ಜಿಲ್ಲಾಬಿಜೆಪಿಯಿಂದ ಹರ್ ಘರ್ ತಿರಂಗಾ ಮೆರವಣಿಗೆ

Contributed bychandregowda.n@timesofindia.com|Vijaya Karnataka
district bjps har ghar tiranga parade a majestic celebration of independence day
ವಿಕ ಸುದ್ದಿಲೋಕ ಚಿಕ್ಕಬಳ್ಳಾಪುರ

ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದ ಅಂಗವಾಗಿ ಜಿಲ್ಲಾ ಬಿಜೆಪಿ ಘಟಕದ ವತಿಯಿಂದ ನಗರದಲ್ಲಿಹರ್ ಘರ್ ತಿರಂಗಾ ಅಭಿಯಾನದ ಯಾತ್ರೆ ವಿಜೃಂಭಣೆಯಿಂದ ನೆರವೇರಿತು.
ನಗರದ ಶಿಡ್ಲಘಟ್ಟ ವೃತ್ತದಿಂದ ವಾಪಸಂದ್ರ ಬಿಜೆಪಿ ಜಿಲ್ಲಾಕಚೇರಿವರೆಗೂ ಬಿಜೆಪಿ ಮುಖಂಡರು ಮತ್ತು ಕಾರ್ಯಕರ್ತರು ಬೃಹತ್ ತಿರಂಗಾ ಮೆರವಣಿಗೆ ನಡೆಸಿ, ಭಾರತ್ ಮಾತಾ ಕಿ ಜೈ, ವಂದೇ ಮಾತರಂ’ ಘೋಷಣೆಗಳನ್ನು ಮೊಳಗಿಸಿದರು.

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ‘ಹರ್ ಘರ್ ತಿರಂಗಾ’ ಕರೆಯಂತೆ ಜಿಲ್ಲಾ ಭಾರತೀಯ ಜನತಾ ಪಕ್ಷದ ವತಿಯಿಂದ ಆಯೋಜಿಸಿದ್ದ ಈ ಬೃಹತ್ ಜಾಗೃತಿ ಯಾತ್ರೆಗೆ ಚಾಲನೆ ನೀಡಿ ಮಾತನಾಡಿದ ಜಿಲ್ಲಾ ಬಿಜೆಪಿ ಅಧ್ಯಕ್ಷ ಸೀಕಲ್ ರಾಮಚಂದ್ರಗೌಡ, ಹರ್ ಘರ್ ತಿರಂಗಾ ಅಭಿಯಾನ ಕೇವಲ ಒಂದು ಕಾರ್ಯಕ್ರಮವಲ್ಲ. ಅದು ಪ್ರತಿಯೊಬ್ಬ ಭಾರತೀಯನಲ್ಲಿದೇಶಪ್ರೇಮ, ಏಕತೆ ಮತ್ತು ಹೆಮ್ಮೆಯ ಭಾವನೆಯನ್ನು ಮೂಡಿಸುವ ಶಕ್ತಿಶಾಲಿ ಅಭಿಯಾನ ಎಂದು ಹೇಳಿದರು.

ಆಜಾದಿ ಕಾ ಅಮೃತ್ ಮಹೋತ್ಸವದ ಭಾಗವಾಗಿ ಆರಂಭಗೊಂಡ ಈ ಅಭಿಯಾನವು ಇಂದು ಪ್ರತಿಯೊಂದು ಮನೆಯಲ್ಲೂದೇಶಪ್ರೇಮದ ಕಿಚ್ಚು ಹಚ್ಚಿದೆ. ಎಲ್ಲಸಾರ್ವಜನಿಕರು ಆ.13ರಿಂದ ಅ.15ರವರೆಗೆ ತಮ್ಮ ಮನೆಗಳ ಮೇಲೆ ರಾಷ್ಟ್ರಧ್ವಜವನ್ನು ಹಾರಿಸಿ, ದೇಶದ ಸ್ವಾತಂತ್ರ್ಯಕ್ಕಾಗಿ ಶ್ರಮಿಸಿದ ವೀರ ಯೋಧರನ್ನು ಸ್ಮರಿಸುವಂತೆ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿಬಿಜೆಪಿ ಮುಖಂಡ ವೇಣುಗೋಪಾಲ್ , ಜಿಲ್ಲಾ ಪ್ರಧಾನ ಕಾರ್ಯದರ್ಶಿಗಳಾದ ಮುರಳೀಧರ್ , ಕೊಂಡೇನಹಳ್ಳಿ ಮುರಳಿ, ಮಧುಸೂರ್ಯ ನಾರಾಯಣರೆಡ್ಡಿ, ಮಹಿಳಾ ಮೋರ್ಚಾ ಕಾರ್ಯದರ್ಶಿ ನಿರ್ಮಲಮ್ಮ, ಜಿಲ್ಲಾ ಬಿಜೆಪಿ ಮಾಜಿ ಪ್ರಧಾನ ಕಾರ್ಯದರ್ಶಿ ಸುರೇಂದ್ರಗೌಡ, ಮುಖಂಡರಾದ ಕೃಷ್ಣಮೂರ್ತಿ, ಶ್ರೀನಾಥ್ , ವಿ.ಮಧುಚಂದ್ರ ಸೇರಿದಂತೆ ಹಲವರಿದ್ದರು.

13ಸಿಬಿಪಿಫೋಟೋ02

ಚಿಕ್ಕಬಳ್ಳಾಪುರ ನಗರದ ಶಿಡ್ಲಘಟ್ಟ ವೃತ್ತದಲ್ಲಿಹರ್ ಘರ್ ತಿರಂಗಾ ಮೆರವಣಿಗೆಗೆ ಬಿಜೆಪಿ ಜಿಲ್ಲಾಧ್ಯಕ್ಷ ಸೀಕಲ್ ರಾಮವಚಂದ್ರಗೌಡ ಚಾಲನೆ ನೀಡಿದರು.