ಮಾರುಕಟ್ಟೆಯಲ್ಲಿಹಬ್ಬದ ಖರೀದಿ ಜೋರು | ನಾನಾ ದೇವಸ್ಥಾನದಲ್ಲಿವಿಶೇಷ ಪೂಜಾ ಕೈಂಕರ್ಯ ನಡೆಸಲು ಅಗತ್ಯ ಸಿದ್ಧತೆ(ಕಿಕ್ಕರ್ )
ವರ ಮಹಾಲಕ್ಷ್ಮೇ ಹಬ್ಬಕ್ಕೆ ಹೂವು ತುಟ್ಟಿ----
ವಿಕ ಸುದ್ದಿಲೋಕ ಚಿತ್ರದುರ್ಗ
ಹಬ್ಬಕ್ಕಾಗಿ ಹೂವುಗಳ ಬೆಲೆ ದಿಢೀರ್ ಏರಿಕೆ ನಡುವೆ ಹೆಂಗಳೆಯರಿಗೆ ಬಲು ಪ್ರಿಯವಾದ ವರ ಮಹಾಲಕ್ಷ್ಮೇ ಹಬ್ಬದ ಆಚರಣೆಗೆ ಜಿಲ್ಲಾದ್ಯಂತ ಸಿದ್ಧತೆ ಬರದಿಂದ ಸಾಗಿದೆ.
ವರಮಹಾಲಕ್ಷ್ಮಿ ಹಬ್ಬ ಎಂದರೆ ಮಹಿಳೆಯರಿಗೆ ಸಡಗರ. ಮನೆಗಳಲ್ಲಿಲಕ್ಷ್ಮೇ ಕೂರಿಸಲು ಮಂಟಪ ನಿರ್ಮಿಸಿ, ಕಳಸ ಸ್ಥಾಪಿಸಿ, ಬಾಳೆಕಂದು, ಮಾವು ಸೇರಿದಂತೆ ನಾನಾ ಪುಷ್ಪಗಳಿಂದ ಅಲಂಕರಿಸಲಾಗುತ್ತದೆ. ಆಭರಣಗಳಿಂದ ಸಿಂಗರಿಸಿ ಮಹಾಲಕ್ಷ್ಮಿಗೆ ಪ್ರಿಯವಾದ ಹಸಿರು, ಕೆಂಪು ಬಳೆ, ಹೂವು, ಹಣ್ಣು ಅರ್ಪಿಸಿ ವಿಶೇಷ ಪೂಜೆ ಸಲ್ಲಿಸಲಾಗುತ್ತದೆ. ಅಲ್ಲದೇ ದೀಪ ದೂಪ ಹಚ್ಚಿ, ಭಕ್ಷ್ಯ ಭೋಜನ ತಯಾರಿಸಿ ನೈವೇದ್ಯೆ ಅರ್ಪಿಸಿ, ದೇವಿಗೆ ಮಹಾ ಮಂಗಳಾರತಿ ನೆರವೇರಿಸಲಾಗುತ್ತದೆ.
ನಗರದ ಎಪಿಎಂಸಿ ಆವರಣದಲ್ಲಿನ ಹೂವಿನ ಮಾರುಕಟ್ಟೆಯಲ್ಲಿಹಳದಿ, ಬಿಳಿ, ಕೆಂಪು, ನೇರಳೆ ಸೇರಿ ನಾನಾ ಬಣ್ಣದ ಸೇವಂತಿಗೆ ಹೂವು ಒಂದು ಸಾವಿರಕ್ಕೆ ಐದಾರು ಮಾರು, ಕನಕಾಂಬರ ಮತ್ತು ಮಲ್ಲಿಗೆ ಆರೇಳು ಮಾರು, ಕಾಕಡ ಎಂಟು ಮಾರು, ನಾನಾ ವರ್ಣದ ಬಟನ್ಸ್ ಗುಲಾಬಿ ಕೆಜಿಗೆ 400 ರೂ, ಲಕ್ಷಿತ್ರ್ಮಗೆ ಪ್ರಿಯವಾದ ತಾವರೆ ಹೂವು ಒಂದಕ್ಕೆ 50ರಿಂದ 100 ರೂ.ಗೆ ಮಾರಾಟವಾದವು.
