ಬಳ್ಳಾರಿ: 4 ಸುದ್ದಿಗಳು

Contributed bymaruthi.sunagar@timesofindia.com|Vijaya Karnataka
80th independence day and special events in ballari
ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ

ಬಳ್ಳಾರಿ: ನಗರದ ಬಿಎಂಸಿಆರ್ ಸಿ ಮೈದಾನದಲ್ಲಿಜಿಲ್ಲಾಡಳಿತದಿಂದ 80ನೇ ಸ್ವಾತಂತ್ರ್ಯೋತ್ಸವ ಕಾರ್ಯಕ್ರಮ ಆ.15ರಂದು ಬೆಳಗ್ಗೆ 9 ಗಂಟೆಗೆ ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ತಿಳಿಸಿದ್ದಾರೆ. ಯೋಜನೆ ಮತ್ತು ಸಾಂಖ್ಯಿಕ ಸಚಿವ ಬಿ.ನಾಗೇಂದ್ರ ಧ್ವಜಾರೋಹಣಾ ನೆರವೇರಿಸುವರು. ನಂತರ ಪಥಸಂಚಲನ ಪಡೆಗಳಿಂದ ಗೌರವ ವಂದನೆ ಸ್ವೀಕರಿಸಿ ಸ್ವಾತಂತ್ರ್ಯೋತ್ಸವದ ಸಂದೇಶ ನೀಡುವರು. ಇದಕ್ಕೂ ಮುನ್ನ ಸಚಿವರು, ಬೆಳಗ್ಗೆ 8 ಗಂಟೆಗೆ ಡಾ.ರಾಜ್ ಕುಮಾರ್ ಉದ್ಯಾನದಲ್ಲಿನ ರಾಷ್ಟ್ರಪಿತ ಮಹಾತ್ಮ ಗಾಂಧೀಜಿ ಪ್ರತಿಮೆಗೆ ಗೌರವ ಸಮರ್ಪಣೆ ಮಾಡುವರು. ಬೆಳಗ್ಗೆ 10ರಿಂದ ಬಿಎಂಸಿಆರ್ ಸಿ ಮೈದಾನದಲ್ಲಿಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ, ಸಂಜೆ 6 ಗಂಟೆಗೆ ನಗರದ ಡಾ.ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿನಾನಾ ಶಾಲಾ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ ಎಂದು ಡಿಸಿ ತಿಳಿಸಿದ್ದಾರೆ.
**

18ಕ್ಕೆ ಪ್ರಗತಿ ಪರಿಶೀಲನಾ ಸಭೆ

ಬಳ್ಳಾರಿ: ಜಿಲ್ಲಾ ಅಲ್ಪಾಸಂಖ್ಯಾತರ ಕಲ್ಯಾಣ ಇಲಾಖೆಯ ಪ್ರಸ್ತಕ ಸಾಲಿನ ಪ್ರಧಾನಮಂತ್ರಿಗಳ ಹೊಸ 15 ಅಂಶಗಳ ಕಾರ್ಯಕ್ರಮದ ಅನುಷ್ಠಾನದ 1ನೇ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆ ಆ.18ರಂದು ಬೆಳಗ್ಗೆ 11 ಗಂಟೆಗೆ ನಡೆಯಲಿದೆ. ನಗರದ ನೂತನ ಜಿಲ್ಲಾಡಳಿತ ಭವನದ ಸಭಾಂಗಣದಲ್ಲಿನಡೆಯುವ ಸಭೆಯ ಅಧ್ಯಕ್ಷತೆಯನ್ನು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್ ವಹಿಸಲಿದ್ದಾರೆ ಎಂದು ಜಿಲ್ಲಾ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿ ರಾಜು ತಿಳಿಸಿದ್ದಾರೆ.

