ನಗರದ ಸರ್ ಎಂ.ವಿಶ್ವೇಶ್ವರಯ್ಯ ಜಿಲ್ಲಾಕ್ರೀಡಾಂಗಣದಲ್ಲಿಆಗಸ್ಟ್ 15ರ ಶನಿವಾರ 80ನೇ ಸ್ವಾತಂತ್ರ್ಯೋತ್ಸವ ಆಚರಣೆಯನ್ನು ಹಮ್ಮಿಕೊಂಡಿದ್ದು, ಸಕಲ ಸಿದ್ಧತೆಗಳು ಪೂರ್ಣಗೊಂಡಿವೆ.ಜಿಲ್ಲಾಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ಧ್ವಜಾರೋಹಣ ನೆರವೇರಿಸಲಿದ್ದು, ಶಾಸಕ ಕೊತ್ತೂರು ಮಂಜುನಾಥ್ ಅಧ್ಯಕ್ಷತೆ ವಹಿಸಲಿದ್ದಾರೆ. ಕಾರ್ಯಕ್ರಮದಲ್ಲಿಸಂಸದ ಎಂ.ಮಲ್ಲೇಶ್ ಬಾಬು, ಶಾಸಕರಾದ ಎಸ್ .ಎನ್ .ನಾರಾಯಣಸ್ವಾಮಿ, ಡಾ.ರೂಪಕಲಾ ಎಂ.ಶಶಿಧರ್ , ಕೆ.ವೈ.ನಂಜೇಗೌಡ, ಜಿ.ಕೆ.ವೆಂಕಟಶಿವಾರೆಡ್ಡಿ, ಸಮೃದ್ಧಿ ಮಂಜುನಾಥ್ , ಎಂಎಲ್ಸಿಗಳಾದ ನಸೀರ್ ಅಹಮದ್ , ಎಂ.ಎಲ್ .ಅನಿಲ್ ಕುಮಾರ್ , ಡಿ.ಟಿ.ಶ್ರೀನಿವಾಸ್ , ಚಿದಾನಂದಗೌಡ, ಜಿಲ್ಲಾಧಿಕಾರಿ ಎಂ.ಆರ್ .ರವಿಕುಮಾರ್ , ಜಿಲ್ಲಾಪಂಚಾಯಿತಿ ಸಿಇಒ ಪ್ರವೀಣ್ ಪಿ.ಬಾಗೇವಾಡಿ, ಜಿಲ್ಲಾಪೊಲೀಸ್ ವರಿಷ್ಠಾಧಿಕಾರಿ ಕನ್ನಿಕಾ ಸಿಕ್ರಿವಾಲ್ ಭಾಗವಹಿಸಲಿದ್ದಾರೆ.
ಸ್ವಾತಂತ್ರ್ಯೋತ್ಸವದ ಅಂಗವಾಗಿ ಈಗಾಗಲೇ ಎಲ್ಲಸರಕಾರಿ ಕಟ್ಟಡಗಳು, ಕಚೇರಿಗಳು, ಪೊಲೀಸ್ ಠಾಣೆಗಳಿಗೆ ವಿದ್ಯುತ್ ದೀಪಾಲಂಕಾರ ಮಾಡಲಾಗಿದ್ದು, ಆಕರ್ಷಿತವಾಗಿವೆ. ಅಲ್ಲದೆ ಜಿಲ್ಲಾಕ್ರೀಡಾಂಗಣದ ಮುಖ್ಯ ರಸ್ತೆ ಸೇರಿದಂತೆ ವಿವಿಧ ರಸ್ತೆಗಳನ್ನು ಈಗಾಗಲೇ ಸ್ವಚ್ಛಗೊಳಿಸಲಾಗಿದೆ.
9 ಗಂಟೆಗೆ ಧ್ವಜಾರೋಹಣ: ಶುಕ್ರವಾರ ಬೆಳಗ್ಗೆ 8.45ಕ್ಕೆ ಸರ್ .ಎಂ.ವಿಶ್ವೇಶ್ವರಯ್ಯ ಜಿಲ್ಲಾಕ್ರೀಡಾಂಗಣಕ್ಕೆ ಗಣ್ಯರ ಆಗಮನ, 8.40ಕ್ಕೆ ವಂದೇಮಾತರಂ ಗೀತೆ, 9 ಗಂಟೆಗೆ ಜಿಲ್ಲಾಉಸ್ತುವಾರಿ ಸಚಿವ ರಾಮಲಿಂಗಾರೆಡ್ಡಿ ರಾಷ್ಟ್ರ ಧ್ವಜಾರೋಹಣ ನರೆವೇರಿಸುವರು. ರಾಷ್ಟ್ರಗೀತೆ, ನಾಡಗೀತೆ ಬಳಿಕ ವಿವಿಧ ದಳಗಳ ಪರಿವೀಕ್ಷಣೆ ಮಾಡಿ, ಗೌರವ ರಕ್ಷೆ ಸ್ವೀಕರಿಸುವರು. ನಂತರ ಸ್ವಾತಂತ್ರತ್ರ್ಯ ಸಂದೇಶ ನೀಡುವರು. ಶಾಲಾ ಮಕ್ಕಳಿಂದ ನಾನಾ ಸಾಂಸ್ಕೃತಿಕ ಕಾರ್ಯಕ್ರಮಗಳು , ಪ್ರಶಸ್ತಿ ವಿತರಣೆ ಕಾರ್ಯಕ್ರಮ ಜರುಗಲಿದೆ.
ಆ ನಂತರ ಸಂಜೆ 5 ಗಂಟೆಗೆ ಟಿ.ಚನ್ನಯ್ಯ ರಂಗಮಂದಿರದ ಸಭಾ ಭವನದಲ್ಲಿಶಾಲಾ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಲಿವೆ ಎಂದು ಜಿಲ್ಲಾಡಳಿತವು ಪ್ರಕಟಣೆಯಲ್ಲಿತಿಳಿಸಿದೆ.
=
ಫೋಟೋಕ್ಯಾಪ್ಷನ್ : 80ನೇ ಸ್ವಾತಂತ್ರ್ಯೋತ್ಸವ ಅಂಗವಾಗಿ ಕೆಎಸ್ ಆರ್ ಟಿಸಿ ಬಸ್ ನಿಲ್ದಾಣ ವೃತ್ತದಿಂದ ಅಂತರಗಂಗೆ ಕಡೆಗೆ ಬರುವ ರಸ್ತೆಗೆ ಹಾಕಿರುವ ಸ್ವಾಗತ ಕಮಾನು. (14ಕೆಪಿಎಚ್ 4)
ಸರ್ .ಎಂ.ವಿ. ಜಿಲ್ಲಾಕ್ರೀಡಾಂಗಣದಲ್ಲಿಸಕಲ ಸಿದ್ಧತೆಗಳನ್ನು ನಡೆಸಿರುವುದು. (14ಕೆಪಿಎಚ್ 5)