ತಾಲೂಕಿನ ಪ್ರಸಿದ್ಧ ಪುಣ್ಯ ಕ್ಷೇತ್ರ ಭೈರಸಂದ್ರದ ಹದ್ದಿನಕಲ್ಲುಹನುಮಂತರಾಯಸ್ವಾಮಿ ಕ್ಷೇತ್ರಕ್ಕೆ ಆದಿಚುಂಚನಗಿರಿ ಮಹಾಸಂಸ್ಥಾನದ ಪೀಠಾಧ್ಯಕ್ಷ ಡಾ. ನಿರ್ಮಲಾನಂದನಾಥ ಸ್ವಾಮೀಜಿ ಅವರು ಆ.15ರಂದು ಚಾರಣ ಕೈಗೊಳ್ಳಲಿದ್ದಾರೆ ಎಂದು ಆದಿಚುಂಚನಗಿರಿ ನಾಗಮಂಗಲ ಶಾಖಾ ಮಠದ ಸತ್ಕೀರ್ತಿನಾಥ ಸ್ವಾಮೀಜಿ ಹೇಳಿದರು.
ತಾಲೂಕಿನ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆ ಸಭಾಂಗಣದಲ್ಲಿನಡೆದ ಚಾರಣ ಕಾರ್ಯಕ್ರಮದ ಪೂರ್ವಭಾವಿ ಸಭೆಯಲ್ಲಿಮಾತನಾಡಿ, ‘‘ನಿರ್ಮಲಾನಂದನಾಥ ಸ್ವಾಮೀಜಿ ಅವರ ಹದ್ದಿನಕಲ್ಲುಬೆಟ್ಟ ಹತ್ತುವ ನಿರ್ಧಾರ ಭಕ್ತ ವರ್ಗದಲ್ಲಿಹೊಸ ಧಾರ್ಮಿಕ ಭಾವನೆ ಮೂಡಿಸಲಿದೆ. ಶ್ರೀಗಳ ಪಾದ ಸ್ಪರ್ಶದಿಂದ ಹದ್ದಿನಕಲ್ಲುಕ್ಷೇತ್ರದ ಅಭಿವೃದ್ಧಿಗೆ ಮತ್ತಷ್ಟು ಬಲ ದೊರೆಯಲಿದ್ದು, ಕ್ಷೇತ್ರ ಇನ್ನಷ್ಟು ಎತ್ತರಕ್ಕೆ ಬೆಳೆಯಲಿದೆ,’’ ಎಂದರು.
‘‘ಆ.15ರಂದು ಬೆಳಗ್ಗೆ 8ಕ್ಕೆ ನಡೆಯಲಿರುವ ಕಾರ್ಯಕ್ರಮದಲ್ಲಿಸ್ವಾಮೀಜಿ ಅವರಿಗೆ ಭೈರನಹಳ್ಳಿಗೆ ಆಹ್ವಾನಿಸಿ ಗ್ರಾಮಸ್ಥರಿಂದ ಪೂರ್ಣಕುಂಭ ಸ್ವಾಗತ ನೀಡಲಾಗುವುದು. ಬಳಿಕ ಗ್ರಾಮದ ದೇವಾಲಯದಲ್ಲಿಪೂಜೆ ಸಲ್ಲಿಸಿ ಹದ್ದಿನಕಲ್ಲು ಕ್ಷೇತ್ರಕ್ಕೆ ತೆರಳುವರು. ಆಂಜನೇಯಸ್ವಾಮಿ ಉತ್ಸವ ಮೂರ್ತಿಯೊಂದಿಗೆ ಶ್ರೀಗಳು ಬೆಟ್ಟ ಹತ್ತಿ, ಬೆಟ್ಟದ ಮೇಲೆ ನೆಲೆಸಿರುವ ಹನುಮಂತರಾಯಸ್ವಾಮಿಗೆ ವಿಶೇಷ ಪೂಜೆ, ಅಭಿಷೇಕ ಹಾಗೂ ಧಾರ್ಮಿಕ ಕಾರ್ಯಕ್ರಮಗಳಲ್ಲಿಪಾಲ್ಗೊಳ್ಳಲಿದ್ದಾರೆ,’’ ಎಂದರು.
