ಬಾಟಮ್ ಸ್ಟೋರಿ

Contributed byshubha.hegde@timesgroup.com|Vijaya Karnataka
tricolor nail art as a bottom story
ಉಗುರಲ್ಲೂಅರಳಲಿ ತ್ರಿವರ್ಣದ ಸೊಬಗು

ಇಂಟ್ರೊ: ಸ್ವಾತಂತ್ರೋತ್ಸವದ ಸಂದರ್ಭದಲ್ಲಿಸೋಶಿಯಲ್ ಮೀಡಿಯಾದಲ್ಲಿತ್ರಿವರ್ಣ ನೇಲ್ ಆರ್ಟ್ ಚಿತ್ತಾರಗಳು ಗಮನ ಸೆಳೆಯುತ್ತಿವೆ.
ಮಹಾಲಕ್ಷ್ಮೇ ಕೆ.ಎನ್ .

ಸ್ಲಗ್ ; ವರ್ಣ ಚಿತ್ತಾರ

ತ್ರಿವರ್ಣ ರಾಷ್ಟ್ರ ಧ್ವಜದ ಬಣ್ಣಗಳಷ್ಟೇ ಅಲ್ಲ, ಅವು ದೇಶ ಎಂಬ ಹೆಮ್ಮೆ, ಗೌರವದ ಭಾವ ಮೂಡಿಸುತ್ತವೆ. ದೇಶಭಕ್ತಿಯನ್ನು ಒಬ್ಬೊಬ್ಬರು ಒಂದೊಂದು ರೀತಿಯಲ್ಲಿವ್ಯಕ್ತಪಡಿಸುತ್ತಾರೆ. ಉಡುಗೆ, ಆ್ಯಕ್ಸಸರಿಸ್ , ಮೇಕಪ್ ಜೊತೆಗೆ ನೇಲ್ ಆರ್ಟ್ ಕೂಡ ಈ ದಿನ ತನ್ನದೇ ಆದ ರೀತಿಯಲ್ಲಿ ದೇಶಕ್ಕೆ ಗೌರವ ಸೂಚಿಸಲು ಹೊರಟಿದೆ. ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿಗಮನ ಸೆಳೆದಿರುವ, ನೇಲ್ ಆರ್ಟ್ ಕಲಾವಿದರಿಗೆ ಬೇಡಿಕೆ ಇಟ್ಟಿರುವ ಉಗುರಿನ ಸಿಂಗಾರ ಲೋಕದಲ್ಲಿದೇಶಭಕ್ತಿಯ ಸಾರ ಹೇಗೆಲ್ಲಹೊರಹೊಮ್ಮಿದೆ ಎಂಬ ವಿವರ ಇಲ್ಲಿದೆ.

ತ್ರಿವರ್ಣಗಳ ಸಮ್ಮಿಲನ

ಸರಳ ಹಾಗೂ ಮನಸೆಳೆಯುವ ವಿನ್ಯಾಸ ಬಯಸುವವರಿಗೆ ಇದು ಅತ್ಯುತ್ತಮ. ಉಗುರುಗಳಿಗೆ ಪಾರದರ್ಶಕ ರಕ್ಷಣಾ ಲೇಪನ ಹಚ್ಚಿ ನಂತರ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳನ್ನು ಮೃದುವಾಗಿ ಒಂದರೊಡನೊಂದು ಬೆರೆಸುವಂತೆ ಅಲಂಕರಿಸಿ. ಬಣ್ಣಗಳ ನಡುವೆ ತೀಕ್ಷ$್ಣ ಗಡಿ ಕಾಣದಂತೆ ಹೊಂದಿಸಿದರೆ ಉಗುರುಗಳ ಮೇಲೆ ತ್ರಿವರ್ಣದ ಮೋಡವೇ ತೇಲುತ್ತಿರುವಂತೆ ಕಾಣುತ್ತದೆ. ಕೊನೆಯಲ್ಲಿಹೊಳಪು ನೀಡುವ ಮೇಲಿನ ಲೇಪನ ಹಚ್ಚಿದರೆ ಬಣ್ಣಗಳು ಜೀವಂತವಾಗಿ ಕಂಗೊಳಿಸುತ್ತವೆ.

