ಶ್ರಾವಣ

Contributed byMANJUNATH SWAMY|Vijaya Karnataka
shravana the auspicious month for weather agriculture and holy rituals
ಚಿತ್ರ ಬಳಸಿ

-
ಪುಣ್ಯ ಮಾಸ ಮತ್ತೆ ಬಂದಿದೆ

ಶ್ರಾವಣಮಾಸ ಆರಂಭವಾಗಿದೆ. ‘ಶ್ರಾವಣ ಬಂತು ಕಾಡಿಗೆ ಬಂತು ನಾಡಿಗೆ ಬಂತು ಬೀಡಿಗೆ’ ಎನ್ನುವ ವರಕವಿ ದ.ರಾ. ಬೇಂದ್ರೆಯವರ ಕವಿತೆಯ ಸಾಲಿನಂತೆ ಕಾಡು ನಾಡು ಬೀಡಿಗೆಲ್ಲಮತ್ತೆ ಶ್ರಾವಣದ ಆಗಮನವಾಗಿದೆ. ಆಷಾಢ ಕಳೆದು ಬರುವ ಶ್ರಾವಣವು ನಮ್ಮ ರೈತರಿಗೂ ಕೂಡ ಸಂತಸದ ತಿಂಗಳಾಗಿರುತ್ತದೆ.

ಏಕೆಂದರೆ ರೈತರು ತಮ್ಮ ಹೊಲ ಗದ್ದೆಗಳಲ್ಲಿಉತ್ತಿ ಬಿತ್ತಿ ಮಾಡುವ ಕೃಷಿ ಕಾರ್ಯಗಳನ್ನೆಲ್ಲಮಾಡಿ ಮುಗಿಸಿರುತ್ತಾರೆ. ಆಷಾಢದಲ್ಲಿಇರುವಷ್ಟು ದುಡಿಮೆ, ಶ್ರಮ ಈಗ ಇರುವುದಿಲ್ಲ. ಕಳೆದ ತಿಂಗಳಲ್ಲಿಅವರು ಎಷ್ಟು ಹೈರಾಣವಾಗಿರುತ್ತಾರೆ ಎಂದರೆ, ಒಂದೆಡೆ ಜೋರಾಗಿ ಬೀಸುವ ಗಾಳಿ ಮತ್ತೊಂದೆಡೆ. ರಪರಪನೆ ಸುರಿಯುವ ಮೊದಲ ಮಳೆಯ ದೊಡ್ಡ ದೊಡ್ಡ ಹನಿಗಳ ಹೊಡೆತ. ಇದರ ಮಧ್ಯೆ ಒಂದೊಂದು ಸಲ ನೆತ್ತಿಯನ್ನು ಸುಡುವ ಬಿರುಬಿಸಿಲು, ಶಕೆ ಇವುಗಳ ಮಧ್ಯೆ ದುಡಿಯುವ ರೈತನಿಗೆ ಹೀಗೆ ದುಡಿಯುವುದಕ್ಕಿಂತಲೂ ಚಳಿ, ಗಾಳಿ ಮಳೆಗೆ ಹೈರಾಣವಾಗುವುದಕ್ಕಿಂತಲೂ ‘ಹೇಸಿ ನನ್ನ ಜೀವ ಹೆಣ್ಣಾಗಬಾರದಿತ್ತೆ? ಆಗ ಬೆಚ್ಚಗೆ ಒಲೆಯ ಮುಂದೆ ಕುಳಿತು ರೊಟ್ಟಿ ತಟ್ಟಬಹುದಾಗಿತ್ತು’ ಎಂದು ಆತನಿಗೆ ಅನಿಸುತ್ತಿರುತ್ತದಂತೆ. ಇಂತಹ ಹೈರಾಣಾಗಿ ಆಷಾಢ ಕಳೆದು ಬರುವ ಶ್ರಾವಣದಲ್ಲಿಈ ದುಡಿಮೆ, ಶ್ರಮ ಇರುವುದಿಲ್ಲ. ಮೇಲಾಗಿ ರೈತರು ದುಡಿದು ಭೂಮಿಯನ್ನು ಹದಗೊಳಿಸಿ ಬಿತ್ತಿದ ಬೆಳೆಗಳೆಲ್ಲಮಳೆಗೆ ಮೇಲೆದ್ದು ಹಸಿರನ್ನು ಚೆಲ್ಲುವದಿರುತ್ತದೆ.

ಇದು ಸಹಜವಾಗಿ ಆತನ ಮುಖದಲ್ಲಿಮಂದಹಾಸವನ್ನು ಬೀರುವಂತೆ ಮಾಡಿರುತ್ತದೆ. ಸತತವಾಗಿ ಮಳೆ ಸುರಿಯುವ ಕೃಷಿ ಚಟುವಟಿಕೆಗಳಿಗೆ ಕಡಿವಾಣ ಹಾಕುವ ಈ ಶ್ರಾವಣ ಮಾಸವನ್ನು ಸುಮ್ಮನೆ ಮನೆಯಲ್ಲಿಕುಳಿತು ವೃಥಾ ಕಾಲಹರಣ ಮಾಡದೇ ಸತ್ಕಥಾ ಶ್ರವಣ, ಪುರಾಣ-ಪ್ರವಚನ ಸತ್ಸಂಗಗಳಲ್ಲಿಕಾಲವನ್ನು ಕಳೆಯಬೇಕೆಂಬ ನಿಯಮವನ್ನು ಹಾಕಿಕೊಂಡು ರೈತರು ಈ ಶ್ರಾವಣ ಮಾಸವನ್ನು ಸದ್ವಿನಿಯೋಗ ಮಾಡಿಕೊಂಡುಬರುತ್ತಾರೆ ಮತ್ತು ಅನೇಕ ಧಾರ್ಮಿಕ ಆಚರಣೆಗಳಿಗಾಗಿ ಮೀಸಲಾಗಿರಿಸಿ ಅದನ್ನು ಪುಣ್ಯ ಮಾಸ (ತಿಂಗಳು)ವನ್ನಾಗಿ ಆಚರಿಸಿಕೊಂಡು ಬರುತ್ತಾರೆ. ಮತ್ತೆ ಇಂಥಾ ಶ್ರವಣದ ಶ್ರಾವಣ ಬಂದಿದೆ ಬನ್ನಿ ಮಳೆಯಲ್ಲಿಮೀಯುತ್ತ ಮಡಿಯಾಗಿ ಸ್ವಾಗತಿಸೋಣ.

- ಪೂಜ್ಯ ಶ್ರೀ ಡಾ.ಸಿದ್ಧ ತೋಟೇಂದ್ರ ಶಿವಾಚಾರ್ಯರು, ನಾಲವಾರ