ಮಸ್ಕಿ: ‘‘ಇಲ್ಲಿಯ ಅಶೋಕ ಶಿಲಾ ಶಾಸನಕ್ಕೆ ತೆರಳುವ ರಸ್ತೆ ಹಾಳಾಗಿ 3 ವರ್ಷ ಕಳೆದರೂ ದುರಸ್ತಿಗೆ ಯಾರೂ ಮುಂದಾಗುತ್ತಿಲ್ಲ,’’ ಎಂದು ಸಾರ್ವಜನಿಕರು ದೂರಿದ್ದಾರೆ.‘‘ಶಾಸನ ಸ್ಥಳ ನೋಡಲು ಬರುವ ಪ್ರವಾಸಿಗರು ಹದಗೆಟ್ಟ ರಸ್ತೆ ಕಂಡು ಜನ ಪ್ರತಿನಿಧಿಗಳಿಗೆ ಹಿಡಿಶಾಪ ಹಾಕುತ್ತಿದ್ದಾರೆ. ಶಾಸನ ಸ್ಥಳಕ್ಕೆ ಹೋಗುವ ರಸ್ತೆಯಲ್ಲಿಜಲ್ಲಿಕಲ್ಲುಗಳು ಹರಡಿವೆ, ಪ್ರವಾಸಿಗರು ಎಚ್ಚರಿಕೆಯಿಂದ ನಡೆಯಬೇಕು. ಶಾಸನ ಸ್ಥಳ ಬಳಿ ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಕೂರಲು ಜಾಗವಿಲ್ಲದ ಕಾರಣ ಪ್ರವಾಸಿಗರು ಬಂಡೆಗಳ ಮೇಲೆ ಕುಳಿತುಕೊಳ್ಳುವ ಪರಿಸ್ಥಿತಿ ಎದುರಾಗಿದೆ. ಆಶೋಕ ಶಿಲಾ ಶಾಸನ ಸ್ಥಳ ಅಭಿವೃದ್ಧಿಗೆ ಕೆಕೆಆರ್ ಡಿಬಿಯಿಂದ 10 ಕೋಟಿ ರೂ. ಮಂಜೂರಾಗಿದೆ ಎಂದು ಶಾಸಕ ಬಸನಗೌಡ ತುರುವಿಹಾಳ ಅವರು ಹೇಳಿ ವರ್ಷ ಕಳೆದರೂ ಅಭಿವೃದ್ಧಿ ಕಾಮಗಾರಿಗೆ ಇನ್ನೂ ಚಾಲನೆ ಸಿಕ್ಕಿಲ್ಲ. ಶಾಸನ ಸ್ಥಳ ಬಳಿಯ ವಸ್ತು ಸಂಗ್ರಹಾಲಯ ಕಟ್ಟಡದ ಬಾಗಿಲು ಮುರಿದು ವರ್ಷವಾದರೂ ದುರಸ್ತಿ ಕಾರ್ಯವಾಗಿಲ್ಲ. ವಸ್ತು ಸಂಗ್ರಹಾಲಯ ಕಟ್ಟಡದಲ್ಲಿಅನೈತಿಕ ಚಟುವಟಿಕೆಗಳು ನಡೆಯುತ್ತಿವೆ,’’ ಎಂದು ಸಾರ್ವಜನಿಕರು ದೂರಿದ್ದಾರೆ.
---
ಆರ್ ಸಿಎಚ್ 11ಎಂಎಸ್ ಕೆಫೋಟೊ01:
ಮಸ್ಕಿ ಬಳಿಯ ಅಶೋಕ ಶಿಲಾ ಶಾಸನಕ್ಕೆ ಹೋಗುವ ರಸ್ತೆ ಹದಗೆಟ್ಟಿರುವುದು.