ಶೂನ್ಯ ವೇಳೆಯಲ್ಲಿವಿಕ ವರದಿಗಳ ಪ್ರಸ್ತಾಪ

Contributed bynagappa.narayanappa@timesgroup.com|Vijaya Karnataka
demand for recruitment of mathematics teachers and approval for polytechnic college
ಪ್ರೌಢಶಾಲಾ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿತಕ್ಷಣವೇ ಗಣಿತ ಶಿಕ್ಷಕರ ಹುದ್ದೆಗಳನ್ನು ಸೇರಿಸಬೇಕು. ಹಾಗೆಯೇ, ಗಣಿತ ವಿಷಯದಲ್ಲಿಅರ್ಹರಿರುವ ಎಲ್ಲಅಭ್ಯರ್ಥಿಗಳಿಗೆ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಬೇಕು ಎಂದು ಕಾಂಗ್ರೆಸ್ ನ ರಾಮೋಜಿಗೌಡ ಒತ್ತಾಯಿಸಿದರು.

‘ವಿಜಯ ಕರ್ನಾಟಕ’ದಲ್ಲಿ‘ಗಣಿತ ಮೇಷ್ಟೆ್ರೕ ಮೈನಸ್ !’ ಶೀರ್ಷಿಕೆಯಡಿ ಆ.14ರಂದು ಪ್ರಕಟವಾಗಿದ್ದ ವರದಿಯನ್ನು ಶೂನ್ಯವೇಳೆಯಲ್ಲಿಪ್ರಸ್ತಾಪಿಸಿದ ಅವರು, ‘‘ಪ್ರೌಢಶಾಲಾ ಸಹ ಶಿಕ್ಷಕರ ನೇಮಕಾತಿ ಅಧಿಸೂಚನೆಯಲ್ಲಿಕನ್ನಡ, ಇಂಗ್ಲಿಷ್ , ಸಮಾಜ ವಿಜ್ಞಾನ, ವಿಜ್ಞಾನ, ದೈಹಿಕ ಶಿಕ್ಷಣ ಅಭ್ಯರ್ಥಿಗಳಿಗೆ ಅವಕಾಶ ನೀಡಲಾಗಿದೆ. ಆದರೆ, ಸರಕಾರಿ ಶಾಲೆಗಳ ಮಕ್ಕಳಿಗೆ ಕಬ್ಬಿಣದ ಕಡಲೆಯಂತಿರುವ ಗಣಿತ ವಿಷಯಕ್ಕೆ ಶಿಕ್ಷಕರನ್ನು ನೇಮಕ ಮಾಡಲು ಕ್ರಮ ವಹಿಸದಿರುವುದು ಸರಿಯಲ್ಲ. ಇದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಕಲಿಕೆಯಲ್ಲಿಹಿಂದುಳಿಯಲಿದ್ದಾರೆ. ಹೀಗಾಗಿ, ಗಣಿತ ಶಿಕ್ಷಕರ ನೇಮಕಾತಿಗೂ ಕ್ರಮ ಕೈಗೊಳ್ಳಬೇಕು,’’ ಎಂದು ಮನವಿ ಮಾಡಿಕೊಂಡರು.
ಪಾಲಿಟೆಕ್ನಿಕ್ ಕಾಲೇಜು ಮಂಜೂರಿಗೆ ಆಗ್ರಹ

ತಾಂತ್ರಿಕ ಶಿಕ್ಷಣದಿಂದ ವಂಚಿತವಾಗಿರುವ ಸಿಂಧನೂರು ತಾಲೂಕಿಗೆ ಸರಕಾರಿ ಪಾಲಿಟೆಕ್ನಿಕ್ ಹಾಗೂ ಎಂಜಿನಿಯರಿಂಗ್ ಕಾಲೇಜನ್ನು ಮಂಜೂರು ಮಾಡಬೇಕೆಂದು ವಿಧಾನ ಪರಿಷತ್ ನ ಕಾಂಗ್ರೆಸ್ ಸದಸ್ಯ ಬಸನಗೌಡ ಬಾದರ್ಲಿ ಸರಕಾರವನ್ನು ಒತ್ತಾಯಿಸಿದರು.

‘ವಿಜಯ ಕರ್ನಾಟಕ’ದಲ್ಲಿಆ.19ರಂದು ‘ಮರಳಿ ಬಾರದ ಪಾಲಿಟೆಕ್ನಿಕ್ ಕಾಲೇಜು’ ಎಂಬ ಶೀರ್ಷಿಕೆಯಡಿ ಪ್ರಕಟವಾಗಿದ್ದ ವಿಶೇಷ ವರದಿಯನ್ನು ಶೂನ್ಯ ವೇಳೆಯಲ್ಲಿಪ್ರಸ್ತಾಪಿಸಿದ ಅವರು, ‘‘ಸಿಂಧನೂರು ತಾಲೂಕಿನಲ್ಲಿಸರಕಾರಿ, ಖಾಸಗಿ ಪದವಿಪೂರ್ವ, ಪದವಿ, ಸ್ನಾತಕೋತ್ತರ ಪದವಿ ಕಾಲೇಜುಗಳು ಸಾಕಷ್ಟಿವೆ. ಆದರೆ, ತಾಂತ್ರಿಕ ಶಿಕ್ಷಣ ನೀಡುವ ಒಂದೇ ಒಂದು ಶಿಕ್ಷಣ ಸಂಸ್ಥೆ ಇಲ್ಲ. ಪ್ರತಿ ವರ್ಷ ಎಸ್ಸೆಸ್ಸೆಲ್ಸಿಯಲ್ಲಿ4 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣರಾಗುತ್ತಿದ್ದು, ಬಹುತೇಕರು ತಾಂತ್ರಿಕ ಶಿಕ್ಷಣಕ್ಕೆ ಪಕ್ಕದ ತಾಲೂಕು, ಜಿಲ್ಲೆಗೆ ತೆರಳುವ ಅನಿವಾರ್ಯತೆ ಇದೆ. ಆದ ಕಾರಣ, ಪಾಲಿಟೆಕ್ನಿಕ್ ಕಾಲೇಜು ಮಂಜೂರು ಮಾಡಬೇಕು,’’ ಎಂದು ಆಗ್ರಹಿಸಿದರು.

======================