ಶಿಗ್ಗಾವಿ ಬಂದ್ ಗೆ ಬೆಂಬಲ ನೀಡಲು ಮನವಿ

Contributed bysatyappanavarpm@gmail.com|Vijaya Karnataka
former cm basavaraj bommai appeals for support for shiggavi bandh
23ಎಸ್ .ಜಿ.ಎನ್ .1

ಹನುಮಾನ್ ದೇವಸ್ಥಾನಕ್ಕೆ ಭೇಟಿ ನೀಡಿ ದರ್ಶನ ಪಡೆದ ಬೊಮ್ಮಾಯಿ (ಕಿಕ್ಕರ್ )
ಶಿಗ್ಗಾವಿ ಬಂದ್ ಗೆ ಬೆಂಬಲ ನೀಡಲು ಮನವಿ (ಹೆಡ್ )

ವಿಕ ಸುದ್ದಿಲೋಕ ಶಿಗ್ಗಾವಿ

ಪಟ್ಟಣದ ಹನುಮಾನ್ ದೇವಸ್ಥಾನದಲ್ಲಿಅನ್ಯ ಕೋಮಿನ ವ್ಯಕ್ತಿ ಮೂತ್ರ ವಿಸರ್ಜನೆಗೈದು ಕೋಮು ಗಲಭೆ ಸೃಷ್ಟಿಸುವ ಕೆಲಸ ಮಾಡುತ್ತಿದ್ದು, ಪೊಲೀಸರು ಅವನ ವಿರುದ್ಧ ಗೂಂಡಾ ಕಾಯಿದೆಯಡಿ ಪ್ರಕರಣ ದಾಖಲಿಸಿ ಜಿಲ್ಲೆಯಿಂದ ಗಡಿಪಾರು ಮಾಡಬೇಕು. ಈ ಹಿನ್ನೆಲೆಯಲ್ಲಿಆ.26 ರಂದು ಕರೆ ನೀಡಿದ ಶಿಗ್ಗಾವಿ ಬಂದ್ ಗೆ ಎಲ್ಲಕೋಮಿನವರೂ ಬೆಂಬಲ ನೀಡಬೇಕು ಎಂದು ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಮನವಿ ಮಾಡಿದರು.

ಪಟ್ಟಣದ ಟ್ಯಾಕ್ಸಿ ಸ್ಟಾ್ಯಂಡ್ ಬಳಿ ಇರುವ ಹನುಮಾನ್ ದೇವಸ್ಥಾನದ ಪಾವಿತ್ರ್ಯತೆಗೆ ಧಕ್ಕೆಯುಂಟು ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಹನುಮಾನ್ ದೇವಸ್ಥಾನಕ್ಕೆ ಭಾನುವಾರ ಭೇಟಿ ನೀಡಿ ದರ್ಶನ ಪಡೆದು ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು,‘‘ಇದು ಅತ್ಯಂತ ಹೇಯ, ಕ್ಷಮಿಸಲಾರದ ಕೃತ್ಯ. ಹನುಮಾನ್ ದೇವಸ್ಥಾನ ರಸ್ತೆಗಿಂತಲೂ ಎತ್ತರದಲ್ಲಿದೆ. ಗೇಟ್ ಇದ್ದರೂ ತೆಗೆದು ಒಳಗೆ ಬಂದು ದೇವಸ್ಥಾನದಲ್ಲಿಮೂತ್ರ ವಿಸರ್ಜಿಸಿದ್ದು ಆತ ಕುಡಿದ ಮತ್ತಿನಲ್ಲಿದ್ದಾನೆ ಎಂದು ಅನಿಸಲ್ಲ. ಪ್ರಜ್ಞಾಪೂರ್ವಕವಾಗಿಯೇ ಮಾಡಿದ್ದಾನೆ. ಪೊಲೀಸರು ಈ ಪ್ರಕರಣ ತಿಳಿಗೊಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ಈ ಬಗ್ಗೆ ಗಂಭೀರ ತನಿಖೆಯಾಗಬೇಕು’’ ಎಂದು ಆಗ್ರಹಿಸಿದರು.

