ಪ್ರವಾದಿ ಮುಹಮ್ಮದ್ ಅವರ ಜನ್ಮ ದಿನಾಚರಣೆ ಅಂಗವಾಗಿ ಸಾರ್ವಜನಿಕ ಮೀಲಾದ್ ರಾರ ಯಲಿಯು ಆ.25ರಂದು ಸಂಜೆ ನಾಲ್ಕು ಗಂಟೆಗೆ ಕುದ್ರೋಳಿ ನಡುಪಳ್ಳಿಯಿಂದ ಬಂದರು ಝೀನತ್ ಭಕ್ ್ಷ ಕೇಂದ್ರ ಜುಮಾ ಮಸೀದಿಯಾಗಿ ಬಾವುಟಗುಡ್ಡೆ ಈದ್ಗಾ ಮಸೀದಿ ವರೆಗೆ ನಡೆಯಲಿದೆ.ರಾರ ಯಲಿಯನ್ನು ಜಿಲ್ಲಾಖಾಝಿ ನಾಸಿರ್ ಅಬ್ದುಲ್ ಹಯ್ ್ಯ ಶಿಹಾಬುದ್ದೀನ್ ತಂಙಳ್ ಉದ್ಘಾಟಿಸಲಿದ್ದಾರೆ. ಮೆರವಣಿಗೆಯಲ್ಲಿಭಾಗವಹಿಸುವವರಿಗೆ ಸಂಘಟಕರು ಕೆಲವು ನಿಯಮಗಳನ್ನು ಸೂಚಿಸಿದ್ದಾರೆ.
ಮೆರವಣಿಗೆಯಲ್ಲಿಶಿಸ್ತು ಕಾಪಾಡಬೇಕು. ಸ್ವಲಾತ್ (ಪ್ರವಾದಿ ಗುಣಗಾನ) ಅಲ್ಲದೆ ಬೇರಾವುದೇ ಘೋಷಣೆ ಕೂಗಬಾರದು. ಸಾರ್ವಜನಿಕರಿಗೆ ತೊಂದರೆಯಾಗದಂತೆ ಎಚ್ಚರಿಕೆ ವಹಿಸಬೇಕು. ಯಾವುದೇ ವಾಹನದಲ್ಲಿಡಿಜೆ ಬಳಸುವಂತಿಲ್ಲ. ಬೈಕ್ ಸವಾರಿಗೂ ಅವಕಾಶವಿಲ್ಲಎಂದು ಮಂಗಳೂರು ಸೋಶಿಯಲ್ ಸರ್ವಿಸ್ ನ ಅಧ್ಯಕ್ಷ ಕೆ.ಪಿ. ಅಬ್ದುಲ್ ರಶೀದ್ ತಿಳಿಸಿದ್ದಾರೆ.