ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ

Contributed byashadheemu1980@gmail.com|Vijaya Karnataka
distribution of learning materials to children a new dawn in education
ಮಕ್ಕಳಿಗೆ ಕಲಿಕಾ ಸಾಮಗ್ರಿ ವಿತರಣೆ

ವಿಕ ಸುದ್ದಿಲೋಕ ಕೃಷ್ಣರಾಜನಗರ
ಸರಕಾರಿ ಶಾಲೆಗಳು ಅಭಿವೃದ್ಧಿಗೊಳ್ಳವ ನಿಟ್ಟಿನಲ್ಲಿಸಂಘ-ಸಂಸ್ಥೆಗಳು ಮತ್ತು ಅದೇ ಶಾಲೆಯಲ್ಲಿಓದಿ ಉನ್ನತ ಸ್ಥಾನಗಳಿಸಿದ ವಿದ್ಯಾರ್ಥಿಗಳ ಸಹಕಾರ ಅಗತ್ಯ ಎಂದು ದಿನೇಶ್ ನಂಜಪ್ಪ ಹೇಳಿದರು.

ಪಟ್ಟಣದ ಸರಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿಗಂಧದ ಗುಡಿ ಬಳಗದ ವತಿಯಿಂದ ಶಾಲೆಯ ಮಕ್ಕಳಿಗೆ ನೀಡಲಾದ ನೋಟ್ ಬುಕ್ , ಲೇಖನ ಸಾಮಗ್ರಿಗಳನ್ನು ವಿತರಿಸಿ ಮಾತನಾಡಿದರು.

‘‘ಕಳೆದ ಸುಮಾರು ನಾಲ್ಕೈದು ವರ್ಷಗಳಿಂದ ಗಂಧದ ಗುಡಿ ಬಳಗದ ವತಿಯಿಂದ ಸರಕಾರಿ ಶಾಲೆಯ ಮಕ್ಕಳಿಗೆ ಅವಶ್ಯಕ ಪರಿಕರಗಳನ್ನು ವಿತರಿಸುತ್ತಿರುವುದು ಶ್ಲಾಘನೀಯ. ಇಂತಹ ಸಮಾಜಮುಖಿ ಕೆಲಸಗಳನ್ನು ಜನಪ್ರತಿನಿಧಿ ಗಳು ಹಾಗೂ ಸಂಘ ಸಂಸ್ಥೆಗಳು ಮಾಡಬೇಕು. ಸರಕಾರಿ ಶಾಲೆಯಲ್ಲಿಅದರಲ್ಲೂಆಂಜನೇಯ ಬ್ಲಾಕ್ ನ ಶಾಲೆ ಬಹಳ ಹಳೆಯದಾಗಿದ್ದು, ಇಲ್ಲಿನ ಕೂಲಿಕಾರ್ಮಿಕರಾಗಿದ್ದಾರೆ. ಅಂತಹ ಮಕ್ಕಳ ಶಿಕ್ಷಣಕ್ಕೆ ಆದ್ಯತೆ ನೀಡಬೇಕು,’’ ಎಂದರು.

ಗೌರವ ಅಧ್ಯಕ್ಷ ನರಸಿಂಹರಾಜು ಮಾತನಾಡಿ, ‘‘ಹಳೆಯ ವಿದ್ಯಾರ್ಥಿಗಳು ನಮ್ಮ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಬೇಕು,’’ ಎಂದು ಕೋರಿದರು.

ಗಂಧದ ಗುಡಿ ಬಳಗದ ಸಂಚಾಲಕ ಟೈಗರ್ ರವಿ, ಹಳೆ ವಿದ್ಯಾರ್ಥಿ ಸಂಘದ ಗೌರವಾಧ್ಯಕ್ಷ ನರಸಿಂಹರಾಜು, ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಅಶೋಕ್ ಕುಮಾರ್ , ಖಜಾಂಚಿ ಶಿಲ್ಪ ಶ್ರೀನಿವಾಸ್ , ಮುಖ್ಯಶಿಕ್ಷಕ ರಂಗಪ್ಪ, ಎಸ್ ಡಿಎಂಸಿ ಅಧ್ಯಕ್ಷ ಹಾಗೂ ಶಿಕ್ಷಕ ವರ್ಗ ಇತರರಿದ್ದರು.