**

15ಕ್ಕೆ ಜನ ಸುನ್ವಾಯಿ ವಿಶೇಷ ಅಭಿಯಾನ

ಬಳ್ಳಾರಿ: ಸ್ವಾತಂತ್ರ್ಯ ದಿನಾಚರಣೆ ನಿಮಿತ್ತ ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ವ್ಯಾಪ್ತಿಯ ಬಳ್ಳಾರಿ, ಕಂಪ್ಲಿಮತ್ತು ಕುರುಗೋಡು ತಾಲೂಕಿನ ಆಯ್ದ 10 ಗ್ರಾಮಗಳ ಆದಿ ಸೇವಾ ಕೇಂದ್ರಗಳಲ್ಲಿಆಗಸ್ವ್ 13 ರಿಂದ 15 ರವರೆಗೆ ‘ಜನ ಸುನ್ವಾಯಿ ವಿಶೇಷ ಅಭಿಯಾನ’ ಹಮ್ಮಿಕೊಳ್ಳಲಾಗಿದೆ. ಕೇಂದ್ರ ಬುಡಕಟ್ಟು ವ್ಯವಹಾರಗಳ ಸಚಿವಾಲಯದ ಧರ್ತಿ ಆಭಾ ಜನಜಾತೀಯ ಗ್ರಾಮ ಉತ್ಕರ್ಷ ಅಭಿಯಾನ ಹಾಗೂ ಪಿಎಂ -ಜನಮನ್ ಯೋಜನೆಯಡಿ ಬುಡಕಟ್ಟು ಸಮುದಾಯದ ಜನರಿಗೆ ಕೇಂದ್ರ ಮತ್ತು ರಾಜ್ಯ ಸರಕಾರಗಳ ನಾನಾ ಕಲ್ಯಾಣ ಯೋಜನೆಗಳ ಪ್ರಯೋಜನಗಳನ್ನು ನೇರವಾಗಿ ತಲುಪಿಸುವುದು ಹಾಗೂ ಅಗತ್ಯ ದಾಖಲೆ ಒದಗಿಸಲಾಗುವುದು. ಜಿಲ್ಲಾಧಿಕಾರಿ ಅಧ್ಯಕ್ಷತೆಯಲ್ಲಿಜಿಲ್ಲೆಯ 17 ಇಲಾಖೆಗಳು ಒಟ್ಟಾಗಿ ಕೆಲಸ ಮಾಡಲಿದ್ದು, ಸಾರ್ವಜನಿಕರ ಕುಂದುಕೊರತೆಗಳು, ದೂರುಗಳು ಹಾಗೂ ಹೊಸ ಅರ್ಜಿಗಳನ್ನು ಸ್ವೀಕರಿಸಿ ಪರಿಹರಿಸಲಿವೆ. ಬಳ್ಳಾರಿ, ಕಂಪ್ಲಿಮತ್ತು ಕುರುಗೋಡು ತಾಲೂಕು ವ್ಯಾಪ್ತಿಯ ಹಿರೇಹಡಗಲಿ, ಬಸರಕೋಡು, ಸಿಂಧುವಾಳ, ಯರಗುಡಿ, ತಂಬ್ರಹಳ್ಳಿ, ಬ್ಯಾಲಚಿಂತೆ, ಮೀನಹಳ್ಳಿ, ಪರಮದೇವನಹಳ್ಳಿ, ಕುಂಟನಾಳು, ಬುರನಾಯಕನಹಳ್ಳಿ ಗ್ರಾಮಗಳ ಆದಿ ಸೇವಾ ಕೇಂದ್ರಗಳಲ್ಲಿಈ ಕಾರ್ಯಕ್ರಮ ನಡೆಯಲಿದೆ. ಗ್ರಾಮಸ್ಥರು ತಮ್ಮ ದೂರು ಹಾಗೂ ಅಹವಾಲುಗಳನ್ನು ನಿಗದಿತ ನಮೂನೆಯಲ್ಲಿಭರ್ತಿ ಮಾಡಿ, ಆಯಾ ಗ್ರಾಮಗಳ ಆದಿ ಸೇವಾ ಕೇಂದ್ರಗಳಲ್ಲಿನೀಡಬೇಕು ಎಂದು ಬಳ್ಳಾರಿ ತಾಲೂಕು ಪರಿಶಿಷ್ಟ ವರ್ಗಗಳ ಕಲ್ಯಾಣಾಧಿಕಾರಿ ಪ್ರಕಟಣೆಯಲ್ಲಿತಿಳಿಸಿದ್ದಾರೆ.

