ದಿ. ಪ್ರಶಾಂತ್ ರೈ ಸ್ಮರಣಾರ್ಥ ಕ್ರಿಕೆಟ್ ಪಂದ್ಯಾಟ

Contributed bycrastalp19@gmail.com|Vijaya Karnataka
cricket match honoring late prashanth rai
ಕಾಸರಗೋಡು : ಅಧ್ಯಾಪಕ ದಿ.ಪ್ರಶಾಂತ್ ರೈ ಅವರ ಸ್ಮರಣಾರ್ಥ ಅಧ್ಯಾಪಕ ಕ್ರೀಡಾ ಸಮಿತಿಯ ಆಶ್ರಯದಲ್ಲಿವರ್ಕಾಡಿ ಪಂಚಾಯಿತಿ ಮೈದಾನ ಧರ್ಮ ನಗರದಲ್ಲಿಅಧ್ಯಾಪಕರಿಗಾಗಿ ಒಂದು ದಿನದ ಕ್ರಿಕೆಟ್ ಪಂದ್ಯಾಟ ನಡೆಯಿತು.

ಹನೀಫ್ ಧರ್ಮನಗರ ಉದ್ಘಾಟಿಸಿದರು.ಟಿಎಸ್ ಸಿ ಅಧ್ಯಕ್ಷ ಸಂಜೀವ ಸಿ.ಎಚ್ . ಸಮಾರೋಪ ಸಮಾರಂಭದಲ್ಲಿಅಧ್ಯಕ್ಷತೆ ವಹಿಸಿದ್ದರು. ಗೌರವಾಧ್ಯಕ್ಷ ಸದಾಶಿವ ಬಾಲಮಿತ್ರ ಅವರು ದಿ. ಪ್ರಶಾಂತ್ ರೈ ಸಂಸ್ಮರಣೆ ನಡೆಸಿದರು. ಕಾರ್ಯದರ್ಶಿ ಪ್ರಶಾಂತ್ ಕುಮಾರ್ ಬಿ., ಖ್ಯಾತ ಕಬಡಿ ಆಟಗಾರ ಜಬ್ಬಾರ್ , ಉದಯ್ ಸಾರಂಗ್ ಹಾಗೂ ಉದಯ್ ಶೆಟ್ಟಿ ಉಪಸ್ಥಿತರಿದ್ದರು.ಕೋಶಾಧಿಕಾರಿ ಅನಿಲ್ ಕುಮಾರ್ ಸ್ವಾಗತಿಸಿದರು. ಜತೆ ಕಾರ್ಯದರ್ಶಿ ವಸಂತ ಮೂಡಂಬೈಲು ವಂದಿಸಿದರು. ಜಿಲ್ಲೆಯ ನಾನಾ ತಂಡಗಳು ಭಾಗವಹಿಸಿದ್ದ ಪಂದ್ಯಾಟದಲ್ಲಿರಂಗಸಂಗಮ ಕುಂಬಳೆ ಚಾಂಪಿಯನ್ ಶಿಪ್ ಪಡೆದುಕೊಂಡಿತು. ಜೈ ಹೋ ಮಾಸ್ಟರ್ಸ್ ಕುಂಬಳೆ ರನ್ನರ್ಸ್ ಅಪ್ ಪ್ರಶಸ್ತಿ ಪಡೆದುಕೊಂಡಿತು. ವಿಜೇತ ತಂಡಗಳಿಗೆ ಸ್ಮರಣಿಕೆ ನೀಡಿ ಗೌರವಿಸಲಾಯಿತು.
ಚಿತ್ರ: 18ಕೆಎಸ್ ಎಲ್ ಪಂದ್ಯಾಟ