 1 ಜನೋಪಕಾರಿ ದೊಡ್ಡಣ್ಣ ಶೆಟ್ಟರು.
12 ಎಂ.ಬಿ.ಎಲ್ ಪೋಟೋ 2 ದೊಡ್ಡಣ್ಣ ಶೆಟ್ಟರ ಸಮಾಧಿ.
12 ಎಂ.ಬಿ.ಎಲ್ ಪೋಟೋ 3 ದೊಡ್ಡಣ್ಣ ಶೆಟ್ಟರ ಆಶ್ರಮ.
12 ಎಂ.ಬಿ.ಎಲ್ ಪೋಟೋ 4 ದೊಡ್ಡಣ್ಣ ಶೆಟ್ಟರ ವಿದ್ಯಾ ಸಂಸ್ಥೆ.