ಶ್ರಾವಣ ಮಾಸದಲ್ಲಿಆಚರಿಸಲ್ಪಡುವ ಈ ಹಬ್ಬಕ್ಕೆ ಜಿಲ್ಲಾದ್ಯಂತ ಬಹುತೇಕ ಎಲ್ಲದೇವಸ್ಥಾನಗಳು ಸೇರಿದಂತೆ ಸಾರ್ವಜನಿಕರು ಶ್ರದ್ಧಾಭಕ್ತಿಯಿಂದ ಹಬ್ಬ ಆಚರಿಸಲು ಅಗತ್ಯ ತಯಾರಿ ಮಾಡಿಕೊಂಡಿದ್ದಾರೆ. ನಗರದ ಕೆಳಗೋಟೆಯ ಕೊಲ್ಲಾಪುರದ ಶ್ರೀಮಹಾಲಕ್ಷ್ಮಿ, ಕೋಟೆಯ ಮೇಲುದುರ್ಗದಲ್ಲಿನೆಲೆಸಿರುವ ಶ್ರೀಏಕನಾಥೇಶ್ವರಿ ದೇವಿ, ಕೋಟೆ ರಸ್ತೆಯಲ್ಲಿನ ರಾಜಮಾತೆ ಶ್ರೀರಾಜ ಉತ್ಸವಾಂಬ ಉಚ್ಚಂಗಿ ಯಲ್ಲಮ್ಮ, ನಗರದ ಹೊಳಲ್ಕೆರೆ ರಸ್ತೆಯಲ್ಲಿನ ನಗರ ದೇವತೆ ಬರಗೇರಮ್ಮ, ಗೌರಸಂದ್ರ ಮಾರಮ್ಮ, ತ್ರಿಪುರ ಸುಂದರಿ ತಿಪ್ಪಿನ ಘಟ್ಟಮ್ಮ, ಅಂತರಘಟ್ಟಮ್ಮ, ಚೌಡೇಶ್ವರಿ, ಸಂತೆಹೊಂಡದ ಬಳಿಯಲ್ಲಿನ ಬನ್ನಿ ಮಹಾಕಾಳಿ, ವಾಸವಿ ಮಹಲ್ ರಸ್ತೆಯಲ್ಲಿನ ಶ್ರೀಕನ್ಯಕಾ ಪರಮೇಶ್ವರಿ ದೇವಿ, ಅಂಬಾ ಭವಾನಿ ಸೇರಿದಂತೆ ಬಹುತೇಕ ಎಲ್ಲದೇವಸ್ಥಾನಗಳಲ್ಲಿಶುಕ್ರವಾರ ಪ್ರಾತಃ ಕಾಲದಲ್ಲಿಸುಂದರ ಅಲಂಕಾರದೊಂದಿಗೆ ವಿಶೇಷ ಪೂಜಾ ಕೈಂಕರ್ಯ ನಡೆಸಲು ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ.
ಸಾರ್ವಜನಿಕರು ಕೂಡ ತಮ್ಮ ಮನೆಗಳಲ್ಲಿವರ ಮಹಾಲಕ್ಷ್ಮಿ ಹಬ್ಬ ಆಚರಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದು, ನಗರದ ಗಾಂಧಿ ವೃತ್ತ, ಮೆದೇಹಳ್ಳಿ ರಸ್ತೆ, ಸಂತೆ ಹೊಂಡದ ಸುತ್ತಲಿನ ಪ್ರದೇಶಗಳಲ್ಲಿಗುರುವಾರ ಬಾಳೆಕಂದು, ಮಾವು ಸೇರಿದಂತೆ ಹೂವು, ಹಣ್ಣು ಖರೀದಿಸುತ್ತಿದ್ದ ದೃಶ್ಯ ಕಂಡುಬಂತು. ಹೂವು, ಹಣ್ಣುಗಳ ದರ ದುಪ್ಪಟ್ಟಾಗಿದ್ದರೂ ಹಬ್ಬ ಆಚರಣೆಗೆ ಅಗತ್ಯವಾಗಿ ಬೇಕಾಗಿರುವ ವಸ್ತುಗಳನ್ನು ಖರೀದಿಸುವಲ್ಲಿಸಾರ್ವಜನಿಕರು ಮುಂದಾಗಿದ್ದರು.