ಹೆಮ್ಮೆಯ ಅಶೋಕಚಕ್ರ

ನಮ್ಮ ರಾಷ್ಟ್ರಧ್ವಜದ ಹೃದಯಭಾಗದಲ್ಲಿರುವ ಅಶೋಕಚಕ್ರವು ನ್ಯಾಯ, ಧರ್ಮ ಮತ್ತು ನಿರಂತರ ಚಲನೆಯ ಸಂಕೇತ. ಒಂದೆರಡು ಉಗುರುಗಳಿಗೆ ಬಿಳಿ ಬಣ್ಣದ ಹಿನ್ನೆಲೆ ನೀಡಿ, ಮಧ್ಯದಲ್ಲಿನೀಲಿ ಬಣ್ಣದಿಂದ ಸಣ್ಣ ಅಶೋಕಚಕ್ರವನ್ನು ಬಿಡಿಸಿ. ಅದರ ಸುತ್ತಲೂ ಕೇಸರಿ ಮತ್ತು ಹಸಿರು ಬಣ್ಣದ ಪುಟ್ಟ ಚುಕ್ಕಿಗಳು ಅಥವಾ ಹೂವಿನ ದಳಗಳ ವಿನ್ಯಾಸ ಸೇರಿಸಿದರೆ ಉಗುರುಗಳ ಸೌಂದರ್ಯ ಇಮ್ಮಡಿಯಾಗುತ್ತದೆ.

ನವಿರಾದ ತ್ರಿವರ್ಣ ಅಂಚು

ಉಗುರುಗಳ ಮೇಲ್ಭಾಗವನ್ನು ಸಹಜವಾಗಿಯೇ ಉಳಿಸಿ ತುದಿಯಲ್ಲಿಮಾತ್ರ ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳನ್ನು ತೆಳುವಾದ ರೇಖೆಗಳ ರೂಪದಲ್ಲಿಅಲಂಕರಿಸಬಹುದು. ಮೂರೂ ಬಣ್ಣಗಳನ್ನು ಒಂದೇ ಉಗುರಿನ ತುದಿಯಲ್ಲಿಮೂಡಿಸಬಹುದು ಅಥವಾ ಪ್ರತಿಯೊಂದು ಉಗುರಿನ ತುದಿಗೂ ಒಂದೊಂದು ಬಣ್ಣ ಬಳಸಿ ವಿಭಿನ್ನತೆ ತರಬಹುದು. ಇದು ಕಚೇರಿ ಮತ್ತು ಕಾಲೇಜುಗಳಿಗೆ ಅತ್ಯಂತ ಸೂಕ್ತ.

ಸಾಂಪ್ರದಾಯಿಕ ಚಿತ್ತಾರ

ತಿಳಿ ಬಿಳಿ ಅಥವಾ ನಸುಬಣ್ಣದ ಹಿನ್ನೆಲೆಯ ಮೇಲೆ ಕೇಸರಿ ಹಾಗೂ ಹಸಿರು ಬಣ್ಣಗಳಿಂದ ಪುಟ್ಟ ಹೂವುಗಳು, ಎಲೆಗಳು, ಮಂಡಲ ಅಥವಾ ಸಾಂಪ್ರದಾಯಿಕ ವಿನ್ಯಾಸಗಳನ್ನು ಬಿಡಿಸಬಹುದು. ಎಲ್ಲಾಉಗುರುಗಳಿಗೂ ಒಂದೇ ವಿನ್ಯಾಸ ಮಾಡುವ ಬದಲು ಒಂದು ಅಥವಾ ಎರಡು ಉಗುರುಗಳಿಗೆ ವಿಶೇಷ ಅಲಂಕಾರ ನೀಡಿ ಉಳಿದವುಗಳಲ್ಲಿಸಣ್ಣ ಚುಕ್ಕಿಗಳನ್ನು ಬಳಸಿ.

ಭಾರತೀಯ ಸಂಸ್ಕೃತಿ

ಪ್ರತಿಯೊಂದು ಉಗುರಿನ ಮೇಲೂ ಭಾರತದ ವೈಶಿಷ್ಟ್ಯವನ್ನು ಸಾರುವ ಪುಟ್ಟ ಚಿತ್ರಗಳನ್ನು ಮೂಡಿಸಬಹುದು. ಒಂದರಲ್ಲಿರಾಷ್ಟ್ರಧ್ವಜ, ಮತ್ತೊಂದರಲ್ಲಿಅಶೋಕಚಕ್ರ, ಇನ್ನೊಂದರಲ್ಲಿನವಿಲುಗರಿ ಅಥವಾ ಕಮಲದ ಹೂವನ್ನು ಬಿಡಿಸುವುದರಿಂದ ಪ್ರತಿಯೊಂದು ಉಗುರೂ ಒಂದೊಂದು ಕಥೆಯನ್ನು ಹೇಳುತ್ತದೆ. ಕೆಲವೇ ಉಗುರುಗಳಲ್ಲಿಈ ಕಲಾಕೃತಿ ಮೂಡಿಸಿ ಉಳಿದವನ್ನು ಸರಳವಾಗಿಡುವುದು ಹೆಚ್ಚು ಅಂದ.