‘‘ಈ ಸಂದರ್ಭದಲ್ಲಿ ಸಾಮೂಹಿಕ ಹನುಮಾನ್ ಚಾಲೀಸಾ ಪಠಣ, ಪೂಜೆ ಹಾಗೂ ಅಭಿಷೇಕ ನಡೆಯಲಿದೆ. ಐತಿಹಾಸಿಕ ಸ್ಥಳವಾಗಿರುವ ಹಿನ್ನೆಲೆಯಲ್ಲಿಮತ್ತು ಅಂದು ಸ್ವಾತಂತ್ರ್ಯ ದಿನಾಚರಣೆ ಆಗಿರುವುದರಿಂದ ರಾಷ್ಟ್ರ ಧ್ವಜಾರೋಹಣ, ವಂದೇ ಮಾತರಂ, ರಾಷ್ಟ್ರಗೀತೆ ಹಾಗೂ ‘ಜಂಡಾ ಊಂಚಾ’ ಕಾರ್ಯಕ್ರಮಗಳನ್ನೂ ಆಯೋಜಿಸಲಾಗಿದೆ.
ಬೆಟ್ಟದ ಮೇಲ್ಭಾಗದಲ್ಲಿಸುಮಾರು 500 ಮಂದಿ ನಿಂತು ಕೊಳ್ಳಲು ಸ್ಥಳಾವಕಾಶ ಕಲ್ಪಿಸಲಾಗಿದ್ದು, ಸುಮಾರು 5 ಸಾವಿರ ಭಕ್ತರಿಗೆ ತಿಂಡಿ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗುತ್ತಿದೆ,’’ ಎಂದು ಮಾಹಿತಿ ನೀಡಿದರು.
ಸಭೆಯಲ್ಲಿಆದಿಚುಂಚನಗಿರಿ ಆಸ್ಪತ್ರೆಯ ಸ್ಥಾನಿಕ ವೈದ್ಯಾಧಿಧಿಕಾರಿ ಡಾ.ರವಿ, ಆಸ್ಪತ್ರೆಯ ಸಾರ್ವಜನಿಕ ಸಂಪರ್ಕಾಧಿಧಿಕಾರಿ ಧರ್ಮೇಂದ್ರ, ಮುಖಂಡರಾದ ತಿಮ್ಮರಾಯಿಗೌಡ, ಸಮಾಜ ಸೇವಕ ಗೌರೀಶ್ , ಹರೀಶ್ , ಹನುಮಂತು, ಎಸ್ ಐ ರವಿಕುಮಾರ್ , ಪದ್ಮನಾಭ, ಯಾಸೀನ್ , ನೀಲಾಮೂರ್ತಿ, ಪಿ.ಜೆ ಜಯರಾಂ, ಪಾಳ್ಯ ರಘು, ಮಂಜೇಗೌಡ, ಶಿವಣ್ಣ, ವೆಂಕಟೇಶ್ ಸೇರಿದಂತೆ ದೇವಾಲಯ ಸಮಿತಿ ಸದಸ್ಯರು, ಗ್ರಾಮಸ್ಥರು ಹಾಗೂ ಭಕ್ತರು ಭಾಗವಹಿಸಿ ಕಾರ್ಯಕ್ರಮದ ಸಿದ್ಧತೆಗಳ ಕುರಿತು ಸಲಹೆ-ಸೂಚನೆ ನೀಡಿದರು.
ಚಿತ್ರ ಎಂಡಿವೈ 12-1: ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಅವರ ಹದ್ದಿನಕಲ್ಲುಹನುಮಂತರಾಯಸ್ವಾಮಿ ಕ್ಷೇತ್ರದ ಚಾರಣ ಸಂಬಂಧ ಬಿ.ಜಿ.ನಗರದ ಆದಿಚುಂಚನಗಿರಿ ಆಸ್ಪತ್ರೆಯ ಸಭಾಂಗಣದಲ್ಲಿಶ್ರೀಮಠದ ಸತ್ಕೀರ್ತಿನಾಥ ಸ್ವಾಮೀಜಿ ಅವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಭೆ ನಡೆಯಿತು.