====
ಶ್ರೀದೇವಿಯ ದರ್ಶನ
ಕೊಲ್ಲಾಪುರದ ಶ್ರೀಮಹಾಲಕ್ಷ್ಮಿ ಸೇವಾ ಟ್ರಸ್ಟ್ ನಿಂದ ವಿಶೇಷ ಅಲಂಕಾರ, ಪೂಜಾ ಕಾರ್ಯಕ್ರಮ ಆಯೋಜಿಸಲಾಗಿದೆ. ಬೆಳಗ್ಗೆ 10.30ರಿಂದ ರಾತ್ರಿ 10.30ರವರೆಗೆ ಶ್ರೀದೇವಿಯ ದರ್ಶನ ಇರುತ್ತದೆ. ಭಕ್ತರು ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆಯಬಹುದು ಎಂದು ಟ್ರಸ್ಟ್ ನವರು ತಿಳಿಸಿದ್ದಾರೆ.
====
ಹಣ್ಣುಗಳ ದರ ಇಂತಿದೆ
ಮಾರುಕಟ್ಟೆಯಲ್ಲಿದಾಳಿಂಬೆ ಒಂದು ಕೆಜಿಗೆ 150ರಿಂದ 200 ರೂ., ಸೇಬು 150ರಿಂದ 250 ರೂ., ಕಪ್ಪು ದ್ರಾಕ್ಷಿ 150ರಿಂದ 220, ಕಿತ್ತಳೆ ಹಣ್ಣು 120ರಿಂದ 200 ರೂ, ಪೇರಲ ಹಣ್ಣು 60 ರಿಂದ 120, ಬಾಳೆಹಣ್ಣು 80ರಿಂದ 140, ಮೋಸಂಬಿ 60ರಿಂದ 80, ಸಪೋಟ 80ರಿಂದ 100 ರೂ, ಬಾಳೆಕಂದು ಒಂದು ಜೋಡಿಗೆ 30ರಿಂದ 40 ರೂ, ಮಾವಿನ ಸೊಪ್ಪು ಒಂದು ಕಟ್ಟಿಗೆ 20ರಿಂದ 40 ರೂ. ಇತ್ತು.
----
ಫೋಟೊ ಕ್ಯಾಪ್ಷನ್ /20ಸಿಟಿಡಿ33
ಚಿತ್ರದುರ್ಗದ ಸಂತೆ ಹೊಂಡದ ಬಳಿಯ ಮಾರುಕಟ್ಟೆಯಲ್ಲಿವರ ಮಹಾಲಕ್ಷಿತ್ರ್ಮ ಹಬ್ಬದ ಹಿನ್ನೆಲೆಯಲ್ಲಿಹೆಚ್ಚಿನ ಪ್ರಮಾಣದಲ್ಲಿಕಂಡುಬಂದ ಕಮಲದ ಹೂವುಗಳು.
ಫೋಟೊ ಕ್ಯಾಪ್ಷನ್ /20ಸಿಟಿಡಿ33ಎ
ಚಿತ್ರದುರ್ಗದ ಮಾರುಕಟ್ಟೆಯಲ್ಲಿಬಾಳೆ ಕಂದು ಸೇರಿದಂತೆ ಮತ್ತಿತರೆ ಅಗತ್ಯ ವಸ್ತುಗಳ ಖರೀದಿಯಲ್ಲಿತೊಡಗಿರುವ ಸಾರ್ವಜನಿಕರು.
ಫೋಟೊ ಕ್ಯಾಪ್ಷನ್ /20ಸಿಟಿಡಿ33ಬಿ, 33ಸಿ
ಚಿತ್ರದುರ್ಗದಲ್ಲಿಮಾರುಕಟ್ಟೆಯಲ್ಲಿಹಣ್ಣು ಸೇರಿದಂತೆ ಮತ್ತಿತರೆ ಅಗತ್ಯ ವಸ್ತುಗಳ ಖರೀದಿಯಲ್ಲಿತೊಡಗಿರುವ ಸಾರ್ವಜನಿಕರು.