ಮಹಾಲಿಂಗಪುರ: ಪಟ್ಟಣದ ಆರಾಧ್ಯ ದೈವ ಮಹಾಲಿಂಗೇಶ್ವರ ಜಾತ್ರೆ ಸೆ.25ರಿಂದ 28ರವರೆಗೆ ನಡೆಸಲು ನಿರ್ಧರಿಸಲಾಗಿದೆ.ಮಹಾಲಿಂಗೇಶ್ವರ ದೇವಸ್ಥಾನದಲ್ಲಿಪೀಠಾಧಿಪತಿ ಮಹಾಲಿಂಗೇಶ್ವರ ಶಿವಯೋಗಿ ರಾಜೇಂದ್ರ ಶ್ರೀಗಳು ಹಾಗೂ ಜಾತ್ರಾ ಕಮಿಟಿ ಅಧ್ಯಕ್ಷ ರವಿಗೌಡ ಪಾಟೀಲ ಅಧ್ಯಕ್ಷತೆಯಲ್ಲಿಜರುಗಿದ ಪೂರ್ವಭಾವಿ ಸಭೆಯಲ್ಲಿಈ ನಿರ್ಧಾರ ಕೈಗೊಳ್ಳಲಾಯಿತು. ಸೆ.25ರಂದು ಚನ್ನಗಿರಿ ಪರ್ವತದ ರಾಮಲಿಂಗೇಶ್ವರ(ಚನ್ನಗಿರೇಶ್ವರ) ದೇವಸ್ಥಾನದಲ್ಲಿಜಾತ್ರಾ ಜಟೋತ್ಸವ, ಸೆ.26ರಂದು ತುಂಬಿದ ರಥೋತ್ಸವ, ಸೆ.27ರಂದು ಮರು ರಥೋತ್ಸವ, ಸೆ.28ರಂದು ಜಂಗಿನಿಕಾಲಿ ಕುಸ್ತಿ ನಡೆಸಲು ತೀರ್ಮಾನಿಸಲಾಯಿತು.