ನಾಗರ ಪಂಚಮಿ ಹಬ್ಬದ ನಿಮಿತ್ತ ಕಮಲನಗರ ಪಟ್ಟಣದ ಅಲ್ಲಮಪ್ರಭು ವೃತ್ತದಲ್ಲಿಸಂಜೀವಿನಿ ಒಕ್ಕೂಟದಿಮದ ಗುರುವಾರ ಆಯೋಜಿಸಿದ್ದ ಮಾಸಿಕ ಸಂತೆ ಕಾರ್ಯಕ್ರಮದಲ್ಲಿವಸ್ತು ಪ್ರದರ್ಶನ ಮೇಳವನ್ನು ಕಾರ್ಯದರ್ಶಿ ವೈಶಾಲಿ ಸತೀಶ ಉದ್ಘಾಟಿಸಿದರು.ಮಾಸಿಕ ಸಂತೆ ಮೇಳ: ವಸ್ತುಗಳ ಮಾರಾಟ
ವಿಕ ಸುದ್ದಿಲೋಕ ಕಮಲನಗರ
ನಾಗರ ಪಂಚಮಿ ಹಬ್ಬದ ನಿಮಿತ್ತ ಪಟ್ಟಣದ ಅಲ್ಲಮಪ್ರಭು ವೃತ್ತದಲ್ಲಿಸಂಜೀವಿನಿ ಒಕ್ಕೂಟದಿಮದ ಗುರುವಾರ ಆಯೋಜಿಸಿದ್ದ ಮಾಸಿಕ ಸಂತೆ ಕಾರ್ಯಕ್ರಮದಲ್ಲಿಸಂಜೀವಿನಿ ಮಹಿಳಾ ಸ್ವಸಹಾಯ ಸಂಘದ ಸದಸ್ಯರು ಗೃಹೋಪಯೋಗಿ ವಸ್ತುಗಳ ಜತೆ ಸೀರೆ, ಬಳೆ, ಚಪ್ಪಲಿ, ತಹೆವಾರು ಸಣ್ಣಪುಟ್ಟ ವಸ್ತುಗಳನ್ನು ಮೇಳದಲ್ಲಿಸಾವಿರಾರು ರೂ. ವ್ಯಾಪಾರ ವಹಿವಾಟು ನಡೆಸಿದರು.
ಸಂಜೀವಿನಿ ತಾಲೂಕು ಒಕ್ಕೂಟದ ಕಾರ್ಯದರ್ಶಿ ವೈಶಾಲಿ ಸತೀಶ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಧ್ಯವರ್ತಿಗಳ ಹಾವಳಿ ತಪ್ಪಿಸುವ ಉದ್ದೇಶದಿಂದ ನ್ಯಾಯಯುತ ದರದಲ್ಲಿವಸ್ತುಗಳನ್ನು ಗ್ರಾಹಕರಿಗೆ ತಲುಪಿಸುವ ಉದ್ದೇಶ ಈ ಮೇಳೆ ಆಯೋಜಿಸಲಾಗಿದೆ. ಮನೆಯಲ್ಲಿಗೃಹೋಪಯೋಗಿ ವಸ್ತುಗಳನ್ನು ತಯಾರಿಸಲು ಬೇಕಾಗುವ ಕಚ್ಛಾವಸ್ತುಗಳನ್ನು ಮಾರುಕಟ್ಟೆಯಿಂದ ಖರೀದಿಸಲಾಗಿದೆ. ಇದರಿಂದ ವಸ್ತು ಪ್ರದರ್ಶನ ಮೇಳದಲ್ಲಿವಸ್ತುಗಳ ಮಾರಾಟ ಮಾಡಿ ನಿವ್ವಳ ಲಾಭ ಪಡೆಯಲು ಸಾಧ್ಯವಾಗಿದೆ ಎಂದರು.
ಕಾರ್ಯಕ್ರಮದ ವ್ಯವಸ್ಥಾಪಕಿ ಕವಿತಾ ಬಿರಾದಾರ ಮಾತನಾಡಿ, ಗುಣಮಟ್ಟದ ವಸ್ತುಗಳನ್ನು ಮಾಸಿಕ ಸಂತೆಯಲ್ಲಿಖರೀದಿಸಿ ಮಹಿಳೆಯರ ಸ್ವಾವಲಂಬಿ ಮತ್ತು ಸ್ವಾಭಿಮಾನಿ ಬದುಕಿಗೆ ಪ್ರೋತ್ಸಾಹಿಸಬೇಕು ಎಂದರು.
ಸಂಪನ್ಮೂಲ ವ್ಯಕ್ತಿಗಳಾದ ಸಂಗೀತಾ ಧಬಾಲೆ, ಪೂಜಾ ಹಾಗೂ ಮಹಿಳೆಯರು ಇದ್ದರು. ಈ ಸಂತೆಯಲ್ಲಿಒಟ್ಟು 22 ಸ್ವಸಹಾಯ ಸಂಘದ ಮಹಿಳೆಯರು ಪಾಲ್ಗೊಂಡು ಒಟ್ಟು 32,800ರೂ. ವಹಿವಾಟು ನಡೆಸಲಾಗಿದೆ.
* ಕೋಟ್
ಬೆಲ್ಲದ ಚಕ್ಕಿ ಮನೆಯಲ್ಲಿತಯಾರಿಸುವುದು ದೊಡ್ಡ ಕೆಲಸವಲ್ಲ. ಅದನ್ನು ಆಸಕ್ತಿಯಿಂದ ಖರೀದಿಸಿ ಪ್ರೋತ್ಸಾಹಿಸಬೇಕು. ಈ ಸಂತೆಯಲ್ಲಿ2000 ರೂ. ಚಕ್ಕಿ ಮಾರಾಟ ಮಾಡಿದ್ದೇನೆ.