ಕುಂದಾಪುರ: ಇಲ್ಲಿನ ನಿವಾಸಿ ಲಕ್ಷಿತ್ರ್ಮೕನಾರಾಯಣ ಉಪಾಧ್ಯಾಯ ಅವರ ತೋಟದಲ್ಲಿಅಪರೂಪದ ಸಹ್ಯಾದ್ರಿ ಪಕ್ಷಿ ರೆಕ್ಕೆ ಅಥವಾ ದಕ್ಷಿಣಪಕ್ಷಿ ರೆಕ್ಕೆ (ಟ್ರಾಯ್ಡ್ ್ಸ ಮಿನೋಸ್ ) ಹೆಸರಿನ ಚಿಟ್ಟೆ ಪತ್ತೆಯಾಗಿದೆ.
ಇದು ಕರ್ನಾಟಕದ ರಾಜ್ಯ ಚಿಟ್ಟೆ ಎಂದು ಗುರುತಿಸಿಕೊಂಡಿದೆ. ಚಿಟ್ಟೆ ಜಾತಿಯಲ್ಲಿಇದು ಎರಡನೇ ಅತಿದೊಡ್ಡ ಚಿಟ್ಟೆ. ಮೊದಲನೆಯದು ಹಿಮಾಲಯನ್ ಪ್ರದೇಶದ ಗೋಲ್ಡನ್ ಬರ್ಡ್ ವಿಂಗ್ (ಟ್ರಾಯ್ಡ್ ್ಸ ಏಕಸ್ ). ರೆಕ್ಕೆಗಳು ಸುಮಾರು 140-199 ಸೆಂ.ಮೀ. ಎತ್ತರವಿದೆ. ಇವು ನೊಣಗಳನ್ನು ತಿನ್ನುತ್ತವೆ. ಇದರ ಮರಿಹುಳುಗಳು ವಿಷಕಾರಿ ಸಸ್ಯಗಳ ಎಲೆಗಳನ್ನು ತಿನ್ನುತ್ತವೆ ಮತ್ತು ಪಕ್ಷಿಗಳಂತಹ ಹಸಿದ ಪ್ರಾಣಿಗಳಿಂದ ದೂರವಿರಲು ತಮ್ಮ ದೇಹದಲ್ಲಿವಿಷವನ್ನು ಸಂಗ್ರಹಿಸುತ್ತವೆ ಎಂದು ಚಿಟ್ಟೆ ಅಧ್ಯಯನಕಾರ ವಿ.ಎಲ್ .ಉಪಾಧ್ಯಾಯ ತಿಳಿಸಿದ್ದಾರೆ.ಪೋಟೊ//8ಕೆ-ಸಿಎಚ್ ಟಿ1, 2//. ಕುಂದಾಪುರದ ಲಕ್ಷಿತ್ರ್ಮೕನಾರಾಯಣ ಉಪಾಧ್ಯಾಯ ಅವರ ತೋಟದಲ್ಲಿಕಂಡುಬಂದ ಟ್ರಾಯ್ಡ್ ಮಿನೋಸ್ (ಸಹ್ಯಾದ್ರಿಪಕ್ಷಿ ರೆಕ್ಕೆ ಚಿಟ್ಟೆ).