ವಿಕ ಸುದ್ದಿಲೋಕ ಶೃಂಗೇರಿತಾಲೂಕು ಬ್ರಾಹ್ಮಣ ಮಹಾಸಭೆಯು ನಾಲ್ಕು ದಶಕದಿಂದ ಹಲವಾರು ಕಾರ್ಯಕ್ರಮ ಹಾಕಿಕೊಂಡು ವಿಪ್ರ ಸಮಾಜದ ಸಂಘಟನೆಗೆ ಒತ್ತು ನೀಡುತ್ತಾ ಬಂದಿದೆ ಎಂದು ಮಹಾಸಭಾ ಅಧ್ಯಕ್ಷ ಬಿ.ಎಲ್ .ರವಿಕುಮಾರ್ ಹೇಳಿದರು.
ರಾಜಾನಗರದ ವಿದ್ಯಾಭಾರತಿ ಭವನದಲ್ಲಿಶನಿವಾರ ಏರ್ಪಡಿಸಿದ್ದ ವಾರ್ಷಿಕ ಸರ್ವ ಸದಸ್ಯರ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಹಿರಿಯರ ಪರಿಶ್ರಮ ಮತ್ತು ಸಲ್ಲಿಸಿದ ಸೇವೆಯಿಂದ ತಾಲೂಕು ಬ್ರಾಹ್ಮಣ ಮಹಾಸಭೆಯು ರಾಜ್ಯದಲ್ಲಿಅತ್ಯುತ್ತಮ ಸಂಘಟನೆ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಎರಡು ದಶಕದ ಹಿಂದೆ ಹುಲಗಾರು ಕುಟುಂಬದವರು ಮಹಾಸಭಾಕ್ಕೆ ದಾನವಾಗಿ ನೀಡಿದ ಭೂಮಿಯಲ್ಲಿಸದಸ್ಯರ ಸಹಕಾರದೊಂದಿಗೆ ವಿದ್ಯಾಭಾರತಿ ಭವನ ನಿರ್ಮಿಸಲಾಗಿದೆ. ಸಮಾಜದ ಬಂಧುಗಳಿಗೆ ಇದರ ಪ್ರಯೋಜನ ದೊರಕುವಂತೆ ಮಾಡಿ, ಬರುವ ಆದಾಯವನ್ನು ಸಾಮಾಜಿಕ, ಶೈಕ್ಷಣಿಕ, ಆರೋಗ್ಯ ಮುಂತಾದ ಕ್ಷೇತ್ರದಲ್ಲಿಅಗತ್ಯವಿರುವವರಿಗೆ ನೀಡುತ್ತಾ ಬರಲಾಗಿದೆ. ದಾನಿಗಳ ಸಹಕಾರದಿಂದ ಪ್ರತಿ ವರ್ಷ ವಿದ್ಯಾನಿಧಿ ಯೋಜನೆಯಲ್ಲಿಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡಲಾಗುತ್ತಿದೆ ಎಂದರು.