ಗಡಿಯಲ್ಲಿಡ್ರಗ್ಸ್ ಜಾಲ ಆತಂಕ

Contributed byknamana4@gmail.com|Vijaya Karnataka
concerns over drug smuggling networks at the border
ಗಡಿಯಲ್ಲಿಡ್ರಗ್ಸ್ ಜಾಲ ಆತಂಕ

*ಕೇರಳಕ್ಕೆ ಕೊಡಗಿನ ಮೂಲಕ ಸಾಗಣೆ | ಚೆಕ್ ಪೋಸ್ಟ್ ಗಳ ಕಾರ್ಯಕ್ಷಮತೆಗೆ ಪ್ರಶ್ನೆ
ರಜಿತ ಕಾರ್ಯಪ್ಪ ವಿರಾಜಪೇಟೆ

ಘ್ಕಿk್ಞaಞa್ಞa4ಃಜಞaಜ್ಝಿ.್ಚಟಞ

ಗಡಿ ಜಿಲ್ಲೆ ಕೊಡಗಿನ ಮಾರ್ಗವಾಗಿ ನೆರೆಯ ಕೇರಳ ರಾಜ್ಯಕ್ಕೆ ಅಕ್ರಮ ಮಾದಕ ವಸ್ತುಗಳ ಸಾಗಾಟದ ಜಾಲ ವಿಸ್ತರಿಸುತ್ತಿದ್ದು, ಆತಂಕಕಾರಿಯಾಗಿದೆ. ಈ ಕುರಿತು ಕಟ್ಟುನಿಟ್ಟಿನ ಕ್ರಮ ತೆಗೆದುಕೊಳ್ಳಬೇಕಿದೆ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಇತ್ತೀಚೆಗೆ ಕರ್ನಾಟಕ ನೋಂದಣಿಯ ವಾಹನದಲ್ಲಿಮಾಕುಟ್ಟ -ಪೆರುಂಬಾಡಿ ಮಾರ್ಗವಾಗಿ ಕೇರಳಕ್ಕೆ ಸಾಗಿಸಲಾಗುತ್ತಿದ್ದ ಕೋಟ್ಯಂತರ ರೂಪಾಯಿ ಮೌಲ್ಯದ ಮಾದಕ ವಸ್ತುಗಳನ್ನು ಕೇರಳ ಪೊಲೀಸರು ಕೂಟುಹೊಳೆ ಚೆಕ್ ಪೋಸ್ಟ್ ಬಳಿ ಸಿನಿಮೀಯ ರೀತಿಯ ಕಾರ್ಯಾಚರಣೆ ನಡೆಸಿ ಜಪ್ತಿ ಮಾಡಿರುವ ಘಟನೆ ಇದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ.

ಈ ಪ್ರಕರಣವು ಕೊಡಗಿನ ಗಡಿ ಚೆಕ್ ಪೋಸ್ಟ್ ಗಳಲ್ಲಿನಡೆಯುತ್ತಿರುವ ವಾಹನ ತಪಾಸಣೆಯ ಕಾರ್ಯವೈಖರಿ ಬಗ್ಗೆ ಹಲವು ಪ್ರಶ್ನೆಗಳನ್ನು ಹುಟ್ಟುಹಾಕಿದ್ದು, ಸಾರ್ವಜನಿಕ ವಲಯದಲ್ಲೂಆತಂಕ ಮತ್ತು ಆಕ್ರೋಶಕ್ಕೆ ಕಾರಣವಾಗಿದೆ.

