ವಿಕ ಸುದ್ದಿಲೋಕ ಮರಿಯಮ್ಮನಹಳ್ಳಿಹೋಬಳಿಯ ಮಾಗಾಣಿ ಪ್ರದೇಶ ವ್ಯಾಪ್ತಿಯಲ್ಲಿಭತ್ತದ ನಾಟಿ ಜೋರಾಗಿದೆ.
ಡಣನಾಯಕನ ಕೆರೆ, ಚಿಲಕನಹಟ್ಟಿ, ಹಾರುವನಹಳ್ಳಿ, ಹನುಮನಹಳ್ಳಿ, ನಂದಿಬಂಡಿ, ಅಯ್ಯನಹಳ್ಳಿ, ವೆಂಕಟಾಪುರ ಸುತ್ತಲಿನ ಊರುಗಳಲ್ಲಿಕಳೆದ ವಾರದಿಂದ ಭತ್ತದ ನಾಟಿಯಲ್ಲಿರೈತರು ಉತ್ಸಾಹದಿಂದ ತೊಡಗಿಸಿಕೊಂಡಿದ್ದಾರೆ. ಭತ್ತದ ಸಸಿಗಳನ್ನು ಕಿತ್ತು ನಾಟಿ ಮಾಡಲು ಎಕರೆಗೆ 4,000 ರೂ. ವೆಚ್ಚ ತಗುಲುತ್ತಿದೆ. ಕೂಲಿ ಕಾರ್ಮಿಕರ ಕೊರತೆಯೂ ಇದೆ. ಯಂತ್ರ ಬಾಡಿಗೆ, ರಸಗೊಬ್ಬರದ ವೆಚ್ಚ ವನ್ನೂ ಭರಿಸಬೇಕಿದೆ. ಆದರೆ ಫಸಲು ಕೊಯ್ಲುಬರುವಾಗ ಉತ್ತಮ ಬೆಲೆ ಸಿಕ್ಕರೆ ಮಾತ್ರ ರೈತರ ಶ್ರಮ ಸಾರ್ಥಕ ಎನ್ನುತ್ತಾರೆ ಮರಿಯಮ್ಮನಹಳ್ಳಿ ತಾಂಡಾದ ರೈತ ತರುಣ್ .
...............
14 ಮಮಹಳ್ಳಿ 1:
ಮರಿಯಮ್ಮನಹಳ್ಳಿ ಸಮೀಪದ ಡಣನಾಯಕನ ಕೆರೆ ಮಾಗಾಣಿ ವ್ಯಾಪ್ತಿಯ ಜಮೀನಿನಲ್ಲಿಭತ್ತ ನಾಟಿಯಲ್ಲಿತೊಡಗಿದ್ದ ರೈತರು.