23ರಿಂದ ಮೇಜರ್ ಧ್ಯಾನಚಂದ್ ಆಮಂತ್ರಿತ ಕ್ರೀಡಾಕೂಟವಿಕ ಸುದ್ದಿಲೋಕ ಧಾರವಾಡ
ಧಾರವಾಡ ರಾಷ್ಟ್ರೀಯ ಕ್ರೀಡಾ ದಿನಾಚರಣೆ ಸಮಿತಿ ನೇತೃತ್ವದಲ್ಲಿಆ.23ರಿಂದ ಆ.29ರ ವರೆಗೆ ಮೇಜರ್ ಧ್ಯಾನಚಂದ್ ಅವರ ಹುಟ್ಟು ಹಬ್ಬದ ನಿಮಿತ್ತ ಮೇಜರ್ ಧ್ಯಾನಚಂದ್ ಐದನೇ ಆಮಂತ್ರಿತ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ ಎಂದು ಸಮಿತಿ ಅಧ್ಯಕ್ಷ ಡಾ.ಪುಲಕೇಶಿ ಶೆಟ್ಟೆಪ್ಪನವರ ಹೇಳಿದರು.
ನಗರದಲ್ಲಿಗುರುವಾರ ಸುದ್ದಿಗೋಷ್ಠಿಯಲ್ಲಿಮಾತನಾಡಿದ ಅವರು, ಆ.23ರಂದು ಬೆಳಗ್ಗೆ 9ಕ್ಕೆ ನಡೆಯುವ ಕಾರ್ಯಕ್ರಮದಲ್ಲಿಸಹಾಯಕ ಪೊಲೀಸ್ ಆಯುಕ್ತ ಪ್ರಶಾಂತ ಸಿದ್ದನಗೌಡರ ಹಾಗೂ ಸಾರಿಗೆ ಇಲಾಖೆಯ ರಮೇಶ ಮಾಳಗಿ ಉದ್ಘಾಟಿಸುವರು. ಕವಿವಿ ದೈಹಿಕ ಶಿಕ್ಷಣ ಹಾಗೂ ಕ್ರೀಡಾ ವಿಭಾಗದ ಮುಖ್ಯಸ್ಥ ಎ.ವಿ.ಕರಬಸನಗೌಡರ ಅತಿಥಿಗಳಾಗಿ ಪಾಲ್ಗೊಳ್ಳುವರು ಎಂದರು.
ಆ.29ರಂದು ಮಧ್ಯಾಹ್ನ 3ಕ್ಕೆ ಕರ್ನಾಟಕ ಕಾಲೇಜಿನ ಬಿಬಿಎ ಆಡಿಟೋರಿಯಂ ಹಾಲ್ ನಲ್ಲಿನಡೆಯುವ ಕ್ರೀಡಾಕೂಟದ ಮುಕ್ತಾಯ ಸಮಾರಂಭದಲ್ಲಿಭಾರತ ಖೋಖೋ ತಂಡದ ಮಾಜಿ ಆಟಗಾರ ಲೋಕೇಶ್ವರ ವಿಶೇಷ ಅತಿಥಿಗಳಾಗಿ ಪಾಲ್ಗೊಳ್ಳುವರು. ಕವಿವಿ ಕುಲಪತಿ ಪ್ರೊ. ಎ.ಎಂ.ಖಾನ್ ಹಾಗೂ ಮಾಜಿ ಸಚಿವ ಶಂಕರ ಪಾಟೀಲ್ ಮುನೇನಕೊಪ್ಪ ಅತಿಥಿಗಳಾಗಿ ಭಾಗವಹಿಸುವರು. ಕರ್ನಾಟಕ ಆರ್ಟ್ಸ್ ಕಾಲೇಜಿನ ಪ್ರಾಂಶುಪಾಲ ಪ್ರೊ.ಐ.ಸಿ.ಮುಳಗುಂದ ಅಧ್ಯಕ್ಷತೆ ವಹಿಸುವರು. ಕರ್ನಾಟಕ ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಪ್ರೊ.ಎಂ.ಎಸ್ . ಸಾಳುಂಕೆ ಉಪಸ್ಥಿತರಿರುವರು.
ಕ್ರೀಡೆಯಲ್ಲಿಸಾಧನೆ ಮಾಡಿದ ಕ್ರೀಡಾಪಟುಗಳು, ಕ್ರೀಡಾ ಪ್ರೋತ್ಸಾಹಕರು, ಕ್ರೀಡಾ ತರಬೇತಿದಾರರು, ನಿರ್ದೇಶಕರು, ಶಿಕ್ಷಕರು, ಹಾಗೂ ನಿವೃತ್ತ ಮಾಜಿ ಸೈನಿಕರು, ಕ್ರೀಡಾ ಪತ್ರಕರ್ತರನ್ನು ಕ್ರೀಡಾ ಪುರಸ್ಕಾರ ಪ್ರಶಸ್ತಿಗಳೊಂದಿಗೆ ಸನ್ಮಾನಿಸಲಾಗುವುದು ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿಪಡದಾರೆ ಆರ್ .ಕೆ., ಕುರ್ತಕೋಟಿ ವಿ.ಪಿ., ಇಸ್ಮಾಯಿಲ್ ಕೊಟೆಕಲ್ , ಚೇತನ ಮಾನೆ ಇದ್ದರು.