ಶಾಂತಿ ಕದಡುವ ಕೆಲಸ :

‘‘ಶಿಗ್ಗಾವಿಯಲ್ಲಿಈ ಘಟನೆ ನಡೆದ ತಕ್ಷಣ ಟ್ಯಾಕ್ಸಿ ಸ್ಟಾ್ಯಂಡ್ ಹುಡುಗರು ಜಾಗೃತರಾಗಿ ಪೊಲೀಸರಿಗೆ ದೂರು ಕೊಟ್ಟಿದ್ದಕ್ಕೆ ಪೊಲೀಸರು ತಕ್ಷಣ ಕ್ರಮಕೈಗೊಂಡಿದ್ದಾರೆ. ಅವನು ಹಾನಗಲ್ ತಾಲೂಕಿನ ಆಡೂರಿನವನು ಅವನಿಗೆ ಶಿಗ್ಗಾವಿಯಲ್ಲಿಪಟ್ಟಾ ಕೊಟ್ಟಿದ್ದಾರೆ. ಅದಕ್ಕೆ ಅವನು ಶಾಸಕರಿಗೆ ತನ್ನ ರಿಟರ್ನ್ ಗಿಫ್ಟ್ ಕೊಟ್ಟಿದ್ದೇನೆ ಅಂತ ಹೇಳಿದ್ದಾನೆ. ಆ ರೀತಿ ಹೇಳಲು ಅವನಿಗೆ ಪ್ರಜ್ಞೆ ಇಲ್ಲದೇ ಹೇಳುತ್ತಾನಾ? ಶಿಗ್ಗಾವಿ -ಸವಣೂರಿನಲ್ಲಿ 20ವರ್ಷದಲ್ಲಿಯಾವುದೇ ಕೋಮು ಸಂಘರ್ಷ ಇಲ್ಲದೇ ಶಾಂತಿ ಕಾಪಾಡುವ ಕೆಲಸ ಮಾಡಿದ್ದೇವೆ. ಈಗಾಗಲೇ ಟ್ಯಾಕ್ಸಿ ಸ್ಟಾ್ಯಂಡ್ ನವರು ಮತ್ತು ಪ್ರಮೋದ್ ಮುತಾಲಿಕ ಬಂದ್ ಕರೆ ನೀಡಿದ್ದಾರೆ. ಅವರಿಗೆ ನಮ್ಮ ಬೆಂಬಲ ಇದೆ. ಯಾವುದೇ ಕೋಮಿನ ವಿರುದ್ಧ ಹಬ್ಬದ ವಿರುದ್ಧ ನಮ್ಮ ಬಂದ್ ಇಲ್ಲ. ವ್ಯಾಪಾರಸ್ಥರು ಸ್ವ ಪ್ರೇರಣೆಯಿಂದ ಬಂದ್ ಗೆ ಬೆಂಬಲ ನೀಡಿ. ನಾವು ಯಾರಿಗೂ ಒತ್ತಡ ಹೇರಿ ಬಂದ್ ಮಾಡುವುದಿಲ್ಲ. ಹಿಂಸಾಚಾರ, ಕೋಮು ಗಲಬೆ ಆಗಬಾರದು ಎಂದರೆ ಎಲ್ಲಕೋಮಿನವರು ಬಂದ್ ಗೆ ಬೆಂಬಲ ನೀಡಬೇಕು’’ ಎಂದು ಮನವಿ ಮಾಡಿದರು.

ನರಹರಿ ಕಟ್ಟಿ, ಶಿವಾನಂದ ಮ್ಯಾಗೇರಿ, ಶಿವಪ್ರಸಾದ ಸುರಗಿಮಠ, ಶ್ರೀಕಾಂತ ಬುಳ್ಳಕ್ಕನವರ, ಸಂಜನಾ ರಾಯ್ಕರ ಸೇರಿದಂತೆ ಟ್ಯಾಕ್ಸಿ ಸ್ಟಾಂಡ್ ಪದಾಧಿಕಾರಿಗಳು ಇದ್ದರು.

ಪೋಟೋ ಪೈಲ್ ನೇಮ 23ಎಸ್ .ಜಿ.ಎನ್ .1

ಶಿಗ್ಗಾವಿ ಹನುಮಾನ್ ದೇವಸ್ಥಾನಕ್ಕೆ ಮಾಜಿ ಸಿಎಂ, ಸಂಸದ ಬಸವರಾಜ ಬೊಮ್ಮಾಯಿ ಭೇಟಿ ನೀಡಿ ದೇವರ ದರ್ಶನ ಪಡೆದರು.