ವಿಕ ಸುದ್ದಿಲೋಕ ಸುಳ್ಯ ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ವತಿಯಿಂದ ಸ್ವಾತಂತ್ರ್ಯೋತ್ಸವ ಅಂಗವಾಗಿ ಬಡವರಿಗೆ ಮತ್ತು ನಾನಾ ಸಂಘ ಸಂಸ್ಥೆಗಳಿಗೆ ಕೊಡುಗೆಗಳ ಹಸ್ತಾಂತರ ಕಾರ್ಯಕ್ರಮ ಸುಳ್ಯ ಮತ್ತು ಬೆಂಗಳೂರಿನ ವಿವಿಧ ಕಡೆಗಳಲ್ಲಿನಡೆಯಿತು.
ಸುಳ್ಯ ರೆಡ್ ಕ್ರಾಸ್ ಸಂಸ್ಥೆ ಸಹಕಾರದೊಂದಿಗೆ ಸುಳ್ಯ ಆಂಬ್ಯುಲೆನ್ಸ್ ಚಾಲಕ ಮಾಲಕ ಸಂಘ ಹಾಗೂ ಸುನ್ನಿ ಯುವಜನ ಸಂಘ ಸುಳ್ಯ ಸೇರಿದಂತೆ ಎರಡು ಆಕ್ಸಿಜನ್ ಸಿಲಿಂಡರ್ ಗಳ ಕಿಟ್ ನ್ನು ಸಂಘದ ಪದಾಧಿಕಾರಿಗಳಿಗೆ ಹಸ್ತಾಂತರ ಮಾಡಲಾಯಿತು. ಅಲ್ಲದೇ ಗೂನಡ್ಕ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟು ಪುಸ್ತಕ, ಪೆನ್ , ಪೆನ್ಸಿಲ್ , ಎರೇಸರ್ , ಶಾರ್ಪನರ್ ಹಾಗೂ ಟೀಶರ್ಟ್ ಗಳನ್ನು ಉಚಿತವಾಗಿ ವಿತರಿಸಲಾಯಿತು.
ಹಸ್ತಾಂತರ ಕಾರ್ಯಕ್ರಮದಲ್ಲಿಸಜ್ಜನ ಪ್ರತಿಷ್ಠಾನ ಯುನೈಟೆಡ್ ಅರಬ್ ಎಮಿರೇಟ್ಸ್ ಘಟಕ ಅಧ್ಯಕ್ಷ ಅನ್ವರ್ ಶಿರೂರ್ ಶುಭ ಹಾರೈಸಿ ಸಜ್ಜನ ಪ್ರತಿಷ್ಠಾನ ಕಾರುಣ್ಯ ಸೇವೆಯಲ್ಲಿಮಾದರಿ ಕೆಲಸ ಮಾಡುತ್ತಿದೆ. ಇದು ನಿಜಕ್ಕೂ ಅಭಿನಂದನಾರ್ಹ ಸೇವೆ. ಮುಂದೆಯೂ ಸಜ್ಜನ ಪ್ರತಿಷ್ಠಾನದ ಸಮಾಜ ಕಾರ್ಯಗಳಿಗೆ ಸಂಪೂರ್ಣ ಬೆಂಬಲವಿದೆ ಎಂದರು.
ಸುಳ್ಯ ರೆಡ್ ಕ್ರಾಸ್ ಸಭಾಪತಿ ಪಿ.ಬಿ. ಸುಧಾಕರ ರೈ ಆಕ್ಸಿಜನ್ ಸಿಲಿಂಡರ್ ಹಸ್ತಾಂತರ ಮಾಡಿದರು. ಆಕ್ಸಿಜನ್ ಸಿಲಿಂಡರ್ ಕೊಡುಗೆಯಲ್ಲಿಬೆಂಗಳೂರು ಪಾರ್ಮೆಡ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಣಾಧಿಕಾರಿ ಆರಿಸ್ ಪೇರಡ್ಕ ಸಹಕರಿಸಿದರು.
ಟೀಶರ್ಟ್ ವಿತರಣೆ:
ಗೂನಡ್ಕ ಶ್ರೀ ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳಿಗೆ ನೋಟು ಪುಸ್ತಕ, ಪೆನ್ , ಪೆನ್ಸಿಲ್ , ಎರೇಸರ್ , ಶಾರ್ಪನರ್ ಹಾಗೂ ಟೀಶರ್ಟ್ ಗಳನ್ನು ಉಚಿತವಾಗಿ ವಿತರಿಸಲಾಯಿತು. ಕಾರ್ಯಕ್ರಮದಲ್ಲಿಸಂಪಾಜೆ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ಸೋಮಶೇಖರ ಕೊಯಿಂಗಾಜೆ, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ನಿವೃತ್ತ ಉಪ ನಿರ್ದೇಶಕ ಇಬ್ರಾಹಿಂ, ಶಾರದಾ ಅನುದಾನಿತ ಹಿರಿಯ ಪ್ರಾಥಮಿಕ ಶಾಲೆಯ ಅಧ್ಯಕ್ಷ ರಾಮಚಂದ್ರ ಕಲ್ಲುಗದ್ದೆ, ಎಸ್ .ಪಿ. ಲೋಕನಾಥ್ , ಸಜ್ಜನ ಪ್ರತಿಷ್ಠಾನ ಬೀಜದಕಟ್ಟೆ ಅಧ್ಯಕ್ಷ ಡಾ. ಉಮ್ಮರ್ ಬೀಜದಕಟ್ಟೆ, ಎಸ್ ಡಿಎಂಸಿ ಅಧ್ಯಕ್ಷೆ ಸೌಮ್ಯ ಸತ್ಯಜಿತ್ , ಮುಖ್ಯಶಿಕ್ಷಕ ಹನುಮಂತಪ್ಪ ಜಿ, ನಿವೃತ್ತ ಮುಖ್ಯಶಿಕ್ಷಕ ಯು.ಎಸ್ . ಚಿದಾನಂದ ಮಾಸ್ಟರ್ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿಅಶೀಫ್ ಶಿರೂರು, ಸಜ್ಜನ ಪ್ರತಿಷ್ಠಾನ ನಿರ್ದೇಶಕ ಶರೀಫ್ ಜಟ್ಟಿಪಳ್ಳ ಹಾಗೂ ಅಯ್ಯೂಬ್ ಗೂನಡ್ಕ, ಮರ್ಜೂಕ್ ಕಡೆಪಾಲ ಇದ್ದರು.
ಫೋಟೋ
23ಎಸ್ ಯುಎಲ್ -ಸಜ್ಜನ ಪ್ರತಿಷ್ಠಾನದಿಂದ ಆಕ್ಸಿಜನ್ ಸಿಲಿಂಡರ್ ವಿತರಣೆ ನಡೆಯಿತು.