ಸಿನಿಮೀಯ ರೀತಿ ಕಾರ್ಯಾಚರಣೆ: ಇರಿಟ್ಟಿ ಪೊಲೀಸ್ ಠಾಣಾ ವ್ಯಾಪ್ತಿಯ ಕೂಟುಹೊಳೆ ಚೆಕ್ ಪೋಸ್ಟ್ ಬಳಿ ವಾಹನ ತಪಾಸಣೆ ನಡೆಸುತ್ತಿದ್ದ ಸಂದರ್ಭದಲ್ಲಿವಾಹನವನ್ನು ಪೊಲೀಸರು ನಿಲ್ಲಿಸುವಂತೆ ಸೂಚಿಸಿದ್ದಾರೆ. ಆದರೆ, ವಾಹನದಲ್ಲಿದ್ದವರು ಸೂಚನೆಯನ್ನು ಲೆಕ್ಕಿಸದೆ ಅತಿ ವೇಗವಾಗಿ ಪರಾರಿಯಾಗಲು ಯತ್ನಿಸಿದ್ದಾರೆ. ತಕ್ಷಣ ಕಾರ್ಯಪ್ರವೃತ್ತರಾದ ಪೊಲೀಸರು ವಾಹನವನ್ನು ಬೆನ್ನಟ್ಟಿ ತಡೆದು ನಿಲ್ಲಿಸಿದ್ದಾರೆ. ಮೊದಲ ನೋಟಕ್ಕೆ ವಾಹನದಲ್ಲಿಯಾವುದೇ ಅನುಮಾನಾಸ್ಪದ ವಸ್ತುಗಳು ಕಂಡುಬರಲಿಲ್ಲ. ಆದರೆ, ಪೊಲೀಸರು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಅನುಮಾನ ಮತ್ತಷ್ಟು ಗಾಢವಾಗಿದೆ. ಬಳಿಕ ಕ್ರೇನ್ ಬಳಸಿ ವಾಹನವನ್ನು ಮೇಲಕ್ಕೆತ್ತಿ ಪರಿಶೀಲಿಸಿದಾಗ, ಚಾಸಿ ಭಾಗದಲ್ಲಿದ್ದ ರಹಸ್ಯ ಜಾಗದಲ್ಲಿಮಾದಕ ವಸ್ತುಗಳನ್ನು ಅಡಗಿಸಿಟ್ಟಿರುವುದು ಪತ್ತೆಯಾಗಿದೆ. ಈ ಮೂಲಕ ಕಳ್ಳಸಾಗಾಣಿಕೆದಾರರು ವಾಹನಗಳ ಸಾಮಾನ್ಯ ತಪಾಸಣೆಯಿಂದ ತಪ್ಪಿಸಿಕೊಳ್ಳಲು ಬಳಸುತ್ತಿರುವ ಹೊಸ ವಿಧಾನವೂ ಬೆಳಕಿಗೆ ಬಂದಿದೆ.

ಅಂತರರಾಜ್ಯ ಜಾಲದ ಸುಳಿವು: ಕೇರಳ ಪೊಲೀಸರ ಪ್ರಕಾರ, ಬಂಧಿತರಾಗಿರುವ ಇಬ್ಬರು ಆರೋಪಿಗಳು ಹಿಂದಿನ ಕ್ರಿಮಿನಲ್ ಪ್ರಕರಣಗಳ ಹಿನ್ನೆಲೆ ಹೊಂದಿದ್ದು, ಅಂತರರಾಜ್ಯ ಮಾದಕ ವಸ್ತು ಸಾಗಾಟ ಜಾಲದ ಸಕ್ರಿಯ ಸದಸ್ಯರಾಗಿದ್ದಾರೆ. ಪ್ರಕರಣ ಇರಿಟ್ಟಿ ಪೊಲೀಸ್ ಠಾಣೆಯಲ್ಲಿದಾಖಲಾಗಿದ್ದು, ಮಾದಕ ವಸ್ತುಗಳ ಮೂಲ ಹಾಗೂ ಜಾಲದ ಇತರ ಸದಸ್ಯರ ಕುರಿತು ತನಿಖೆ ಮುಂದುವರಿದಿದೆ.

ಚೆಕ್ ಪೋಸ್ಟ್ ಗಳ ತಪಾಸಣೆಗೆ ಪ್ರಶ್ನೆ: ವಿರಾಜಪೇಟೆ, ಪೆರುಂಬಾಡಿ ಮತ್ತು ಮಾಕುಟ್ಟ ಮಾರ್ಗಗಳು ಕರ್ನಾಟಕ ಹಾಗೂ ಕೇರಳವನ್ನು ಸಂಪರ್ಕಿಸುವ ಪ್ರಮುಖ ಗಡಿ ಕೊಂಡಿಗಳಾಗಿವೆ. ಪ್ರತಿನಿತ್ಯ ನೂರಾರು ವಾಹನಗಳು ಈ ಮಾರ್ಗಗಳಲ್ಲಿಸಂಚರಿಸುತ್ತವೆ. ಇಂತಹ ಪ್ರಮುಖ ಗಡಿ ಪ್ರದೇಶಗಳಲ್ಲಿವಾಹನಗಳ ತಪಾಸಣೆ ಎಷ್ಟು ಪರಿಣಾಮಕಾರಿಯಾಗಿ ನಡೆಯುತ್ತಿದೆ ಎಂಬ ಪ್ರಶ್ನೆ ಇದೀಗ ಮುನ್ನೆಲೆಗೆ ಬಂದಿದೆ.

ಆಧುನಿಕ ತಂತ್ರಜ್ಞಾನ ಅಗತ್ಯ: ವಾಹನಗಳ ಚಾಸಿ ಸೇರಿದಂತೆ ರಹಸ್ಯ ಸ್ಥಳಗಳಲ್ಲಿಅಡಗಿಸಿಡುವ ವಸ್ತುಗಳನ್ನು ಪತ್ತೆಹಚ್ಚಲು ಅಗತ್ಯವಿರುವ ಆಧುನಿಕ ಸ್ಕಾ್ಯನಿಂಗ್ ಉಪಕರಣಗಳು ಹಾಗೂ ತರಬೇತಿ ಪಡೆದ ಶ್ವಾನ ದಳವನ್ನು ಗಡಿ ಚೆಕ್ ಪೋಸ್ಟ್ ಗಳಲ್ಲಿನಿಯೋಜಿಸಬೇಕಿದೆ ಎಂಬುದು ಜನತೆಯ ಆಗ್ರಹವಾಗಿದೆ.

