ವಿದ್ಯಾಗಿರಿಯ 17ನೇ ಕ್ರಾಸ್ ನ ದೇವಸ್ಥಾನದ 28ನೇ ವಾರ್ಷಿಕೋತ್ಸವದ ನಿಮಿತ್ತ ಬೆಳಗ್ಗೆ 7 ಗಂಟೆಗೆ ದೇವಿ ಮೂರ್ತಿಗೆ ರುದ್ರಾಭಿಷೇಕ, ಪಲ್ಲಕ್ಕಿ ಉತ್ಸವ, ಕುಂಭ ಮೇಳ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವ ಆಚರಣೆ ನಡೆಯಿತು. ದಾನಿಗಳ ಸತ್ಕಾರ ಹಾಗೂ ನಾನಾ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಣೆ ಸಮಾರಂಭದ ಸಾನ್ನಿಧ್ಯವನ್ನು ಗುಳೇದಗುಡ್ಡದ ಮರಡಿಮಠದ ಅಭಿನವ ಕಾಡಸಿದ್ದೇಶ್ವರ ಶಿವಾಚಾರ್ಯರು ವಹಿಸಿದ್ದರು. ಮಧ್ಯಾಹ್ನ ಅನ್ನ ಸಂತರ್ಪಣೆಯಲ್ಲಿಸಾವಿರಾರು ಜನ ಪ್ರಸಾದ ಸ್ವೀಕರಿಸಿದರು.
ಸಂಜೆ ಶುಭದಾ ದೇಶಪಾಂಡೆ ನೇತೃತ್ವದ ನಟರಾಜ ನೃತ್ಯ ನಿಕೇತನ ತಂಡದ ಸದಸ್ಯರು ಭರತನಾಟ್ಯ ಪ್ರದರ್ಶಿಸಿದರು. ಶಿಕ್ಷಕ ಮಹಾದೇವ ಸತ್ತಿಗೇರಿ, ಕಲಾವಿದ ಮಹಾಂತೇಶ ಹಡಪದ ಹಾಸ್ಯ ಸಂಜೆ ಕಾರ್ಯಕ್ರಮ ನಡೆಸಿಕೊಟ್ಟರು. ಮಕ್ಕಳು ನೃತ್ಯ, ಗಾಯನ ಕಾರ್ಯಕ್ರಮದಲ್ಲಿಭಾಗವಹಿಸಿ ಗಮನ ಸೆಳೆದರು.
----
ಕೆಂಚಮ್ಮದೇವಿ-ಬಿಜಿಕೆ-13
ಬಾಗಲಕೋಟೆಯ ಕೆಂಚಮ್ಮದೇವಿ ದೇವಸ್ಥಾನದಲ್ಲಿಗುರುವಾರ ಜಾತ್ರೆ ನಿಮಿತ್ತ ಅಲಂಕೃತ ದೇವಿ ಮೂರ್ತಿ.