**

ಉಚಿತ ವೃತ್ತಿಪರ ತರಬೇತಿಗೆ ಅರ್ಜಿ

ಬಳ್ಳಾರಿ: ಗ್ರಾಮೀಣ ಪ್ರದೇಶದ ನಿರುದ್ಯೋಗಿ ಯುವಕ- ಯುವತಿಯರಿಗೆ ಹಾಗೂ ಸ್ವ-ಉದ್ಯೋಗ ಆಕಾಂಕ್ಷಿಗಳಿಗೆ ನಗರದ ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆಯಿಂದ ಉಚಿತ ಊಟ ಮತ್ತು ವಸತಿ ಸಹಿತ ನಾನಾ ವೃತ್ತಿಪರ ತರಬೇತಿ ಆಯೋಜಿಸಲಾಗಿದೆ. ಆ.18 ರಿಂದ ಮೋಟರ್ ರಿವೈಂಡಿಂಗ್ ಮತ್ತು ಪಂಪ್ ಸೆಟ್ ರಿಪೇರಿ, ಆ.24 ರಿಂದ ಕೃಷಿ ಉದ್ಯಮಿ (ಕೋಳಿ ಸಾಕಣೆ), ಸೆ.7 ರಿಂದ ಅಣಬೆ ಬೇಸಾಯಿ, ಸೆ.16 ರಿಂದ ಫಾಸ್ಟ್ ಫುಡ್ ತಯಾರಿಕೆ ತರಬೇತಿ, ಸೆ.21 ರಿಂದ ಎಂಬ್ರಾಡರಿ, ಅ.5 ರಿಂದ ಕೃತಕ ಆಭರಣ ತಯಾರಿಕೆ ತರಬೇತಿ, ಅ.12 ರಿಂದ ಕೃಷಿ ಉದ್ಯಮಿ (ಹೈನುಗಾರಿಕೆ ಮತ್ತು ಕುರಿ ಸಾಕಣೆ) ತರಬೇತಿ, ಅ.27 ರಿಂದ ಲಘು ವಾಹನ ಚಾಲನಾ ತರಬೇತಿ, ನ.2 ರಿಂದ ಪೇಪರ್ ಕವರ್ ಪೈಲ್ ಮೇಕಿಂಗ್ ತರಬೇತಿ ನೀಡಲಾಗುತ್ತಿದೆ. ಅರ್ಜಿ ಸಲ್ಲಿಕೆ ಹಾಗೂ ಮಾಹಿತಿಗೆ ನಿರ್ದೇಶಕರು, ಕೆನರಾ ಬ್ಯಾಂಕ್ ಗ್ರಾಮೀಣ ಸ್ವ-ಉದ್ಯೋಗ ತರಬೇತಿ ಸಂಸ್ಥೆ , ಡಿ.ಐ.ಸಿ. ಕಾಂಪೌಂಡ್ , ಸರಕಾರಿ ಪಾಲಿಟೆಕ್ನಿಕ್ ಕಾಲೇಜು ಹತ್ತಿರ, ಹೊಸಪೇಟೆ ರಸ್ತೆ, ಬಳ್ಳಾರಿ ಅಥವಾ ದೂ.08392-299117, ಮೊ.9449860659, 9008464120, 9980123608 ಗೆ ಸಂಪರ್ಕಿಸಬಹುದಾಗಿದೆ ಎಂದು ಪ್ರಕಟಣೆ ತಿಳಿಸಿದೆ.