ಆಧುನಿಕ ಅಮೂರ್ತ ವಿನ್ಯಾಸ

ತ್ರಿವರ್ಣದ ಬಣ್ಣಗಳನ್ನು ಧ್ವಜದ ರೂಪದಲ್ಲೇ ಚಿತ್ರಿಸಬೇಕೆಂದಿಲ್ಲ. ಕೇಸರಿ, ಬಿಳಿ ಮತ್ತು ಹಸಿರು ಬಣ್ಣಗಳಿಂದ ಅಲೆಗಳಂತೆ ಹರಿಯುವ ರೇಖೆಗಳು ಅಥವಾ ತಿರುವುಗಳ ವಿನ್ಯಾಸಗಳನ್ನು ಮೂಡಿಸಿ, ನಡುವೆ ನೀಲಿ ಬಣ್ಣದ ಸ್ಪರ್ಶ ನೀಡಬಹುದು. ಇದು ಆಧುನಿಕತೆ ಮತ್ತು ದೇಶಪ್ರೇಮವೆರಡನ್ನೂ ಒಟ್ಟಿಗೆ ಪ್ರತಿಬಿಂಬಿಸುತ್ತದೆ.

ವಿಭಿನ್ನ ಶೈಲಿಯ ಸಂಯೋಜನೆ

ಎರಡೂ ಕೈಗಳಲ್ಲೂಒಂದೇ ರೀತಿಯ ವಿನ್ಯಾಸವಿರಬೇಕಿಲ್ಲ. ಒಂದು ಕೈಯಲ್ಲಿತ್ರಿವರ್ಣದ ಅಲಂಕಾರವನ್ನು ಸ್ವಲ್ಪ ಎದ್ದು ಕಾಣುವಂತೆ ಮಾಡಿ, ಇನ್ನೊಂದು ಕೈಯಲ್ಲಿಅತ್ಯಂತ ಸರಳ ವಿನ್ಯಾಸಗಳನ್ನು ಬಳಸಬಹುದು. ಉದಾಹರಣೆಗೆ, ಒಂದು ಉಗುರಿನಲ್ಲಿಅಶೋಕಚಕ್ರ, ಮತ್ತೊಂದರಲ್ಲಿಮೂರು ಬಣ್ಣದ ಚುಕ್ಕಿಗಳನ್ನು ಬಳಸುವುದು ಯುವಜನರಲ್ಲಿಹೆಚ್ಚು ಜನಪ್ರಿಯ.

ಬಾಕ್ಸ್

ಅತಿಯಾದ ಬಣ್ಣಗಳಿಗಿಂತ ಮೃದುವಾದ ಹಿನ್ನೆಲೆಯ ಮೇಲೆ ನೀಡುವ ಸಣ್ಣ ತ್ರಿವರ್ಣದ ಸ್ಪರ್ಶವು ಸಂಯಮಿತ ಸೌಂದರ್ಯವನ್ನು ನೀಡುತ್ತದೆ. ಅಲಂಕಾರಕ್ಕೆ ಮೊದಲು ಉಗುರುಗಳನ್ನು ಸ್ವಚ್ಛವಾಗಿ ಕತ್ತರಿಸಿ, ಸಮವಾಗಿ ರೂಪಗೊಳಿಸಿದರೆ ವಿನ್ಯಾಸವು ಮತ್ತಷ್ಟು ಅಚ್ಚುಕಟ್ಟಾಗಿ ಮೂಡಿಬರುತ್ತದೆ. ಕಚೇರಿ ಅಥವಾ ಅಧಿಕೃತ ಕಾರ್ಯಕ್ರಮಗಳಿಗೆ ತೆರಳುವಾಗ ಅಂಚಿನ ವಿನ್ಯಾಸ ಅಥವಾ ಸರಳ ರೇಖೆಗಳ ವಿನ್ಯಾಸವೇ ಹೆಚ್ಚು ಸೂಕ್ತ.