ಹಾನಗಲ್ಲಗ್ರಾಮದೇವಿ ದೇವಸ್ಥಾನ ಉದ್ಘಾಟನೆಯ ಮೂರು ದಿನಗಳ ಧಾರ್ಮಿಕ ಕಾರ್ಯಕ್ರಮದ ಕೊನೆಯ ದಿನವಾದ ಗುರುವಾರ ದೇವಿ ಪ್ರಾಣ ಪ್ರತಿಷ್ಠಾಪನೆ ಮತ್ತು ಗೋಪುರಕ್ಕೆ ಕಳಶ ಸ್ಥಾಪನೆಯ ವಿಧಿ ವಿಧಾನಗಳು ಶಾಸ್ತೊ್ರೕಕ್ತವಾಗಿ ನೆರವೇರಿದವು.ಬೆಳಗ್ಗೆ ದೇವಸ್ಥಾನದಲ್ಲಿದ್ವಾರ ತೋರಣ ಪೂಜೆ ಮತ್ತು ಮಹಾ ಗಣಪತಿ ಪೂಜೆಗಳು ನಡೆದವು. ನೇತ್ರೋನ್ಮಿಲನದ ಸಂಪ್ರದಾಯಗಳು ನೆರವೇರಿದವು. ಬಳಿಕ ಹುಬ್ಬಳ್ಳಿ ಮೂರುಸಾವಿರಮಠದ ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ ಸಾನ್ನಿಧ್ಯದಲ್ಲಿಶಕ್ತಿ ದೇವತೆ ಗ್ರಾಮದೇವಿಗೆ ಪ್ರಾಣ ಪ್ರತಿಷ್ಠಾಪನೆ, ಕಲಾ ಆವಾಹನೆ, ಕದಳಿ ಛೇದನ, ಬಿಂಬದರ್ಶನ, ಕಲಾ ಹೋಮ, ಪ್ರಾಣ ಪ್ರತಿಷ್ಠಾಹೋಮ ನಡೆದವು. ದೇವಸ್ಥಾನಕ್ಕೆ ಕಳಸಾರೋಹಣ, ಕುಮಾರಿಕಾ ಪೂಜಾ, ಸುಹಾಸಿನಿ ಪೂಜೆ, ಅಷ್ಠಾವಧಾನ ಸೇವೆ ನಂತರ ದೇವಿಗೆ ಮಹಾಮಂಗಳಾರತಿ ಮಾಡಲಾಯಿತು.
ಗ್ರಾಮದೇವಿ ಜಾತ್ರಾ ಸಮಿತಿ ಅಧ್ಯಕ್ಷ ಮಂಜುನಾಥ ನಾಗಜ್ಜನವರ, ಉಪಾಧ್ಯಕ್ಷ ಸುರೇಶ ಪೂಜಾರ, ಕಾರ್ಯದರ್ಶಿ ಗಣೇಶ ಮೂಡ್ಲಿಯವರ, ಕೋಶಾಧ್ಯಕ್ಷ ರಾಜು ಗೌಳಿ, ಸದಸ್ಯರಾದ ಭೋಜರಾಜ ಕರೂದಿ, ಯಲ್ಲಪ್ಪ ಶೇರಖಾನೆ, ನಾಗೇಂದ್ರ ಬಂಕಾಪೂರ, ಬಾಳಾರಾಮ ಗುರ್ಲಹೊಸೂರ, ವಿರುಪಾಕ್ಷಪ್ಪ ಕಡಬಗೇರಿ, ಸಂಜಯ ಬೇಂದ್ರೆ, ನಾರಾಯಣ ಅಥಣಿ, ಈಶ್ವರ ವಾಲ್ಮೀಕಿ, ಗುರುರಾಜ ನಿಂಗೋಜಿ, ರವಿಚಂದ್ರ ಪುರೋಹಿತ, ರಾಮಣ್ಣ ಯಳ್ಳೂರ, ಆದರ್ಶ ಶೆಟ್ಟಿ, ಕೃಷ್ಣ ಬಾಗಲೆ, ಕೀರ್ತಿಕುಮಾರ ಚಿನ್ನಮುಳುಗುಂದ, ಸುನಿಲ್ ಅರ್ಕಸಾಲಿ, ಮಾಲತೇಶ ಕೊಲ್ಲಾಪೂರ, ಮನೋಜ ಕಲಾ ಇದ್ದರು.
ಹರಿದು ಬಂದ ಭಕ್ತ ಗಣ:
ದೇವಸ್ಥಾನ ಉದ್ಘಾಟನೆ ಅಂಗವಾಗಿ ಹಾನಗಲ್ಲನಿಂದ ಬೇರೆಡೆ ನೌಕರಿ, ಉದ್ಯೋಗ ಅರಸಿಕೊಂಡು ಹೋಗಿರುವ ಸ್ಥಳೀಯರು ಗ್ರಾಮದೇವಿಯ ಭವ್ಯ ದೇವಸ್ಥಾನದ ಉದ್ಘಾಟನೆ ಕಣ್ತುಂಬಿಕೊಳ್ಳಲು ಆಗಮಿಸಿದ್ದರು. ಪ್ರತಿ ಮನೆಯಲ್ಲಿನೆಂಟರು ಆಗಮಿಸಿದ್ದರು. ನೂತನ ದೇವಸ್ಥಾನದಲ್ಲಿವಿರಾಜಮಾನಳಾದ ದೇವಿಯ ದರ್ಶನಕ್ಕೆ ಭಕ್ತರ ದಂಡು ಹೆಚ್ಚು ಸಂಖ್ಯೆಯಲ್ಲಿಹರಿದು ಬಂದಿತ್ತು. ಸುಂದರ ಶಿಲಾ ವೈಭವದ ದೇವಸ್ಥಾನಕ್ಕೆ ನಡೆದ ಕಳಸಾರೋಹಣವನ್ನು ವೀಕ್ಷಿಸಿದ ಭಕ್ತರು ಧನ್ಯತೆ ಪಡೆದರು.
20ಎಚ್ ಜಿಎಲ್ 3
ಹಾನಗಲ್ಲಗ್ರಾಮದೇವಿ ಪ್ರಾಣ ಪ್ರತಿಷ್ಠಾಪನೆ ಮತ್ತು ಕಳಸಾರೋಹಣಗೊಂಡ ನೂತನ ಗ್ರಾಮದೇವಿ ದೇವಸ್ಥಾನಕ್ಕೆ ಗುರುವಾರ ಭಕ್ತರ ದಂಡು ಹೆಚ್ಚು ಪ್ರಮಾಣದಲ್ಲಿಹರಿದು ಬಂದಿತ್ತು.