ವಿಕ ಸುದ್ದಿ ಲೋಕ ನಂಗಲಿಬೈರಕೂರು ಹೋಬಳಿ ಹೆಬ್ಬಣಿ ಗ್ರಾಮ ಪಂಚಾಯತಿ ವ್ಯಾಪ್ತಿಯ ಸುನುಪಕುಂಟೆ ಗ್ರಾಮದಲ್ಲಿಎರಡು ದಿನಗಳ ಕಾಲ ನಡೆದ ಸೀತಾರಾಮ ಲಕ್ಷ್ಮಣ ಸಮೇತ ಹನುಮಂತ ದೇವರ ಕಲ್ಯಾಣೋತ್ಸವ ಕಾರ್ಯಕ್ರಮಗಳು ನಡೆಯಿತು
ಕಾರ್ಯಕ್ರಮಗಳ ಪ್ರಯುಕ್ತ ಗ್ರಾಮದ ಮಹಿಳೆಯರು ಹಾಗೂ ಪುರು?Üರು ತಲೆಗಳ ಮೇಲೆ ದೀಪಗಳನ್ನು ಹೊತ್ತು ದೇವರಿಗೆ ಸಲ್ಲಿಸಿದರು. ನಂತರ ತಡರಾತ್ರಿ ದೇವರ ವಿಗ್ರಹಗಳನ್ನು ಹೊತ್ತ ಪುಷ್ಪ ಪಲ್ಲಕ್ಕಿ ಮೆರವಣಿಗೆ ನಡೆಯಿತು.
ನಂತರ ಗ್ರಾಮದ ಮುಖಂಡ ಜೆ.ನಟರಾಜ್ ಮಾತನಾಡಿ, ಈ ಬಾರಿ ನಡೆದ ಕಾರ್ಯಕ್ರಮದಲ್ಲಿತಾಲೂಕಿನಲ್ಲಿಮಳೆ ಕೈಕೊಟ್ಟ ಕಾರಣದಿಂದ ಜನ ಮತ್ತು ಜಾನುವಾರುಗಳು ಪರಿತಪಿಸುವಂತಾಗಿದೆ. ಹೀಗಾಗಿ ಕೂಡಲೇ ಮಳೆ ಬರಲು ವಿಶೇಷ ಹೋಮ ಹಾಗೂ ಪೂಜೆಗಳನ್ನು ಕೈಗೊಳ್ಳಲಾಯಿತು ಎಂದರು.
ವಕೀಲ ನಟರಾಜ್ , ಮುನೆಪ್ಪ, ಸತೀಶ್ ಯಾದವ್ , ಸಂತೋಷ್ , ರವಿ, ಮಂಜುನಾಥ್ , ದಾಮೋದರ್ , ನಾಗರಾಜ್ , ಮೋಹನ್ , ನಾಗರಾಜ್ , ಎಸ್ .ವೆಂಕಟರಾಮ್ , ಕೃಷ್ಣಪ್ಪ, ಗೌರೀಶ್ , ಗಂಗ, ಶ್ರೀನಿವಾಸ್ ಮತ್ತಿತರರು ಇದ್ದರು.
20. ನಂಗಲಿ ಫೋಟೋ.1 ಬೈರಕೂರು ಹೋಬಳಿ ಹೆಬ್ಬಣಿ ಗ್ರಾ.ಪಂ ವ್ಯಾಪ್ತಿಯ ಸುನುಪ ಕುಂಟೆ ಗ್ರಾಮದ ಶ್ರೀಆಂಜನೇಯ ಸ್ವಾಮಿ ದೇವಾಲಯದ ಆವರಣದಲ್ಲಿಸೀತಾರಾಮ ಕಲ್ಯಾಣೋತ್ಸವ ಕಾರ್ಯಕ್ರಮ ನಡೆಯಿತು.