ನಿಧನ

Contributed bychannamadegowda21@gmail.com|Vijaya Karnataka
priest m channayya 103 of shri channigarayaswamy temple passes away
ಶತಾಯುಷಿ ಎಂ.ಚನ್ನಯ್ಯ

ಪಾಂಡವಪುರ: ಚಿಕ್ಕಮರಳಿ ಗ್ರಾಮದ ಶ್ರೀಚನ್ನಿಗರಾಯಸ್ವಾಮಿ ದೇವಸ್ಥಾನದ ಪೂಜಾರಿ ಹಾಗೂ ಪಿಎಲ್ ಡಿ ಬ್ಯಾಂಕ್ ಮಾಜಿ ಉಪಾಧ್ಯಕ್ಷ ಎಂ.ಚನ್ನಯ್ಯ(103) ಶನಿವಾರ ಬೆಳಗ್ಗೆ ನಿಧನರಾದರು.
ಶತಾಯುಷಿಗಳಾಗಿದ್ದ ಪೂಜಾರಿ ಎಂ.ಚನ್ನಯ್ಯ ಅವರು ಪಿಎಲ್ ಡಿ ಬ್ಯಾಂಕ್ ನಿರ್ದೇಶಕರಾಗಿ ಆಯ್ಕೆಯಾಗಿ, ಪಿಎಲ್ ಡಿ ಬ್ಯಾಂಕ್ ಉಪಾಧ್ಯಕ್ಷರಾಗಿ, ಪ್ರಭಾರಿ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು. ಅಲ್ಲದೇ 16 ಕೂಟದ ದೊರೆಯಾದ ಶ್ರೀ ಚನ್ನಿಗರಾಯಸ್ವಾಮಿ ದೇವಸ್ಥಾನದ ಪ್ರಧಾನ ಪೂಜಾರಿಯಾಗಿದ್ದರು. ಸೊಸೆ ಜಿಪಂ ಮಾಜಿ ಸದಸ್ಯೆ ಜಿ.ಕೆ.ಕೋಮಲ ಸೇರಿದಂತೆ ಇಬ್ಬರು ಪುತ್ರರು, ಪುತ್ರಿಯರು ಇದ್ದಾರೆ. ಶ್ರೀಚನ್ನಿಗರಾಯಸ್ವಾಮಿ ದೇವಸ್ಥಾನದ ಆವರಣದಲ್ಲಿಶನಿವಾರ ಸಂಜೆ ಅಂತ್ಯಕ್ರಿಯೆ ನೆರವೇರಿತು.

=========

ಎಂಡಿವೈ22ಪಿಎನ್ ಡಿ06

ಎಂ.ಚನ್ನಯ್ಯ(103).