ವಿಕ ಇಂಪ್ಯಾಕ್ಟ್ ಕೊನೆಗೂ ಕಬ್ಬಿಣದ ತಡೆಬೇಲಿ ರಚನೆ

Contributed byjohn.dsouza@timesofindia.com|Vijaya Karnataka
permanent iron barrier installation on national highway
ಕುಂದಾಪುರ: ಆ.19ರಂದು ರಾಷ್ಟ್ರೀಯ ಹೆದ್ದಾರಿಗೆ ಬೇಕಿದೆ ತಡೆಬೇಲಿ ಶೀರ್ಷಿಕೆಯಡಿ ವಿಕ ಪ್ರಕಟಿಸಿದ್ದ ವಿಶೇಷ ವರದಿಗೆ ಹೆದ್ದಾರಿ ಇಲಾಖೆ ಸ್ಪಂದಿಸಿದೆ. ಹಂಗಳೂರು ವಿನಾಯಕ ಆಟೋಸ್ಟಾತ್ರ್ಯಂಡ್ ಸಮೀಪ ಚತುಷ್ಪಥ ಹೆದ್ದಾರಿಯ ಬದಿಯಲ್ಲಿತಡೆಬೇಲಿ ಇಲ್ಲದೆ ಇರುವುದರಿಂದ ಆಗುತ್ತಿರುವ ಪ್ರಾಣಾಪಾಯ ಹೆಚ್ಚುತ್ತಿರುವ ವರದಿ ಬೆಳಕು ಚೆಲ್ಲಿತ್ತು. ಸ್ಪಂದಿಸಿದ ಹೆದ್ದಾರಿ ಇಲಾಖಾಧಿಕಾರಿಗಳು ಸ್ಥಳಕ್ಕೆ ಆಗಮಿಸಿ ಪರಿಶೀಲಿಸಿ ನಾಗರಿಕರು ಆಚೆ ಈಚೆ ದಾಟದಂತೆ ಟೇಪ್ ಅಳವಡಿಕೆ ಮಾಡಿದ್ದರು. ಇದು ತಾತ್ಕಾಲಿಕ ವ್ಯವಸ್ಥೆ ಆಗಿದ್ದು ಮುಂದಿನ ದಿನಗಳಲ್ಲಿಶಾಶ್ವತ ತಡೆಬೇಲಿ ರಚಿಸುವುದಾಗಿ ನೀಡಿದ ಭರವಸೆಯಂತೆ ಶನಿವಾರ ಕಬ್ಬಿಣದ ತಡೆಬೇಲಿ(ಗ್ರಿಲ್ ) ಅಳವಡಿಸಿದ್ದಾರೆ.

ಕೋಟ್ :
ನಾಗರಿಕರರು ದಾಟದಂತೆ ಟೇಪ್ ಅಳವಡಿಕೆ ಮಾಡಿದ್ದರು. ಇದು ಗಾಳಿಗೆ ಮಳೆಗೆ ನಿಲ್ಲದು. ಶಾಶ್ವತ ತಡೆಬೇಲಿ ರಚಿಸಬೇಕು ಎಂದು ಮನವಿ ಮಾಡಿಕೊಂಡಿದ್ದೆವು. ಸ್ಪಂದಿಸಿದ ಹೆದ್ದಾರಿ ಇಲಾಖೆ ಶನಿವಾರ ಟೇಪ್ ತೆರವುಗೊಳಿಸಿ ಮೊದಲಿನಂತೆ ಕಬ್ಬಿಣದ ತಡೆಬೇಲಿ ಅಳವಡಿಕೆ ಮಾಡಿದೆ

- ಮಹೇಶ್ ಶೆಣೈ ಸಾಮಾಜಿಕ ಕಾರ್ಯಕರ್ತ.

ಪೋಟೊ//23ಕೆ-ಎನ್ ಎಚ್ 1//. ಮೊದಲಿಗೆ ಟೇಪ್ ಅಳವಡಿಕೆ.

ಪೋಟೊ//23ಕೆ-ಎನ್ ಎಚ್ 2//. ಶನಿವಾರ ಶಾಶ್ವತ ಕಬ್ಬಿಣದ ತಡೆಬೇಲಿ ಅಳವಡಿಕೆ.

ಪೋಟೊ//23ಕೆ-ವಿಕೆ//. ವಿಕ ವಿಶೇಷ ವರದಿ.

‰‰‰‰‰‰