*24*7 ನಿಗಾಕ್ಕೆ ಸಾರ್ವಜನಿಕರ ಒತ್ತಾಯ

ಮಾದಕ ವಸ್ತುಗಳ ಅಕ್ರಮ ಸಾಗಾಟದಂತಹ ಪ್ರಕರಣಗಳು ಜಿಲ್ಲೆಯ ಹೆಸರಿಗೆ ಧಕ್ಕೆ ತರುವ ಸಾಧ್ಯತೆ ಇದೆ. ಅದರಲ್ಲೂಯುವಜನರನ್ನು ಗುರಿಯಾಗಿಸಿಕೊಂಡಿರುವ ಮಾದಕ ವಸ್ತುಗಳ ಜಾಲವನ್ನು ನಿಯಂತ್ರಿಸಲು ಗಡಿ ಪ್ರದೇಶಗಳಲ್ಲಿಹೈ-ಅಲರ್ಟ್ ವ್ಯವಸ್ಥೆ ಜಾರಿಗೊಳಿಸಬೇಕೆಂಬ ಒತ್ತಾಯ ಕೇಳಿಬಂದಿದೆ.

ಎಲ್ಲಪ್ರಮುಖ ಆಗಮನ ಮತ್ತು ನಿರ್ಗಮನ ಚೆಕ್ ಪೋಸ್ಟ್ ಗಳಲ್ಲಿ24*7 ತೀವ್ರ ನಿಗಾ, ಸಿಸಿಟಿವಿ ವ್ಯವಸ್ಥೆಯ ಬಲವರ್ಧನೆ ಹಾಗೂ ಆಧುನಿಕ ತಪಾಸಣಾ ತಂತ್ರಜ್ಞಾನದ ಬಳಕೆಗೆ ಆದ್ಯತೆ ನೀಡಬೇಕಿದೆ. ಗಡಿ ದಾಟುವ ಪ್ರಮುಖ ವಾಹನಗಳ ವಿವರ ಮತ್ತು ದೃಶ್ಯಾವಳಿಗಳನ್ನು ನಿಯಮಾನುಸಾರ ದಾಖಲಿಸುವ ವ್ಯವಸ್ಥೆಯೂ ಪರಿಣಾಮಕಾರಿಯಾಗಿ ಜಾರಿಯಾಗಬೇಕಿದೆ.

---ಕೋಟ್ ---

ಗಡಿ ಪ್ರದೇಶಗಳಲ್ಲಿಮಾದಕ ವಸ್ತುಗಳ ಜಾಲ ಇಷ್ಟೊಂದು ಸಕ್ರಿಯವಾಗಿರುವುದು ಆತಂಕಕಾರಿ. ಕೇರಳ ಪೊಲೀಸರು ಕ್ರೇನ್ ಬಳಸಿ ವಾಹನದ ಚಾಸಿ ಭಾಗದಲ್ಲಿದ್ದ ಡ್ರಗ್ಸ್ ಪತ್ತೆಹಚ್ಚಿದ್ದಾರೆ ಎಂದರೆ ಸಾಗಾಣಿಕೆದಾರರು ಬಳಸುತ್ತಿರುವ ತಂತ್ರ ಎಷ್ಟರ ಮಟ್ಟಿಗೆ ಮುಂದುವರಿದಿದೆ ಎಂಬುದು ಸ್ಪಷ್ಟವಾಗುತ್ತದೆ. ನಮ್ಮ ಗಡಿ ಚೆಕ್ ಪೋಸ್ಟ್ ಗಳಿಗೆ ತರಬೇತಿ ಪಡೆದ ಶ್ವಾನ ದಳ ಹಾಗೂ ಸ್ಕಾ್ಯನಿಂಗ್ ವ್ಯವಸ್ಥೆಯನ್ನು ತಕ್ಷಣ ಒದಗಿಸಬೇಕು. ಕರ್ತವ್ಯ ಲೋಪ ಎಸಗುವ ಸಿಬ್ಬಂದಿ ವಿರುದ್ಧ ಕಠಿಣ ಕ್ರಮ ಕೈಗೊಳ್ಳಬೇಕು.

-ಜೆ.ಎಂ.ಕಾವೇರಪ್ಪ, ಸ್ಥಳೀಯರು

*ಫೋಟೊ: ಎಐ